ಜಂಟಿ ಅಭ್ಯಾಸಕ್ಕೆ ಪಾಕ್ಗೆ ಹೊರಟ ಚೀನ ವಾಯುಪಡೆ
Team Udayavani, Dec 8, 2020, 12:36 AM IST
ಸಾಂದರ್ಭಿಕ ಚಿತ್ರ
ಬೀಜಿಂಗ್: ಭಾರತಕ್ಕೆ ಸಮಾನ ಶತ್ರುಗಳಾಗಿರುವ ಚೀನ ಮತ್ತು ಪಾಕಿಸ್ಥಾನ ಜಂಟಿ ಸಮರಾಭ್ಯಾಸಕ್ಕೆ ತಯಾರಾಗಿ ನಿಂತಿವೆ. ಚೀನದ ವಾಯುಪಡೆಯ ತುಕಡಿಯೊಂದು ಸೋಮವಾರ ಜಂಟಿ ಅಭ್ಯಾಸಕ್ಕಾಗಿ ಪಾಕಿಸ್ಥಾನಕ್ಕೆ ತೆರಳಿದೆ.
ನೈಜ ಸಹಕಾರವನ್ನು ಹೆಚ್ಚಿಸುವುದು, ನೈಜವಾದ ಯುದ್ಧ ತರಬೇತಿ ಮಟ್ಟವನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವೆಂದು ಚೀನ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ಆದರೆ ಇದು ಪರೋಕ್ಷವಾಗಿ ಭಾರತಕ್ಕೆ ನೀಡಿದ ಸಂದೇಶವೆನ್ನುವುದು ಯಾರಿಗೂ ಅರ್ಥವಾಗುವ ಮಾತು. ಚೀನದ ತುಕಡಿ, ಪಾಕಿಸ್ಥಾನದ ಬಂದರು ನಗರಿ ಕರಾಚಿಯ ಈಶಾನ್ಯ ಭಾಗದಲ್ಲಿರುವ ಭೊಲಾರಿಗೆ ಹೊರಟಿದೆ. ಈ ಪ್ರದೇಶ ಸಿಂಧ್ ಪ್ರಾಂತ್ಯದ ಥಟ್ಟಾ ಜಿಲ್ಲೆಯಲ್ಲಿ ಬರುತ್ತದೆ. ಎರಡೂ ದೇಶಗಳು ಶಹೀನ್-9 ಹೆಸರಿನ ಕವಾಯತಿನಲ್ಲಿ ಪಾಲ್ಗೊಳ್ಳಲಿವೆ. ಈ ಮಾಸಾಂತ್ಯಕ್ಕೆ ಈ ಅಭ್ಯಾಸ ಮುಗಿಯಲಿದೆ. ಇದರಿಂದ ಎರಡೂ ದೇಶಗಳ ಸೇನಾ ಸಹಕಾರ ವೃದ್ಧಿಯಾಗಲಿದೆ. ಇಂತಹದ್ದೊಂದು ಅಭ್ಯಾಸ 2011 ಮಾರ್ಚ್ನಲ್ಲಿ ನಡೆದಿತ್ತು. ಎಲ್ಲ ರೀತಿಯಲ್ಲೂ ಪಾಕ್ಗೆ ಸಹಕಾರ ನೀಡುತ್ತಿರುವ ಚೀನ, ಸೇನಾ ಸಹಕಾರವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಜೆಎಫ್-17 ಯುದ್ಧ ವಿಮಾನವನ್ನು ಜಂಟಿಯಾಗಿ ನಿರ್ಮಿಸಲು ಚೀನ ಪಾಕ್ಗೆ ಸಹಾಯ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.