ಅರುಣಾಚಲ ಗಡಿ ಸಮೀಪ ಚೀನ ರೈಲು!
ಇಲ್ಲಿಯ ತನಕ ಲಿನ್ಹಿ ಭಾಗದ ಜನ ಚೆಂಗ್ಡುನಿಂದ ಲಾಸಾಗೆ 48 ಗಂಟೆಗಳಲ್ಲಿ ತಲುಪುತ್ತಿದ್ದರು.
Team Udayavani, Nov 2, 2020, 12:04 PM IST
ಬೀಜಿಂಗ್: ಲಡಾಖ್ ಭಾಗದಲ್ಲಿ ತನ್ನ ದುಸ್ಸಾಹಸಕ್ಕೆ ಕಿಮ್ಮತ್ತು ಕಾಣದ ಚೀನ, ಅರುಣಾಚಲ ಪ್ರದೇಶ ದತ್ತ ವಕ್ರದೃಷ್ಟಿ ನೆಟ್ಟಿದೆ. ಭಾರತದ ಗಡಿಗೆ
ಹೊಂದಿಕೊಂಡಂತೆ ರೈಲ್ವೇ ಮಾರ್ಗ ನಿರ್ಮಾಣದ ತಂಟೆ ಆರಂಭಿಸಿದೆ.
ನೈಋತ್ಯ ಸಿಚುವಾನ್ ಪ್ರಾಂತ್ಯದಿಂದ ಟಿಬೆಟ್‌ನ ಲಿನ್ಹಿ ನಡುವೆ ರೈಲ್ವೇ ಮಾರ್ಗ ತೆರೆಯಲು ಚೀನ ಪಿತೂರಿ ರೂಪಿಸಿದೆ. ಅರುಣಾಚಲ ಪ್ರದೇಶದ ಗಡಿಗೆ ಲಿನ್ಹಿ ಬಹಳ ಹತ್ತಿರವಿದ್ದು, ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ಯೋಜನೆಗೆ ಅಗತ್ಯವಿರುವ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲು ವೇದಿಕೆ ಸಿದ್ಧವಾಗಿದೆ.
ಇಲ್ಲಿಯ ತನಕ ಲಿನ್ಹಿ ಭಾಗದ ಜನ ಚೆಂಗ್ಡುನಿಂದ ಲಾಸಾಗೆ 48 ಗಂಟೆಗಳಲ್ಲಿ ತಲುಪುತ್ತಿದ್ದರು. ಉದ್ದೇಶಿತ ಯೋಜನೆ ಪ್ರಯಾಣದ ಕಾಲಾವಧಿಯನ್ನು ಅರ್ಧಕ್ಕೆ ಇಳಿಸಲಿದೆ. 26 ನಿಲ್ದಾಣಗಳನ್ನೊಳಗೊಂಡ ಯೋಜನೆಗೆ 47.8 ಶತಕೋಟಿ ಡಾಲರ್ ಗಳನ್ನು ಬೀಜಿಂಗ್ ಮೀಸಲಿಟ್ಟಿದೆ. ಹಿಮಾಲಯ
ಶ್ರೇಣಿಯಲ್ಲಿ 5 ವಿಮಾನ ನಿಲ್ದಾಣ ನಿರ್ಮಿಸಿರುವ ಚೀನ, ಲಿನ್ಹಿಯಲ್ಲೂ ಏರ್‌ಪೋರ್ಟ್ ಹೊಂದಿದೆ.
2027ಕ್ಕೆ ಅಮೆರಿಕ ಸೇನೆಗೆ ಸಮನಾಗಿ ಪಿಎಲ್‌ಎ
2027ರ ವೇಳೆಗೆ ಅಮೆರಿಕ ಸೇನೆಗೆ ಎಲ್ಲ ರೀತಿಯಲ್ಲೂ ಸಡ್ಡು ಹೊಡೆಯವಂತೆ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಸುಸಜ್ಜಿತ ಅತ್ಯಾಧುನಿಕವಾಗಿ ಕಟ್ಟಲು ಚೀನ ನಿರ್ಧರಿಸಿದೆ.
ಇತ್ತೀಚೆಗಷ್ಟೇ ಮುಕ್ತಾಯ ಕಂಡ ಆಡಳಿತ ಪಕ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನದ ಪ್ರಧಾನ ಸಮಾವೇಶದಲ್ಲಿ ಈ ಸಂಕಲ್ಪ ತೊಟ್ಟಿದೆ ಎಂದು ಚೀನ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.