ಬೆಳಕಿಗಾಗಿ ಮತ್ತೂಬ್ಬ ಚಂದ್ರ
Team Udayavani, Oct 20, 2018, 6:00 AM IST
ಬೀಜಿಂಗ್: ಪ್ರತಿ ಗಂಟೆಗೆ 1 ಸಾವಿರ ಕಿಮೀ ವೇಗದಲ್ಲಿ ಓಡುವ ರೈಲನ್ನು 2025ರ ಒಳಗಾಗಿ ಅಭಿವೃದ್ಧಿ ಪಡಿಸಲು ಚೀನಾ ಮುಂದಾಗಿದೆ. ಅದಕ್ಕಿಂತ ಐದು ವರ್ಷ ಮೊದಲೇ ಅಂದರೆ 2020ರ ವೇಳೆ ಭಾರತದ ನೆರೆಯ ರಾಷ್ಟ್ರ ಚಂದ್ರನಂಥ ಉಪಗ್ರಹವನ್ನು ನಭಕ್ಕೆ ಕಳುಹಿಸಲು ನಿರ್ಧರಿಸಿದೆ. ಅದರ ಉದ್ದೇಶವಿಷ್ಟೆ. ಇಂಧನಕ್ಕಾಗಿ. ಅದು ವಿಶ್ವದ ಅತ್ಯಂತ ದೊಡ್ಡ ಉಪಗ್ರಹ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆಯಂತೆ.
ಚೀನಾದ ನೈಋತ್ಯ ಭಾಗದಲ್ಲಿರುವ ಚೆಂಗು ನಗರ ಚಂದ್ರನಂಥ ಉಪಗ್ರಹ ಉಡಾಯಿ ಸುವ ಬಗ್ಗೆ ಯೋಜನೆ ಹಾಕುತ್ತಿದೆ. ಭೂಮಿಯಿಂದ 500 ಕಿಮೀ ಎತ್ತರದಲ್ಲಿರುವ ಕಕ್ಷೆ ಯನ್ನು ಅದು ಸುತ್ತಲಿದೆ. ಈ ಯೋಜನೆ ಜಾರಿ ಮಾಡಿದ ಬಳಿಕ ವಿದ್ಯುತ್‌ಗಾಗಿ ಬಳಕೆಯಾಗುತ್ತಿರುವ ವಾರ್ಷಿಕ 20 ಕೋಟಿ ರೂ. (200 ಮಿಲಿಯನ್ ಡಾಲರ್) ಉಳಿ ತಾಯ ವಾಗಲಿದೆ ಎನ್ನುವುದು ತಜ್ಞರ ವಾದ.
ಚಂದ್ರನಂತೆಯೇ ಕಾಣುವ ಈ ಉಪಗ್ರಹ 10-80 ಕಿಮೀ ವ್ಯಾಪ್ತಿಯ ಭೂ ಪ್ರದೇಶಕ್ಕೆ ಬೆಳಕು ನೀಡಲಿದೆ. ಉಪಗ್ರಹದಿಂದ ಹೊರ ಸೂಸುವ ಬೆಳಕಿನಿಂದಾಗಿ ಚೀನಾದಲ್ಲಿ ಬೀದಿ ದೀಪಗಳ ಬಳಕೆಯೇ ಇಲ್ಲದಂತೆ ಆಗಲಿದೆ. ಒಂದು ವೇಳೆ 50 ಚದರ ಕಿಮೀ ವ್ಯಾಪ್ತಿಯ ಪ್ರದೇಶಕ್ಕೆ ಬೆಳಕು ನೀಡುತ್ತದೆ ಎಂದಾದರೆ 53.3 ಕೋಟಿ ರೂ. (1.2 ಬಿಲಿಯನ್ ಯಾನ್) ಪ್ರತಿ ವರ್ಷ ವಿದ್ಯುತ್ ವೆಚ್ಚ ಉಳಿತಾಯವಾಗುತ್ತದೆ.
ಚೆಂಗುx ಏರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಮೈಕ್ರೋ ಇಲೆಕ್ಟ್ರಾನಿಕ್ಸ್ ಸಿಸ್ಟಮ್ ರಿಸರ್ಚ್ ಇನ್ಸ್ಟಿಟ್ಯೂಟ್ ಕಾರ್ಪೊರೇಷನ್ ಸಂಸ್ಥೆಯ ಅಧ್ಯಕ್ಷ ವ್ಯೂ ಚುನ್‌ಫೆಂಗ್ ಅ.10 ರಂದು ಈ ಘೋಷಣೆ ಮಾಡಿದ್ದರು. ಇದೇ ಮಾದರಿಯ ಯೋಜನೆಯನ್ನು 1999ರಲ್ಲಿ ರಷ್ಯಾ ಜಾರಿಗೊಳಿಸಲು ಮುಂದಾಗಿತ್ತು. ಆದರೆ ಅದು ಯಶಸ್ವಿಯಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.