China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ
Team Udayavani, May 4, 2024, 6:16 AM IST
ಬೀಜಿಂಗ್: ಚಂದ್ರನ ಬಗ್ಗೆ ಮತ್ತಷ್ಟು ವೈಜ್ಞಾನಿಕ ಅಧ್ಯ ಯನ ನಡೆಸುವ ಸಲುವಾಗಿ ಚಂದ್ರನ ಮತ್ತೂಂದು ಭಾಗದಿಂದ ಮಾದರಿ ಸಂಗ್ರಹಿಸುವ ಸಾಹಸಕ್ಕೆ ಚೀನ ಮುಂದಾಗಿದೆ. ಇದಕ್ಕಾಗಿ ಶುಕ್ರವಾರ “ಚಾಂಗ್ ಇ-6′ ಎಂದು ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಭೂಮಿಗೆ ಕಾಣದ ಚಂದ್ರನ ಭಾಗದಿಂದ ಮಾದರಿ ಸಂಗ್ರಹಿಸುವ ಕಾರ್ಯ ಕೈಗೊಳ್ಳುತ್ತಿರುವುದು ಇದೇ ಮೊದಲಾಗಿದೆ. ಚಾಂಗ್ ಇ-6 ನೌಕೆಯಲ್ಲಿ ಆರ್ಬಿಟರ್, ಲ್ಯಾಂಡರ್, ಅಸೆಂಡರ್ (ಮತ್ತೆ ಉಡಾವಣೆಗೊಳ್ಳುವ ಯಂತ್ರ) ಮತ್ತು ಭೂಮಿಯನ್ನು ಪ್ರವೇಶಿಸುವ ಘಟಕವನ್ನು ಹೊಂದಿದೆ. ಇದು ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಅಲ್ಲಿನ ಧೂಳು ಮತ್ತು ಕಲ್ಲಿನಂತಹ ಗಟ್ಟಿ ಪದಾರ್ಥಗಳನ್ನು ಸಂಗ್ರಹಿಸಿ ಅದನ್ನು ಭೂಮಿಗೆ ತರ ಲಿದೆ. ಇದನ್ನು ಆಧಾರವಾಗಿಟ್ಟುಕೊಂಡು ಚಂದ್ರನ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.