ಗಂಟೆಗೆ 28,968 ಕಿಮೀ ವೇಗದಲ್ಲಿ ಭೂಮಿಗೆ ಹಿಂತಿರುಗಲಿದೆ ಚೀನಿ ರಾಕೆಟ್ ಲಾಂಗ್ ಮಾರ್ಚ್..!?
Team Udayavani, May 7, 2021, 3:49 PM IST
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ನಿಯಂತ್ರಣ ತಪ್ಪಿ ಭೂಮಿಗೆ ಅಪ್ಪಳಿಸಲಿರುವ ಚೀನಿ ರಾಕೆಟ್ ಲಾಂಗ್ ಮಾರ್ಚ್ 5ಬಿ ಜಗತ್ತಿನ ಯಾವುದೇ ಜಾಗದಲ್ಲೂ ಬಂದು ಬೀಳಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
10 ಮಹಡಿಯ ಕಟ್ಟಡದ ಎತ್ತರವೂ, 23 ಟನ್ ಭಾರವಿರುವ ರಾಕೆಟ್ ಶನಿವಾರ ಅಥವಾ ಆದಿತ್ಯವಾರ ಭೂಮಿಗೆ ಬೀಳಬಹುದು ಎಂದು ವಿಜ್ಞಾನಿಗಳು ಹೇಳಿದ್ದು, ಯಾವ ಪ್ರದೇಶದಲ್ಲಿ ಬಂದು ಬೀಳುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡದಿರುವುದು ಜಗತ್ತಿನಾದ್ಯಂತ ಕೋವಿಡ್ ಸೋಂಕಿನ ರೂಪಾಂತರಿ ಅಲೆಯ ನಡುವೆ ಮತ್ತೊಂದು ವಿಚಾರ ಆತಂಕ ಸೃಷ್ಟಿಸಿದೆ.
ಓದಿ : ಬಡ ಜನರಿಗೆ ಊಟ ವಿತರಣೆ ಮಾಡಿದ ನಗರಸಭಾ ಉಪಾಧ್ಯಕ್ಷೆ ಅನುಷಾ
ಇನ್ನು, ಚೀನಿ ರಾಕೆಟ್ ಫೆಸಿಫಿಕ್ ನಲ್ಲಿ ಬೀಳಬಹುದು ಎಂದು ಹೇಳಲಾಗುತ್ತಿದೆಯಾದರೂ, ಜನ ವಾಸವಿರುವ ಯಾವ ಪ್ರದೇಶಕ್ಕೂ ಕೂಡ ಬಂದು ಬೀಳಬಹುದು ಎಂಬ ಆತಂಕ ಹುಟ್ಟಿಕೊಂಡಿದ್ದು, ಜನನಿಬಿಡ ನಗರ ಪ್ರದೇಶಗಳಲ್ಲಿ ಬಂದು ಬೀಳುವುದೆಂದು ಖಾತರಿಯಾದರೆ ತಕ್ಷಣ ಜನರನ್ನು ಸ್ಥಳಾಂತರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಎದ್ದಿದೆ.
ಚೀನಾದ ಹೊಸ ಬಾಹ್ಯಾಕಾಶ ನೆಲೆಯನ್ನು ಸ್ಥಾಪಿಸುವ ಉದ್ದೇಶದಿಂದ, ಅದರ ಭಾಗವಾಗಿ ಎಪ್ರಿಲ್ 29ರಂದು ಟಿಯಾನ್ಹೆ ಮೊಡ್ಯೂಲ್ ಜೊತೆಗೆ ಆಕಾಶದೆಡೆಗೆ ಹಾರಿತ್ತು ರಾಕೆಟ್ ಲಾಂಗ್ ಮಾರ್ಚ್. ನೆಲೆಗೆ ಅವಶ್ಯಕವಾದ ಅತ್ಯಂತ ಭಾರವಿರುವ ಸಾಮಗ್ರಿಗಳನ್ನು ತಲುಪಿಸುವುದಾಗಿತ್ತು ರಾಕೆಟ್ ಬಳಕೆಯ ಉದ್ದೇಶ. 11 ರಾಕೆಟ್ ಗಳು ಬಾಹ್ಯಾಕಾಶ ತಲುಪಿದರೆ ಮಾತ್ರ ಈ ನೆಲೆಯ ನಿರ್ಮಾಣ ಪೂರ್ಣಗೊಳ್ಳುವುದು.
ಇನ್ನು, ಅಮೇರಿಕಾದ ಶಿಕಾಗೋದಿಂದ ನ್ಯೂಯಾರ್ಕ್ ವರೆಗೆ ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದೆ. ಎಲ್ಲಿ ರಾಕೆಟ್ ಬಂದಪ್ಪಳಿಸುತ್ತದೆ ಎಂಬ ಪ್ರಶ್ನೆಗೆ ಚೀನಾ ಉತ್ತರಿಸಿಲ್ಲ.
ಆಫ್ರಿಕಾದ ಸುಡಾನ್ ನಲ್ಲಿ ಎಂದು ಅಮೇರಿಕದ ಏರೋಸ್ಪೇಸ್ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದು, ಆದರೆ, ಹವಾಮಾನದ ಬದಲಾವಣೆ ರಾಕೆಟ್ ಎಂಜಿನ್ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಅಮೇರಿಕನ್ ಹಾಗೂ ರಷ್ಯನ್ ಏಜೆನ್ಸಿಗಳು ಈ ಚೀನಾದ ರಾಕೆಟ್ ಮೇಲೆ ಕಣ್ಣಿಟ್ಟಿದೆ. ಗಂಟೆಗೆ 28,968 ಕಿಮೀ ವೇಗದಲ್ಲಿ ರಾಕೆಟ್ ಭೂಮಿಗೆ ಹಿಂತಿರುಗಲಿದೆ ಎಂದು ವರದಿಯಾಗಿದೆ.
ಓದಿ : ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.