ದುರ್ಬುದ್ಧಿ ಬಿಡದ ಚೀನ : ಓಲ್ಡೀ, ಡೆಪ್ಸಾಂಗ್‌ನಲ್ಲಿ ನೆಲೆ ಬಲವರ್ಧನೆ
ಉಪಗ್ರಹ ಚಿತ್ರಗಳಲ್ಲಿ ಬೆತ್ತಲಾದ ಡ್ರ್ಯಾಗನ್
Team Udayavani, Jun 25, 2020, 9:38 AM IST
ಲಡಾಖ್‌ನಲ್ಲಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ, ಭಾರತೀಯ ಯೋಧರನ್ನು ಭೇಟಿ ಮಾಡಿದರು.
ಲಡಾಖ್: ಒಂದೆಡೆ ಸಭೆಯ ನಾಟಕ, ಮತ್ತೂಂದೆಡೆ ಯುದ್ಧ ಪ್ರಚೋದನೆ! ಚೀನವು ಪೂರ್ವ ಲಡಾಖ್‌ನ ಗಡಿಯಲ್ಲಿ ಮತ್ತೆ ಗೋಸುಂ ಬೆತನ ಪ್ರದರ್ಶಿಸಲು ಹೊರಟಿದೆ. ದೌಲತ್‌ಬಾಗ್ ಓಲ್ಡೀ ಮತ್ತು ಡೆಪ್ಸಾಂಗ್ ವಲಯಗಳಲ್ಲಿ ಮಿಲಿಟರಿ ಕೇಂದ್ರಗಳ ಬಲವರ್ಧನೆಗೆ ಸಂಚು ರೂಪಿಸಿದೆ. ಭಾರತ- ಚೀನ ಗಡಿರೇಖೆಯ ಮಾಲ್ಡೋದಲ್ಲಿ ನಡೆದ ಕಮಾಂಡರ್ ಮಟ್ಟದ ಮಾತುಕತೆಯ ಬೆನ್ನಲ್ಲೇ ಉಪಗ್ರಹ ಚಿತ್ರಗಳಲ್ಲಿ ಚೀನದ ವ್ಯಾಘ್ರ ಮುಖ ಬೆತ್ತಲಾಗಿದೆ. 2016ಕ್ಕಿಂತ ಮೊದಲೇ ಚೀನವು ದೌಲತ್‌ಬಾಗ್ ಓಲ್ಡಿಯಲ್ಲಿ ಪುಟ್ಟ ನೆಲೆ ಸ್ಥಾಪಿಸಿತ್ತು. ನಂತರ ಅದರ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಂಡಿರಲಿಲ್ಲ. ಆದರೆ, ಈಗ ಅಲ್ಲಿ ಕ್ಯಾಂಪ್ ನಿರ್ಮಾಣ ಮತ್ತು ವಾಹನಗಳ ಓಡಾಟವನ್ನು ತೀವ್ರಗೊಳಿಸಿದೆ. ಉಪಗ್ರಹ ತೆಗೆದಿರುವ ಚಿತ್ರಗಳಲ್ಲಿ ಈ ಎರಡು ಕಾಲಾವಧಿಯ ಬೆಳವ ಣಿಗೆಯ ಅಜಗಜಾಂತರ ದೃಶ್ಯಗಳು ಅತ್ಯಂತ ಸ್ಪಷ್ಟವಾಗಿವೆ. ಹಾಗೆಯೇ ಡೆಪ್ಸಾಂಗ್‌ನಲ್ಲೂ ಚೀನದ ಕುತಂತ್ರ ಹೆಜ್ಜೆಗಳನ್ನು ಉಪಗ್ರಹ ಚಿತ್ರಗಳು ಬಯಲುಮಾಡಿವೆ.
ನರವಾಣೆಯಿಂದ ಶಹಬ್ಟಾಶ್, ಮೆಚ್ಚುಗೆ ಪತ್ರ: ಪಾತಕಿ ಚೀನದ ಸೈನಿಕರನ್ನು ನಮ್ಮ ವೀರ ಯೋಧರು ಸದೆಬಡಿದ ಪೂರ್ವ ಲಡಾಖ್‌ನ ಗಡಿಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಬುಧವಾರ ಭೇಟಿ ನೀಡಿದ್ದರು. ಅಲ್ಲಿ ವೀರಯೋಧರ ಉತ್ಸಾಹ ಕುಂದಿರಲಿಲ್ಲ. ಅವರ ದಿಟ್ಟ ಸೇವೆ ಕಂಡ ನರವಾಣೆ ಅವರ ಹೆಮ್ಮೆಗೆ ಪಾರವೇ ಇರಲಿಲ್ಲ. ಸೇನಾ ಮುಖ್ಯಸ್ಥರ 2ನೇ ದಿನದ ಲಡಾಖ್ ಭೇಟಿ ಮುಂಚೂಣಿಯ ಪ್ರದೇಶಗಳಿಗೆ ಮೀಸಲಾಗಿತ್ತು. ಚೀನ ಪುಂಡಾಟ ನಡೆಸಿದ್ದ ಪ್ರದೇಶಗಳನ್ನು ಪರಿಶೀಲಿಸಿದ ನರವಾಣೆ, ಡ್ರ್ಯಾಗನ್ ಪಡೆಯ ಚಲನವಲನಗಳ ಬಗ್ಗೆ ಕಮಾಂಡರ್‌ಗಳಿಂದ ಮಾಹಿತಿ ಪಡೆದರು. ಚೀನ ಸೈನಿಕರೊಂದಿಗೆ ಹೋರಾಡಿದ ಎಲ್ಲ ವೀರಯೋಧರಿಗೂ ಮೆಚ್ಚುಗೆ ಪತ್ರಗಳನ್ನು ನೀಡಿ ನರವಾಣೆ ಬೆನ್ನು ತಟ್ಟಿದರು. “ಮುಂದೆಯೂ ಇದೇ ಕೆಚ್ಚೆದೆಯ ಹುರುಪು, ಉತ್ಸಾಹಗಳಿಂದ ಕೆಲಸ ಮಾಡಿ’ ಎಂದು ಸೂಚಿಸಿದ್ದಾರೆ.
ಚೀನದ ಹುಚ್ಚು ಹೇಳಿಕೆ
“ಲಡಾಖ್ ಗಡಿಯಲ್ಲಿನ ಸಂಘರ್ಷವು ಭಾರತದ ಕಡೆಯಿಂದ ಉಂಟಾಗಿದೆ’ ಎಂದು ಚೀನದ ರಕ್ಷಣಾ ಸಚಿವಾಲಯ ಬುಧವಾರ ಹುಚ್ಚು ಹೇಳಿಕೆ ಕೊಟ್ಟಿದೆ. “ಭಾರತದ ಈ ನಡೆ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದಗಳನ್ನು ಉಲ್ಲಂ ಸಿವೆ. ಇದು ಏಕಪಕ್ಷೀಯ ಪ್ರಚೋದನೆ’ ಎಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದೆ.
ಮುಂದುವರಿದ ಗಸ್ತು
ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕ ಮೇಲೆ ಮುಂಚೂಣಿಯ ಸ್ಥಳಗಳಲ್ಲಿ ಸಾವಿರಾರು ಸೈನಿಕರು ನಿಯೋಜನೆಗೊಂಡಿದ್ದಾರೆ. ಐಎಎಫ್ನ ಸುಖೋಯ್ 30 ಎಂಕೆಐ, ಜಾಗ್ವಾರ್, ಮಿರಾಜ್ 200 ವಿಮಾನಗಳು ಹಾಗೂ ಅಪಾಚೆ ಹೆಲಿಕಾಪ್ಟರ್‌ಗಳು ಈಗಾಗಲೇ ಲೇಹ್ ಮತ್ತು ಶ್ರೀನಗರ ಸೇರಿದಂತೆ ಹಲವು ವಾಯುನೆಲೆಗಳಲ್ಲಿ ಸಜ್ಜಾಗಿ ನಿಂತಿವೆ. ಸಭೆ ಮುಗಿದ ಕೂಡಲೇ ಏಕಾಏಕಿ ಇವನ್ನೆಲ್ಲ ಹಿಂತೆಗೆದುಕೊಳ್ಳುವುದು ಕಷ್ಟಸಾಧ್ಯ. ಅದರಲ್ಲೂ ಕುತಂತ್ರಿ ಚೀನವನ್ನು ಭಾರತ ಎಳ್ಳಷ್ಟೂ ನಂಬುವುದಿಲ್ಲ. ಮುಂದಿನ ಎರಡು ವಾರಗಳಲ್ಲಿ ಗ್ರೌಂಡ್ ಕಮಾಂಡರ್‌ಗಳ ಸಭೆ ನಡೆಸಿ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸೇನೆ ತಿಳಿಸಿದೆ. “ಅದರಲ್ಲೂ ಚೀನ ಫಿಂಗರ್ 4 ಮತ್ತು 8ರ ನಡುವೆ ಶಾಶ್ವತ ಬಂಕರ್, ವಾಹನ ಟ್ರ್ಯಾಕ್, ವೀಕ್ಷಣಾ ಪೋಸ್ಟ್‌ಗಳನ್ನು ನಿರ್ಮಿಸಿದೆ. ಇವನ್ನೆಲ್ಲ ತಕ್ಷಣವೇ ತೆರವುಗೊಳಿಸುವುದು ಕಠಿಣವಾದ ಕೆಲಸ’ ಎಂದು ಸೇನಾಧಿಕಾರಿಯೊಬ್ಬರು “ಹಿಂದೂಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.
ಲಡಾಖ್ ತಿಳಿಯಾಗಲು 2 ತಿಂಗಳು ಬೇಕು!
ಕಳೆದೆರಡು ದಿನಗಳಿಂದ ನಡೆಯುತ್ತಿರುವ ಉಭಯ ರಾಷ್ಟ್ರಗಳ ಕಮಾಂಡರ್ ಮಟ್ಟದ ಸಭೆ ಫಲಪ್ರದವಾದರೂ, ಲಡಾಖ್ ಸಹಜ ಸ್ಥಿತಿಗೆ ಮರಳಲು 2 ತಿಂಗಳು ಬೇಕಾಗಬಹುದು. ಘರ್ಷಣೆಯ ಕೇಂದ್ರಬಿಂದುಗಳಿಂದ ಸೇನೆ ಹಿಂತೆಗೆದುಕೊಳ್ಳಲು ಎರಡೂ ರಾಷ್ಟ್ರಗಳು ಈಗೇನೋ ಒಪ್ಪಿವೆ. ಆದರೆ ಗಾಲ್ವಾನ್ ತೀರದಲ್ಲಿ ಹೂಡಿರುವ ವೀಕ್ಷಣಾ ಪೋಸ್ಟ್, ಬಂಕರ್, ಯುದ್ಧಸಾಮಗ್ರಿ, ರಕ್ಷಾಕವಚಗಳನ್ನು ತೆರವುಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಭೂ ವ್ಯಾಪಾರಿ: ನಡ್ಡಾ
ಚೀನ ಜತೆಗಿನ ಬಿಕ್ಕಟ್ಟಿನ ವಿಚಾರದಲ್ಲಿ ಸರ್ವಪಕ್ಷಗಳು ಒಂದಾದರೂ ಕಾಂಗ್ರೆಸ್ ತನ್ನದೇ ದಾರಿಯಲ್ಲಿ ಹೊರಟಿದೆ. ಕೈ ಪಕ್ಷದ ಈ ನಡೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತೆ ಟೀಕಿಸಿದ್ದಾರೆ. “ಕಾಂಗ್ರೆಸ್‌ನ ವಂಶಾಡಳಿತವು ಭೂ ವ್ಯಾಪಾರಿಗಳಂತೆ ಭಾರತದ ಭೂಮಿಯನ್ನು ಪಾಕಿಸ್ಥಾನ, ಚೀನಕ್ಕೆ ಬಿಟ್ಟುಕೊಟ್ಟಿತ್ತು’ ಎಂದು ಟ್ವಿಟ್ಟರ್‌ನಲ್ಲಿ ವಾಗ್ಧಾಳಿ ನಡೆಸಿದ್ದಾರೆ. “ಈ ವಂಶಾಡಳಿತದ ಕೆಟ್ಟ ನಿರ್ಧಾರಗಳಿಂದಾಗಿ ಭಾರತ ಸಾವಿರಾರು ಚದರ ಕಿ.ಮೀ. ಭೂಮಿಯನ್ನು ಕಳೆದುಕೊಂಡಿದೆ. ಭಾರತೀಯ ಸೇನೆಯ ಬಲವಾದ ಉಪಸ್ಥಿತಿ ಹೊಂದಿದ್ದ ಸಿಯಾಚಿನ್ ಹಿಮಪರ್ವತ ಕಳೆದುಹೋಗಿದೆ. ಭಾರತ ಇವರನ್ನು ತಿರಸ್ಕರಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.