ಮೂವರು ಖಗೋಳಯಾತ್ರಿಕರು ನಭಕ್ಕೆ; ಚೀನದಿಂದ ಮತ್ತೊಂದು ಸಾಹಸ
ಬಾಹ್ಯಾಕಾಶ ನಿಲ್ದಾಣ ಕಾಮಗಾರಿಗಾಗಿ ರವಾನೆ
Team Udayavani, Jun 6, 2022, 6:55 AM IST
ಬೀಜಿಂಗ್: ಅಂತರಿಕ್ಷದಲ್ಲಿ ತನ್ನದೇ ಆದ ಸುಸಜ್ಜಿತ ಬಾಹ್ಯಾಕಾಶ ನಿಲ್ದಾಣ ಹೊಂದಿರುವ ಚೀನ ಅದನ್ನು ನವೀಕರಣಗೊಳಿಸುವ ಕಾಯಕಕ್ಕೆ ಕೈಹಾಕಿದೆ. ಅದಕ್ಕಾಗಿ ಮೂವರು ಗಗನಯಾತ್ರಿಗಳನ್ನು ಭಾನುವಾರ ಬಾಹ್ಯಾಕಾಶಕ್ಕೆ ರವಾನಿಸಿದೆ.
ವಾಯುವ್ಯ ಚೀನಾದಲ್ಲಿರುವ ಜುವುಕ್ವಾನ್ ಉಡ್ಡಯನ ಕೇಂದ್ರದಿಂದ ಹೊರಟ ಶೆಂಘೌ-14 ಎಂಬ ರಾಕೆಟ್‌ನಲ್ಲಿ ಚೆಂಗ್ ಡೊಂಗ್, ಲಿಯು ಯಂಗ್, ಕಾಯ್ ಕ್ಸುಝೆ ಎಂಬ ಖಗೋಳ ಯಾತ್ರಿಗಳು ಪ್ರಯಾಣ ಬೆಳೆಸಿದ್ದಾರೆ. ಮುಂದಿನ 6 ತಿಂಗಳವರೆಗೆ ಅವರು ಅಂತರಿಕ್ಷದಲ್ಲೇ ಇರಲಿದ್ದು ಅಲ್ಲಿ ಚೀನದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಿದ ನಂತರ ಹಿಂದಿರುಗಲಿದ್ದಾರೆ.
ಪರಿವರ್ತನಾ ಕಾರ್ಯ
ಸದ್ಯಕ್ಕೆ ಒಂದು ವಿಭಾಗವನ್ನು ಮಾತ್ರ ಹೊಂದಿರುವ ಚೀನದ ಬಾಹ್ಯಾಕಾಶ ನಿಲ್ದಾಣವನ್ನು ಕೋರ್ ಮಾಡ್ನೂಲ್, ಟೆಯಾನ್ಹೆ ಹಾಗೂ ಟು-ಲ್ಯಾಬ್ ಮಾಡ್ನೂಲ್ ಎಂಬ ಮೂರು ವಿಭಾಗಗಳನ್ನಾಗಿ ಪರಿವರ್ತಿಸಲಾಗುತ್ತದೆ. ಈಗ ಗಗನಕ್ಕೆ ಹೋಗಿರುವ ಯಾತ್ರಿಗಳು, ಚೀನದಿಂದ ಕಾರ್ಯನಿರ್ವಹಿಸುವ ಗ್ರೌಂಡ್ ಟೀಂ ಜತೆಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಈ ಪರಿವರ್ತನೆ ಕಾರ್ಯ ಮುಗಿಸಿಕೊಂಡು ಹಿಂದಿರುಗುತ್ತಾರೆ.
ಎರಡನೇ ಬಾರಿ
ಚೀನವು ಬಾಹ್ಯಾಕಾಶ ನಿಲ್ದಾಣದ ವಿಚಾರಕ್ಕಾಗಿ ತನ್ನ ಖಗೋಳಯಾತ್ರಿಗಳನ್ನು ಕಳುಹಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ, ಒಬ್ಬ ಮಹಿಳೆ ಸೇರಿ ಆರು ಖಗೋಳ ಯಾತ್ರಿಕರು ಚೀನದ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ, ದಾಖಲೆಯ ಆರು ತಿಂಗಳವರೆಗೆ ಅಲ್ಲಿಯೇ ಉಳಿದು ನಿಲ್ದಾಣದ ಕೆಲವು ಪ್ರಮುಖ ಭಾಗಗಳನ್ನು ನಿರ್ಮಿಸಿದ್ದರು. ಇದೇ ಏಪ್ರಿಲ್‌ನಲ್ಲಿ ಅವರು ಭೂಮಿಗೆ ವಾಪಸ್ಸಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.