‘ಚೀನ ಅತಿ ಭ್ರಷ್ಟಾಚಾರದಿಂದ ಸೋವಿಯತ್ ರೀತಿ ಕುಸಿಯಬಹುದು’
Team Udayavani, Nov 15, 2017, 7:22 PM IST
ಬೀಜಿಂಗ್ : ”ದೇಶದೊಳಗಿನ ಭ್ರಷ್ಟಾಚಾರವನ್ನು ತೊಡೆದು ಹಾಕುವ ಸಮರವನ್ನು ಚೀನ ತೀವ್ರಗೊಳಿಸಬೇಕು, ಇಲ್ಲದಿದ್ದರೆ ಸದ್ಯೋಭವಿಷ್ಯದಲ್ಲಿ ಸೋವಿಯತ್ ರೀತಿಯ ವಿಘಟನೆಯ ಕುಸಿತವನ್ನು ಕಾಣುವ ಅಪಾಯವಿದೆ” ಎಂದು ದೇಶದ ಎರಡನೇ ಅತೀ ಹಿರಿಯ ಭ್ರಷ್ಟಾಚಾರ-ಬಯಲು ಖ್ಯಾತಿಯ ನಾಯಕರೋರ್ವರು ಬುಧವಾರ ಸಂಪಾದಕೀಯ ಬರೆದಿದ್ದಾರೆ.
ಶಿಸ್ತು ಪರಿವೀಕ್ಷಣ ಕೇಂದ್ರೀಯ ಆಯೋಗದ ಉಪ ಕಾರ್ಯದರ್ಶಿಯಾಗಿದ್ದ ಯಾಂಗ್ ಕ್ಸಿಯೋಡು ಅವರನ್ನು ಕಳೆದ ತಿಂಗಳಲ್ಲಿ ಆಳುವ ಕಮ್ಯುನಿಸ್ಟ್ ಪಕ್ಷದ 25 ಅತೀ ಪ್ರಬಲ ಪಾಲಿಬ್ಯೂರೋದ ಓರ್ವ ಸದಸ್ಯನಾಗಿ ತೇರ್ಗಡೆ ಮಾಡಲಾಗಿತ್ತು. ‘ಚೀನ ತನ್ನಲ್ಲಿನ ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ವಿಫಲವಾದರೆ ದೇಶದ ಕೆಂಬಣ್ಣವೇ ಮುಂದೆ ಬೇರೆ ಬಣ್ಣಕ್ಕೆ ತಿರುಗಬಹುದು’ ಎಂದು ಯಾಂಗ್ ಕ್ಸಿಯೋಡು ಅವರು ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಹಿಂದಿನ ಆಡಳಿತೆಯ ವಿರುದ್ಧ ಅತ್ಯಂತ ಕಟು ಶಬ್ದಗಳಲ್ಲಿ ಟೀಕೆ ಮಾಡಿರುವ ಯಾಂಗ್ ಅವರು “ಹಿಂದಿನ ಆಡಳಿತೆಯ ಕಾಲದಲ್ಲಿ ಭ್ರಷ್ಟಾಚಾರವನ್ನು ಬೆಳೆಯಲು ಬಿಟ್ಟ ಕಾರಣ ಪಕ್ಷದ ನಾಯಕತ್ವವೇ ದುರ್ಬಲವಾಯಿತು; ವಿಚಕ್ಷಣೆಯಲ್ಲಿ ಅದು ಮಂದವಾಯಿತು ಮತ್ತು ಸಿದ್ಧಾಂತಗಳನ್ನು ಅಲಕ್ಷಿಸಿತು’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ.
“ಹಿಂದಿನ ಆಡಳಿತೆ ಬೆಳೆಯಲು ಬಿಟ್ಟ ಭ್ರಷ್ಟಾಚಾರ ಇಂದು ಪರ್ವತ ಪ್ರಮಾಣಕ್ಕೆ ಏರಿದೆ. ಇದನ್ನು ನಿಗ್ರಹಿಸದೇ ಹೋದರೆ ಸದ್ಯೋಭವಿಷ್ಯದಲ್ಲೇ ಚೀನದ ಕೆಂಬಣ್ಣ ಬೇರೆ ಬಣ್ಣಕ್ಕೆ ತಿರುಗುವುದು ನಿಶ್ಚಿತ’ ಎಂದು ಯಾಂಗ್ ಹೇಳಿದ್ದಾರೆ.
“ಚೀನದ ಜನರ ಮತ್ತು ಪಕ್ಷದ ಭವಿಷ್ಯ ಸೋವಿಯತ್ ಒಕ್ಕೂಟ ಮತ್ತು ಈಸ್ಟರ್ನ್ ಬ್ಲಾಕ್ ರೀತಿಯಲ್ಲೇ ಸಾಗಿ ಅಂತಿಮವಾಗಿ ಪತನವನ್ನು ಕಂಡೀತು” ಎಂದು ಯಾಂಗ್ ಹೇಳಿದ್ದಾರೆ.
‘ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅವರಂತಹ ಅನೇಕ ಅಧಿಕಾರಿಗಳು ಪಕ್ಷವು ದೀರ್ಘಕಾಲ ಬೆಳೆಸಿಕೊಂಡು ಬಂದ ನಂಬಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ; ಆದೆಂದರೆ ಜನರ ಮತ್ತು ಪಕ್ಷದ ಮೇಲಿನ ನಿಯಂತ್ರಣವನ್ನು ಮಿಂಚಿನ ಗತಿಯಲ್ಲಿ ಅಥವಾ ನಿಧಾನವಾಗಿ ಸಡಿಲಿಸುತ್ತಾ ಹೋದರೆ ದೇಶದಲ್ಲಿ ಕ್ಷೋಭೆ ತಾಂಡವವಾಡಿ ಅಂತಿಮವಾಗಿ ದೇಶ ಒಡೆದುಹೋದೀತು ಎಂಬುದಾಗಿದೆ.’
‘ಪಕ್ಷವು ತನ್ನ ಕೇಡರ್‌ಗಳಿಗೆ 1990ರ ದಶಕದ ಆದಿಯಲ್ಲಿ ಸೋವಿಯತ್ ಒಕ್ಕೂಟ ಏಕೆ ಕುಸಿದು ಹೋಳಾಗಿ ಹೋಯಿತು ಎಂಬುದನ್ನು ಅಧ್ಯಯನ ಮಾಡಲು ಸೂಚಿಸುತ್ತದೆ. ಆದರೆ ಚೀನ ತನ್ನಲ್ಲಿನ ಭಾರೀ ಭ್ರಷ್ಟಾಚಾರವನ್ನು ತೊಡೆದು ಹಾಕುವ ಸಮರವನ್ನು ಮೇಲ್ಮಟ್ಟಕ್ಕೆ ಏರಿಸದೆ ಹೋದರೆ ಮುಂದೆ ದೇಶವು ಒಡೆದು ಹೋಳಾಗುವುದು ನಿಶ್ಚಿತ’ ಎಂದು ಯಾಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.