ಅಮೆರಿಕಕ್ಕೆ ಚೀನ ವಾರ್ನಿಂಗ್; ಸ್ಪೀಕರ್ ನ್ಯಾನ್ಸಿಯವರ ತೈವಾನ್ ಭೇಟಿಗೆ ಕೆಂಡಾಮಂಡಲ
ಘೋರ ಪರಿಣಾಮಗಳಿಗೆ ಅಮೆರಿಕವೇ ಹೊಣೆ ಎಂದ ಚೀನ
Team Udayavani, Aug 3, 2022, 6:55 AM IST
ಬೀಜಿಂಗ್: ತೈವಾನ್ ಮತ್ತು ಚೀನ ನಡುವಿನ ವಿರಸ ತಾರಕಕ್ಕೇರಿದ್ದು, ಅಮೆರಿಕ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಸದ್ಯದಲ್ಲೇ ಭೇಟಿ ನೀಡಲಿರುವುದು ಚೀನವನ್ನು ಕೆರಳಿಸಿದೆ. ನ್ಯಾನ್ಸಿ ಅವರೇನಾದರೂ ತೈವಾನ್‌ಗೆ ಕಾಲಿಟ್ಟಿದ್ದೇ ಆದರೆ, ಅದಕ್ಕೆ ಸೂಕ್ತ ಬೆಲೆಯನ್ನು ಅಮೆರಿಕ ತೆರಬೇಕಾಗುತ್ತದೆ. ಅಷ್ಟೇ ಅಲ್ಲ, ಮುಂದಾಗುವ ಘೋರ ಪರಿಣಾಮಗಳಿಗೆ ಅಮೆರಿಕವೇ ಹೊಣೆ ಹೊರಬೇಕಾಗುತ್ತದೆ ಎಂದು ಚೀನದ ವಿದೇಶಾಂಗ ಇಲಾಖೆಯ ವಕ್ತಾರ ಹುವಾ ಚುನ್ಯಿಂಗ್ ಕಿಡಿಕಾರಿದ್ದಾರೆ.
ತೈವಾನ್‌ನನ್ನು ಅತಿಕ್ರಮಿಸಿಕೊಂಡಿರುವ ಚೀನ, ಇಡೀ ತೈವಾನ್ ತನ್ನ ದೇಶದ್ದೇ ಭಾಗ ಎಂಬ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ಆದರೆ, ನೆಪಮಾತ್ರಕ್ಕೊಂದು ಸ್ವಾಯತ್ತ ಸರ್ಕಾರವನ್ನು ಅಲ್ಲಿ ಚೀನ ನೇಮಿಸಿದೆ. ಅಮೆರಿಕ, ತೈವಾನ್ ಬೆಂಬಲಕ್ಕೆ ನಿಂತಿದ್ದು, ನ್ಯಾನ್ಸಿ ಅವರು ತೈವಾನ್‌ಗೆ ಆಗಮಿಸುತ್ತಿರುವುದು ಚೀನಾ ಕಣ್ಣು ಕೆಂಪಾಗಿಸಿದೆ.
ಯುದ್ಧ ವಿಮಾನಗಳ ನಿಯೋಜನೆ
ಚೀನದ ಎಚ್ಚರಿಕೆಯ ನಡುವೆಯೇ ನ್ಯಾನ್ಸಿಯವರು ತೈವಾನ್‌ನತ್ತ ಮಂಗಳವಾರ ಪ್ರಯಾಣ ಬೆಳೆಸಿದ್ದಾರೆ. ಅವರು ತೈವಾನ್‌ಗೆ ಆಗಮಿಸುವ ಮುನ್ನವೇ ಅಮೆರಿಕದ ನಾಲ್ಕು ಯುದ್ಧ ನೌಕೆಗಳು ತೈವಾನ್-ಚೀನ ಕಡಲಿನಲ್ಲಿ ಬೀಡುಬಿಟ್ಟಿವೆ. ಇದರಲ್ಲೊಂದು ಯುದ್ಧ ವಿಮಾನಗಳನ್ನು ಹೊತ್ತೂಯ್ಯಬಲ್ಲ ಹಡಗಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.