ಅನ್ಯಗ್ರಹ ಜೀವಿಗಳ ಕುರುಹು ಪತ್ತೆ? ಚೀನದ ಸ್ಕೈ ಐ ರೇಡಿಯೋ ಟೆಲೆಸ್ಕೋಪ್‌ಗೆ ಸಂಕೇತ!?
Team Udayavani, Jun 16, 2022, 7:00 AM IST
ಬೀಜಿಂಗ್: ಭೂಮಿಯಿಂದ ಆಚೆಗೆ ಜೀವಿಗಳು ಇವೆಯೇ ಎಂಬ ಬಗ್ಗೆ ಹಲವು ದೇಶಗಳು ದಶಕಗಳಿಂದ ಸಂಶೋಧನೆ ನಡೆಸುತ್ತಿವೆ. ಆದರೆ, ಈ ಬಗ್ಗೆ ಖಚಿತ ಎನ್ನಬಹುದಾದ ಉತ್ತರ ಇದುವರೆಗೆ ಸಿಕ್ಕಿಲ್ಲ. ಆದರೆ, ಚೀನದ ಇತ್ತೀಚಿನ ಹೇಳಿಕೆ ಪ್ರಕಾರ ಭೂಮಿಯಿಂದಾಚೆಗೆ ಜೀವಿಗಳು ಇವೆ.
ಚೀನದ ನೈಋತ್ಯ ಭಾಗದಲ್ಲಿರುವ ಗುಯಿಝೋವ್ ಪ್ರಾಂತ್ಯದಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ಅಳವಡಿಸಲಾಗಿರುವ ಜಗತ್ತಿನ ಅತ್ಯಂತ ದೊಡ್ಡದು ಎಂದು ಹೇಳಲಾಗಿರುವ “ಸ್ಕೈ ಐ’ ಎಂಬ ರೇಡಿಯೋ ದೂರದರ್ಶಕಕ್ಕೆ ಭೂಮಿಯಿಂದ ಆಚೆಗೆ ಜೀವಿಗಳು ಇರುವ ಬಗ್ಗೆ ಸಂಕೇತಗಳು ಲಭ್ಯವಾಗಿದೆ. ಕೆಲವೇ ಗಂಟೆಗಳಲ್ಲಿ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ವರದಿಯನ್ನು ವಾಪಸ್ ಪಡೆಯಲಾಗಿದೆ.
ಈ ಹಿಂದೆಯೂ ಕೂಡ ಇಂಥದ್ದೇ ಮಾದರಿಯ ಸಂಕೇತ ಲಭ್ಯವಾಗಿತ್ತು ಎಂದು ಮುಖ್ಯ ವಿಜ್ಞಾನಿ ಝಾಂಗ್ ತೋಂಜೆ ಪ್ರತಿಪಾದಿಸಿದ್ದಾರೆ. ಇದೊಂದು ರೇಡಿಯೋ ಸಂಕೇತಗಳ ಛೇದನವಾಗಿರಬಹುದು. ಅನ್ಯ ಜೀವಿಗಳು ಇರುವ ಬಗ್ಗೆ ಮತ್ತಷ್ಟು ಅಧ್ಯಯನಗಳು ಅಗತ್ಯವಿದೆ ಎಂದು ಝಾಂಗ್ ಹೇಳಿದ್ದಾರೆ. ವೆಬ್‌ಸೈಟ್‌ನಲ್ಲಿ ವರದಿ ಅಪ್‌ಲೋಡ್ ಮಾಡಲಾಗುತ್ತಿದ್ದಂತೆಯೇ ಜಗತ್ತಿನ ಮಾಧ್ಯಮಗಳಲ್ಲಿ ಅದು ಪ್ರಕಟವಾಗತೊಡಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.