ಚೀನದಲ್ಲಿ ಭಾರತದ ವೈದ್ಯ ಡಾ| ಕೊಟ್ನಿಸ್ ಪ್ರತಿಮೆ!
Team Udayavani, Aug 29, 2020, 6:45 AM IST
ಬೀಜಿಂಗ್: ಎರಡನೇ ಮಹಾಯುದ್ಧದ ಹೊಸ್ತಿಲಿನಲ್ಲಿ, ಚೀನ ಕ್ರಾಂತಿ ವೇಳೆ ವೈದ್ಯಕೀಯವಾಗಿ ಅಪಾರ ಕೊಡುಗೆ ಸಲ್ಲಿಸಿದ್ದ ಭಾರತದ ವೈದ್ಯ ಡಾ| ದ್ವಾರಕನಾಥ್ ಕೊಟ್ನಿಸ್ ಅವರ ಕಂಚಿನ ಪ್ರತಿಮೆ ನಿರ್ಮಿಸಲು ಚೀನ ಮುಂದಾಗಿದೆ.
ಉತ್ತರ ಚೀನದ ಶಿಜಿಯಾಝು ವಾಂಗಾದ ವೈದ್ಯಕೀಯ ವಿಶ್ವವಿದ್ಯಾಲಯ ಮುಂಭಾಗದಲ್ಲಿ ಕೊಟ್ನಿಸ್‌ರ ಪ್ರತಿಮೆ ಸೆಪ್ಟೆಂಬರ್‌ನಲ್ಲಿ ಅನಾವರಣಗೊಳ್ಳಲಿದೆ.
ಯಾರಿದು ಕೊಟ್ನಿಸ್?: 1937ರಲ್ಲಿ ಜಪಾನ್ ದಾಳಿಯಿಂದ ತತ್ತರಿಸಿದ್ದ ಚೀನದಲ್ಲಿ ಅಪಾರ ಸಾವು – ನೋವುಗಳಾಗಿದ್ದವು. ಸಹಸ್ರಾರು ಸೈನಿಕರು ಗಂಭೀರ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಭಾರತದಿಂದ ಚೀನಕ್ಕೆ ಕಳುಹಿಸಲಾದ ಐವರು ವೈದ್ಯರ ತಂಡದಲ್ಲಿ ಕೊಟ್ನಿಸ್ ಕೂಡ ಒಬ್ಬರು.
ಸಹಸ್ರಾರು ಸೈನಿಕರ ಜೀವ ಉಳಿಸಿ, ಚೀನದ ಕಣ್ಣಲ್ಲಿ ಕೊಟ್ನಿಸ್ ಹೀರೋ ಆಗಿದ್ದರು. ಅನಂತರ ಕೊಟ್ನಿಸ್ ಚೀನದಲ್ಲಿಯೇ ನೆಲೆಸಿ, ಕೇವಲ 32ನೇ ವರ್ಷದಲ್ಲಿ ನಿಧನ ಹೊಂದಿದ್ದರು. ಸೊಲ್ಹಾಪುರ ಮೂಲದ ಕೊಟ್ನಿಸ್ ಅವರ ಜನ್ಮದಿನವನ್ನು ಚೀನ ಇವತ್ತಿಗೂ ಆಚರಿಸಿಕೊಂಡು ಬರುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.