ಗಡಿ ಸಿಬಂದಿಯ ಸಭೆಗೆ ಆಹ್ವಾನ ನೀಡದ ಚೀನ
Team Udayavani, Oct 2, 2017, 6:15 AM IST
ಬೀಜಿಂಗ್/ಹೊಸದಿಲ್ಲಿ: ಗಡಿಯಲ್ಲಿ ಪದೇ ಪದೆ ಕ್ಯಾತೆ ತೆಗೆಯುವ ಚೀನವು ಇದೀಗ ಮತ್ತೂಮ್ಮೆ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಆರಂಭಿಸಿದೆ. ಪ್ರತಿ ವರ್ಷ ನಡೆಯುವ ಗಡಿ ಭದ್ರತಾ ಸಿಬಂದಿ ಸಭೆ(ಬಿಪಿಎಂ)ಗೆ ಈ ವರ್ಷ ಚೀನವು ಭಾರತಕ್ಕೆ ಆಹ್ವಾನವನ್ನೇ ನೀಡಿಲ್ಲ. ಹೀಗಾಗಿ, ಸಭೆಯು ರದ್ದಾಗಿದೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 5 ಸ್ಥಳಗಳಲ್ಲಿ ಈ ಸಭೆ ನಡೆಸಲಾಗುತ್ತದೆ. ಈ ಹಿಂದೆ ನಡೆದ ಸಭೆಗಳಲ್ಲಿ ಎರಡೂ ದೇಶಗಳ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿ ಕೊಳ್ಳುತ್ತಾರೆ. ಡೋಕ್ಲಾಂ ವಿವಾದ ಇತ್ಯರ್ಥವಾದ ಬಳಿಕ ಸದ್ಯದಲ್ಲೇ ಈ ವಾರ್ಷಿಕ ಸಭೆ ನಡೆಯಬೇಕಿತ್ತು. ಆದರೆ, ಚೀನವು ಭಾರತಕ್ಕೆ ಆಹ್ವಾನ ನೀಡದೇ ಉದ್ಧಟತನ ತೋರಿದೆ.
ಅರುಣಾಚಲ ಗಡಿಯಲ್ಲೇ ಹಾದುಹೋದ ಎಕ್ಸ್‌ಪ್ರೆಸ್‌ವೇ: ಟಿಬೆಟ್ ರಾಜಧಾನಿ ಲಾಸಾ ಹಾಗೂ ಚೀನ ನಡುವಿನ ಸಂಪರ್ಕ ಸೇತುವಾಗ ಲಿರುವ 409 ಕಿ.ಮೀ. ಹೆದ್ದಾರಿಗೆ ಚೀನ ಭಾನು ವಾರ ಚಾಲನೆ ನೀಡಿ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಿದೆ. ರಾಜತಾಂತ್ರಿಕವಾಗಿಯೂ ಮಹತ್ವ ಕಂಡುಕೊಂಡಿರುವ 37,800 ಕೋಟಿ ರೂ. ವೆಚ್ಚದ ಈ ಹೆದ್ದಾರಿಯನ್ನು ಚೀನ ನಿರ್ಮಿಸಿದ್ದು, ಅರುಣಾಚಲ ಪ್ರದೇಶದ ಗಡಿ ಯಲ್ಲೇ ಹಾದುಹೋಗಿದೆ.
ಟಿಬೆಟ್ ಹಾಗೂ ಚೀನದ ಪ್ರಮುಖ ಎರಡು ನಗರಗಳ ಸಂಪರ್ಕ ಸಾಧಿಸುವ ಈ ಹೆದ್ದಾರಿ ವಿಶೇಷವಾಗಿ ಪ್ರವಾಸಿಗರಿಗೆ ಅನುಕೂಲ ಕರ ವಾಗಲಿದೆ. ಅಷ್ಟೇ ಅಲ್ಲ, ಲಾಸಾದಿಂದ ನಯಿಂಗಿ ನಡುವಿನ ದೂರವನ್ನು ಪ್ರತಿ ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಿದರೆ, 5 ಗಂಟೆ ಯಲ್ಲಿ ತಲುಪಬಹು ದಾಗಿದೆ. ಚೀನ ಈ ಹೆದ್ದಾರಿ ನಿರ್ಮಾಣ ಮಾಡಿರುವುದರ ಹಿಂದೆ ಇನ್ನೊಂದು ಕಾರಣವಿದ್ದು, ಇಲ್ಲಿನ ಸೇನಾಪಡೆಗೆ ಇನ್ಮುಂದೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಇನ್ನಷ್ಟು ಸಲೀಸಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.