ಚೀನದಿಂದ ವಿಶ್ವದ ಪ್ರಥಮ Artificial intelligence news anchor
Team Udayavani, Nov 9, 2018, 4:38 PM IST
ಬೀಜಿಂಗ್ : ವಿಶ್ವದ ಮೊತ್ತ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ನ್ಯೂಸ್ ಆ್ಯಂಕರ್ ಅನ್ನು ಚೀನ ಅನಾವರಣಗೊಳಿಸಿದೆ.
ಮೊನ್ನೆ ಬುಧವಾರ ವೂಝೆನ್ ನಲ್ಲಿ ನಡೆದಿದ್ದ ವಿಶ್ವ ಅಂತರ್‌ಜಾಲ ಸಮಾವೇಶದಲ್ಲಿ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಈ ಕೃತಕ ಬುದ್ಧಿಮತ್ತೆಯ ನ್ಯೂಸ್ ಆ್ಯಂಕರನ್ನು ವಿಶ್ವಕ್ಕೆ ಪರಿಚಯಿಸಿದೆ.
ಕೃತಕ ಬುದ್ಧಿಮತ್ತೆ (ಎಐ) ಯ ಈ ನ್ಯೂಸ್ ಆ್ಯಂಕರನ್ನು ಚೀನದ ಕ್ಸಿನ್‌ಹುವಾ ಮತ್ತು ಸರ್ಚ್ ಇಂಜಿನ್ ಕಂಪೆನಿ ಸೊಗೋವ್ ಜತೆಗೂಡಿ ಅಭಿವೃದ್ಧಿ ಪಡಿಸಿವೆ.
ಇಂಗ್ಲಿಷ್ ಮಾತನಾಡುವ ಈ ಕೃತಕ ಬುದ್ಧಿ ಮತ್ತೆಯ ನ್ಯೂಸ್ ಆ್ಯಂಕರ್ ತನ್ನ ಮುಂದಿದ್ದ ಕ್ಯಾಮೆರಾದಲ್ಲಿ ಕಂಡು ಬಂದ ಪಠ್ಯವನ್ನು ಓದುವ ಮೂಲಕ ತನ್ನನ್ನು ಪರಿಚಯಿಸಿಕೊಂಡಿದ್ದಾನೆ.
ಕ್ಸಿನ್ ಹುವಾ ಸುದ್ದಿ ಸಂಸ್ಥೆಯ ನಿಜ ನ್ಯೂಸ್ ಆ್ಯಂಕರ್ ಆಗಿರುವ ಝಾಂಗ್ ಝಾವೋ ಅವರನ್ನು ಹೋಲುವ ರೀತಿಯಲ್ಲಿ ಈ ಕೃತಕ ಬುದ್ಧಿಮತ್ತೆ ನ್ಯೂಸ್ ಆ್ಯಂಕರನ್ನು ವಿನ್ಯಾಸಗೊಳಿಸಲಾಗಿದೆ.
ಈ ಕೃತಕ ಬುದ್ಧಿ ಮತ್ತೆಯ ನ್ಯೂಸ್ ಆ್ಯಂಕರ್ (ರೋಬೋಟ್) ತನ್ನನ್ನು ಇಂಗ್ಲಿಷ್‌ನಲ್ಲಿ ಪರಿಚಯಿಸಿಕೊಂಡ ರೀತಿ ಹೀಗಿದೆ :
“Hello everyone, I am an English Artificial Intelligence anchor. This is my very first day in Xinhua News agency. My voice and appearance are modelled on Zhang Zhao, a real anchor with Xinhua,”
ಮುಂದುವರಿದು ಈ ಮಾಡೆಲ್ ನ್ಯೂಸ್ ಆ್ಯಂಕರ್ ಇಂಗ್ಲಿಷಿನಲ್ಲಿ ಹೇಳಿದ್ದು ಹೀಗೆ :
ಮಾಧ್ಯಮ ರಂಗದ ಅಭಿವೃದ್ಧಿಯು ನಿರಂತರ ಹೊಸ ಹೊಸ ಅನ್ವೇಷಣೆಗಳನ್ನು ಅಪೇಕ್ಷಿಸುತ್ತಿದೆ; ಅಂತೆಯೇ ಅತ್ಯಾಧುನಿಕ ಅಂತಾರಾಷ್ಟ್ರೀಯ ತಂತ್ರಜ್ಞಾನದೊಂದಿಗೆ ಸಮ್ಮಿಳಿತವಾಗುತ್ತಿದೆ. ಅಂತೆಯೇ ನನ್ನೊಳಗಿನ ಕಂಪ್ಯೂಟರ್ ವ್ಯವಸ್ಥೆಗೆ ಉಣಿಸಿರುವಂತಹ ಸಂಗತಿಗಳನ್ನು ನಾನು ನಿಮಗೆ ತಿಳಿಸಲು ನಾನು ಅವಿರತವಾಗಿ ಕೆಲಸ ಮಾಡುತ್ತಿರುತ್ತೇನೆ’
“ನಿಮಗೆ ನಿರಂತರ ಹೊಚ್ಚ ಹೊಸ ಸುದ್ದಿಯ ಅನುಭವವನ್ನು ನೀಡುವುದನ್ನು ನಾನು ಎದುರು ನೋಡುತ್ತಿದ್ದೇನೆ’.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.