ಚೀನಾದ ಮತ್ತೂಂದು ರೈಲು ಸಾಹಸ
Team Udayavani, Jul 6, 2017, 3:45 AM IST
ಬೀಜಿಂಗ್: ರೈಲ್ವೇ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಚೀನಾ ಇದೀಗ ಮತ್ತೂಂದು ಅತಿ ವೆಚ್ಚದಾಯಕ, ಅತಿ ಸವಾಲಿನ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ.
ಚೀನಾದ ಸಿಚುವಾನ್‌ನಿಂದ ಟಿಬೆಟ್‌ಗೆ ಸಂಪರ್ಕ ಕಲ್ಪಿಸುವ ರೈಲ್ವೇ ಮಾರ್ಗ ಇದು. ಈ ಮೂಲಕ ಟಿಬೆಟ್‌ಗೆ ಎರಡನೇ ರೈಲು ಮಾರ್ಗ ನಿರ್ಮಿಸಲು ಚೀನಾ ಮುಂದಾಗಿದೆ. ಈಗಾಗಲೇ ಕ್ವಿಂಘೈ-ಟಿಬೆಟ್ ಪ್ಲೇಟು ಮಧ್ಯೆ ರೈಲ್ವೇ ಸಂಪರ್ಕವಿದ್ದು, ಅತಿ ಅಪಾಯಕಾರಿ ಭೂ ಪ್ರದೇಶದಲ್ಲಿ ಇದು ಹಾದು ಹೋಗುತ್ತದೆ. ಈ ರೈಲ್ವೇ ಮಾರ್ಗ ಚೀನಾದ ತಾಂತ್ರಿಕ ಪರಿಣತಿಗೆ ಸಾಕ್ಷಿಯಾಗಿದೆ.
ಸಿಚುವಾನ್-ಟಿಬೆಟ್ ರೈಲ್ವೇ ಮಾರ್ಗ ಜಗತ್ತಿನಲ್ಲೇ ಅತಿ ಸವಾಲಿನ ನಿರ್ಮಾಣ ಕಾಮಗಾರಿಯಾಗಿರಲಿದೆ. ಇದಕ್ಕಾಗಿ ಚೀನಾ ಬರೋಬ್ಬರಿ 2.30 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಲು ಸಿದ್ಧವಾಗಿದೆ. 1,700 ಕಿ.ಮೀ. ದೂರದ ರೈಲ್ವೇ ಮಾರ್ಗ ಇದಾಗಿದ್ದು, ಜಗತ್ತಿನಲ್ಲೇ ಅತಿ ದುರ್ಗಮ ಎನಿಸಿಕೊಂಡ ಪ್ರದೇಶಗಳನ್ನು ಹಾದು ಹೋಗಿ, ಸಿಚುವಾನ್‌ನ ಚೆಂಗುxವಿನಿಂದ ಟಿಬೆಟ್‌ನ ಲಾಸಾವನ್ನು ಸಂಪಕಿಸಲಿದೆ.
ಚೀನಾದ ಎಯೂìನ್ ಎಂಜಿನಿಯರಿಂಗ್ ಗಈ ರೈಲ್ವೇ ಮಾರ್ಗ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದೆ. ಮಾರ್ಗದಲ್ಲಿ ಶೇ.80 ರಷ್ಟು ಸುರಂಗ ಮತ್ತು ಸೇತುವೆಗಳು ಇರಲಿವೆ. 4 ಸಾವಿರ ಅಡಿಗೂ ಹೆಚ್ಚು ಎತ್ತರದ ಪರ್ವತಗಳನ್ನು, 13 ಪ್ರಮುಖ ನದಿಗಳನ್ನು ರೈಲ್ವೇ ಮಾರ್ಗ ಹಾದುಹೋಗಲಿದೆ ಎಂದು ಕಂಪನಿ ಇಂಜಿನಿಯರ್‌ಗಳು ಹೇಳಿದ್ದಾರೆ. ಇದು ಟಿಬೆಟ್ ಮಧ್ಯ ಚೀನಾವನ್ನು ಸಂಪರ್ಕಿ ಸಲು ನೆರವಾಗಲಿದೆ. ಚೆಂಗುx-ಲಾಸಾ ನಡು ವಿನ 48 ಗಂಟೆಗಳ ದಾರಿಯನ್ನು ಇದು 13 ಗಂಟೆಗೆ ಇಳಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.