ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ
Team Udayavani, Dec 6, 2020, 5:45 AM IST
ಬೀಜಿಂಗ್: ಚಂದ್ರನಂಗಳದಲ್ಲಿ ಅಮೆರಿಕ ತನ್ನ ದೇಶದ ಧ್ವಜ ನೆಟ್ಟ 50 ವರ್ಷಗಳ ಅನಂತರ ಈಗ ಚೀನ ಈ ಸಾಧನೆ ಮಾಡಿದ ಎರಡನೇ ರಾಷ್ಟ್ರವೆಂಬ ಗರಿಮೆಗೆ ಪಾತ್ರವಾಗಿದೆ. ಚಂದ್ರನಂಗಳದ ಅಧ್ಯಯನಕ್ಕಾಗಿ ಚೀನ ಕಳುಹಿಸಿಕೊಟ್ಟಿರುವ Chang’e-5 ಬಾಹ್ಯಾಕಾಶ ನೌಕೆಯು ಚೀನಿ ಧ್ವಜವನ್ನು ನೆಟ್ಟು ಅದರ ಚಿತ್ರಗಳನ್ನು ಕಳುಹಿಸಿಕೊಟ್ಟಿದೆ. ಚಂದ್ರನ ಮೇಲಿನ ಮಣ್ಣು ಹಾಗೂ ಕಲ್ಲುಗಳ ಮಾದರಿಯನ್ನೂ ಈ ಗಗನನೌಕೆ ಸಂಗ್ರಹಿಸಿದ್ದು, ಭೂಮಿಗೆ ಹಿಂದಿರುಗಿದ ಅನಂತರ ಈ ಮಾದರಿಗಳ ಅಧ್ಯಯನ ಮಾಡಲಾಗುತ್ತದೆ.
ಅಮೆರಿಕ 1969ರಲ್ಲಿ ತನ್ನ ಮೊದಲ ಮಾನವ ಸಹಿತ ಅಪೋಲೋ ಮಿಷನ್ ಸಂದರ್ಭದಲ್ಲಿ ಮೊದಲ ಬಾರಿಗೆ ಚಂದ್ರನ ಮೇಲೆ ಧ್ವಜ ಸ್ಥಾಪಿಸಿತ್ತು. ತದನಂತರ 1969ರಿಂದ 1972ರವರೆಗೂ ಅಮೆರಿಕ 12 ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೆ„ಯಲ್ಲಿ ಇಳಿಸಿತ್ತು. ಈ ಯೋಜನೆಗಳ ವೇಳೆ ಒಟ್ಟು 382 ಕೆಜಿಯಷ್ಟು ಕಲ್ಲು ಮತ್ತು ಮಣ್ಣಿನ ಮಾದರಿ ಸಂಗ್ರಹಿಸಲಾಗಿತ್ತು.
ಭೂಮಿಯತ್ತ ಮರು ಪ್ರಯಾಣ
ನ.23ರಂದು ಚೀನ ಉಡಾಯಿಸಿದ Chang’e-5 ಡಿ.1ರಂದು ಚಂದ್ರನ ಮೇಲೆ ಇಳಿದಿತ್ತು, ಈಗ ಮಾದರಿಗಳನ್ನು ಸಂಗ್ರಹಿಸಿ ಅದು ಭೂಮಿಯತ್ತ ತನ್ನ ಪಯಣ ಬೆಳೆಸಿದ್ದು, ಡಿ.16ರಂದು ಬಂದಿಳಿಯುವ ನಿರೀಕ್ಷೆಯಿದೆ. ಈ ಮಾದರಿಗಳನ್ನು ಹೊತ್ತು ಗಗನನೌಕೆಯೇನಾದರೂ ಯಶಸ್ವಿಯಾಗಿ ಬಂದಿಳಿದರೆ, ಅಮೆರಿಕ, ರಷ್ಯಾ ಅನಂತರ ಚಂದ್ರನ ಅಂಗಳದಿಂದ ಕಲ್ಲು, ಮಣ್ಣಿನ ಮಾದರಿ ತಂದ ಮೂರನೇ ರಾಷ್ಟ್ರ ಎಂಬ ಗರಿಮೆಗೂ ಚೀನ ಪಾತ್ರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.