ನಿಧಾನಕ್ಕೆ ಶುರುವಾಯ್ತು ವುಹಾನ್ ಚಟುವಟಿಕೆ; ಕಚೇರಿ ಪುನರಾರಂಭಕ್ಕೆ ಕೆಲಕಂಪೆನಿಗಳಿಗೆ ಅನುಮತಿ
ಸೀಮಿತ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಆರಂಭ
Team Udayavani, Mar 12, 2020, 5:58 PM IST
ಬೀಜಿಂಗ್/ಹೊಸದಿಲ್ಲಿ: ಮಾರಕ ಸೋಂಕು ಶುರುವಾದ ಚೀನದ ಹ್ಯುಬೆ ಪ್ರಾಂತ್ಯದ ವುಹಾನ್‌ನಲ್ಲಿ ಜನಜೀವನ ಮತ್ತು ವಾಣಿಜ್ಯಿಕ ಚಟುವಟಿಕೆಗಳು ನಿಧಾನವಾಗಿ ಶುರುವಾಗಿವೆೆ. ಅದಕ್ಕೆ ಪೂರಕವಾಗಿ ಕೆಲವು ಕಂಪೆನಿಗಳ ಕಚೇರಿ ತೆರೆದು, ಕಾರ್ಯಾರಂಭಕ್ಕೆ ಚೀನ ಸರಕಾರ ಅನುಮತಿ ನೀಡಿದೆ. ಮಾ.20ರ ಬಳಿಕ ಇನ್ನೂ ಹಲವು ಕಂಪೆನಿಗಳು ಕೆಲಸ ಶುರು ಮಾಡಲಿವೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ.
ಜ.23ರ ಬಳಿಕ ಆ ಪ್ರಾಂತ್ಯದಲ್ಲಿ ಸಂಪೂರ್ಣ ವಹಿವಾಟು ಸ್ಥಗಿತಗೊಂಡಿತ್ತು. ಇತ್ತೀಚಿನ ದಿನಗಳಲ್ಲಿ ವುಹಾನ್‌ನಲ್ಲಿ ಹೊಸ ಪ್ರಕರಣಗಳು ವರದಿಯಾಗುವುದು ಕಡಿಮೆಯಾಗಿದೆ. ಜಪಾನ್ ಕಾರು ತಯಾರಿಕಾ ಸಂಸ್ಥೆ ಹೋಂಡಾ ವುಹಾನ್ ಘಟಕದಲ್ಲಿ ಕೆಲಸ ಶುರು ಮಾಡಿದೆ. ಹ್ಯುಬೆ ಪ್ರಾಂತ್ಯದ ಒಳಗೆ ರೈಲು ಮತ್ತು ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಡಿಮೆ ಅಪಾಯ ಎಂದು ಘೋಷಣೆ ಮಾಡಿರುವ ವ್ಯಾಪ್ತಿಯಲ್ಲಿ ಸಂಚಾರ ಪುನಾರಾರಂಭಿಸಿವೆ.
ಇದರ ಹೊರತಾಗಿಯೂ ಕಠಿನ ನಿಯಮಗಳು ಜಾರಿಯಲ್ಲಿರಲಿವೆ ಎಂದು ಪ್ರಾಂತೀಯ ಸರಕಾರ ಸ್ಪಷ್ಟಪಡಿಸಿದೆ. ಆದರೆ ಶೈಕ್ಷಣಿಕ ಸಂಸ್ಥೆಗಳು ಇನ್ನೂ ಪುನರಾರಂಭವಾಗಿಲ್ಲ. ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇರುವ ವಹಿವಾಟಿಗೆ ಅನುಮತಿ ನೀಡಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಮತ್ತೆ 22 ಸಾವು: ಚೀನದಲ್ಲಿ ವೈರಸ್‌ನಿಂದ ಬಳಲುತ್ತಿದ್ದ 22 ಮಂದಿ ಅಸುನೀಗಿದ್ದಾರೆ. ಹೀಗಾಗಿ, ಚೀನದಲ್ಲಿ ಸಾವಿನ ಸಂಖ್ಯೆ 3,158ಕ್ಕೆ ಏರಿಕೆಯಾಗಿದೆ. ಮಂಗಳವಾರದವರೆಗೆ 80, 778 ಮಂದಿಗೆ ಸೋಂಕು ತಗುಲಿದೆ.
ಮತ್ತೂಂದು ಮಹತ್ವದ ನಿರ್ಣಯದಲ್ಲಿ ದೇಶಕ್ಕೆ ಆಗಮಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು ಎಂದು ಚೀನ ಆದೇಶಿಸಿದೆ. ಜತೆಗೆ ಸೋಂಕಿನ ಲಕ್ಷಣಗಳು ಇವೆ ಎಂದು ಸಂಶಯಕ್ಕೆ ಒಳಪಟ್ಟವರನ್ನೆಲ್ಲ 14 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಿ, ನಿಗಾ ವಹಿಸಬೇಕೆಂದು ಸೂಚಿಸಲಾಗಿದೆ.
ಅಮೆರಿಕ: 31 ಸಾವು; ಸೋಂಕು 1 ಸಾವಿರ
ಅಮೆರಿಕದಲ್ಲಿ ವೈರಸ್‌ನಿಂದಾಗಿ ಅಸುನೀಗಿದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಅಲ್ಲಿನ ಮೂವತ್ತು ಪ್ರಾಂತ್ಯಗಳಲ್ಲಿ ಇದುವರೆಗೆ 1,037 ಪ್ರಕರಣಗಳು ಪತ್ತೆಯಾಗಿವೆ.
ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ಫ್ಲೋರಿಡಾ ಸೇರಿದಂತೆ 11 ಪ್ರಾಂತ್ಯಗಳಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಇದರ ಜತೆಗೆ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.