ಬ್ರಹ್ಮಪುತ್ರಾ ಅಂಕಿ ಅಂಶ ಸದ್ಯಕ್ಕೆ ಭಾರತಕ್ಕೆ ನೀಡಲಾರೆ: ಚೀನ
Team Udayavani, Sep 12, 2017, 3:15 PM IST
ಬೀಜಿಂಗ್ : ಚೀನ ತಾನು ಸದ್ಯದ ಮಟ್ಟಿಗೆ ಬ್ರಹ್ಮಪುತ್ರಾ ನದಿ ಜಲಸಂಪನ್ಮೂಲ ಅಂಕಿ ಅಂಶಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಾರೆ; ಕಾರಣ ಟಿಬೆಟ್‌ನಲ್ಲಿರುವ ಬ್ರಹ್ಮಪುತ್ರಾ ಅಂಕಿ ಅಂಶ ಸಂಗ್ರಹ ಕೇಂದ್ರವನ್ನು ಮೇಲ್ಮಟ್ಟಕ್ಕೆ ಏರಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದೆ.
“ಬಹಳ ದೀರ್ಘ ಕಾಲದಿಂದ ನಾವು ಭಾರತದೊಂದಿಗೆ ನದಿ ಜಲಸಂಪನ್ಮೂಲ ವಿವರಗಳನ್ನು ಹಂಚಿಕೊಳ್ಳುವಲ್ಲಿ ಸಹಕರಿಸುತ್ತಾ ಬಂದಿದ್ದೇವೆ. ಆದರೆ ಈಗ ಜಲ ಸಂಪನ್ಮೂಲ ಸಂಗ್ರಹ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ನಡೆಯುತ್ತಿರುವುದರಿಂದ ಸದ್ಯಕ್ಕೆ ನಾವು ಯಾವುದೇ ಅಂಕಿ ಅಂಶಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಚೀನದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಮಾಧ್ಯಮಕ್ಕೆ ತಿಳಿಸಿದರು.
ಇದೇ ವೇಳೆ ಚೀನ ತಾನು ಭಾರತದೊಂದಿಗೆ ಸಿಕ್ಕಿಂ ನಲ್ಲಿನ ನಾಥು ಲಾ ಕಣಿವೆಯನ್ನು ಪುನಃ ತೆರೆಯುವ ನಿಟ್ಟಿನಲ್ಲಿ ಭಾರತದೊಂದಿಗೆ ಸಂಪರ್ಕದಲ್ಲಿರಲು ಸಿದ್ಧನಿದ್ದೇನೆ ಎಂದು ಹೇಳಿದೆ.
ಟಿಬೆಟ್‌ನಲ್ಲಿನ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ನಾಥು ಲಾ ಕಣಿವೆಯ ಮೂಲಕ ಕೈಗೊಳ್ಳುವ ಭಾರತೀಯ ಯಾತ್ರಿಕರಿಗೆ ಚೀನದ ಅನುಮತಿ ಅಗತ್ಯವಿದೆ. ಈ ವರ್ಷ ಜೂನ್‌ನಲ್ಲಿ ಭಾರತ – ಚೀನ ನಡುವೆ ಡೋಕ್‌ಲಾಂ ಗಡಿ ಬಿಕ್ಕಟ್ಟು ಉಂಟಾದ ಕಾರಣ, ಚೀನ ಭಾರತೀಯ ಯಾತ್ರಿಕರಿಗೆ ನಾಥು ಲಾ ಮಾರ್ಗವನ್ನು ತೆರೆದಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.