ಅಫ್ಘಾನ್ ಗಣಿ ಪಡೆಯಲು ಚೀನಾ ಲಾಬಿ
Team Udayavani, Nov 25, 2021, 11:00 PM IST
ಬೀಜಿಂಗ್:ಅಫ್ಘಾನಿಸ್ತಾನದ ಆಡಳಿತದ ಚುಕ್ಕಾಣಿ ಹಿಡಿದಿರುವ ತಾಲಿಬಾನ್ ಉಗ್ರಸಂಘಟನೆಯ ಜತೆಗೆ ಸ್ನೇಹಹಸ್ತ ಚಾಚಿದ್ದಕ್ಕೆ ಕಾರಣ ಬಹಿರಂಗವಾಗಿದೆ.
ಜತೆಗೆ ಅಲ್ಲಿನ ಆಡಳಿತಕ್ಕೆ ಜಾಗತಿಕ ಮಾನ್ಯತೆ ನೀಡಲೂ ಅದು ಪ್ರಯತ್ನಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಹೇರಳವಾಗಿರುವ ಕಬ್ಬಿಣ, ಲಿಥೀಯಂ, ಕೋಬೋಲ್ಟ್, ಬಾಕ್ಸೈಟ್, ಯುರೇನಿಯಂ, ಕ್ರೋಮಿಯಂ ನಿಕ್ಷೇಪಗಳ ಇರುವ ಬಗ್ಗೆ ಸಂಶೋಧನೆ ನಡೆಸಿ, ಗುತ್ತಿಗೆ ಪಡೆದುಕೊಳ್ಳುವ ಬಿರುಸಿನ ಪ್ರಯತ್ನದಲ್ಲಿವೆ ಚೀನಾದ ಕಂಪನಿಗಳು. ಅದಕ್ಕಾಗಿ ಆ ಅಧಿಕಾರಿಗಳಿಗೆ ವಿಶೇಷ ವೀಸಾವನ್ನೂ ನೀಡಲಾಗಿದೆ.
ಚೀನಾ ಸರ್ಕಾರದ ಮುಖವಾಣಿ “ಗ್ಲೋಬಲ್ಟೈಮ್ಸ್’ ವರದಿ ಮಾಡಿರುವ ಪ್ರಕಾರವೇ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ಗೆ ಡ್ರ್ಯಾಗನ್ನ ವಿವಿಧ ಕಂಪನಿಗಳ ಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಜತೆಗೆ ಅಲ್ಲಿನ ಆಡಳಿತದ ಜತೆಗೆ ಗಣಿಗಾರಿಕೆ ನಡೆಸುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.
ಚೀನಾ ಸರ್ಕಾರ ಗಣಿ ಗುತ್ತಿಗೆ ಪಡೆಯುವ ನಿಟ್ಟಿನಲ್ಲಿ ಜಗತ್ತಿನ ಇತರ ರಾಷ್ಟ್ರಗಳಲ್ಲಿ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಬೇಕು ಎಂದು ಲಾಬಿ ನಡೆಸುತ್ತಿದೆ. ಕುತೂಹಲಕಾರಿ ಅಂಶವೆಂದರೆ, ಚೀನಾ ಸರ್ಕಾರವೇ ಉಗ್ರರ ಆಡಳಿತವನ್ನು ಅಧಿಕೃತವಾಗಿ ಮಾನ್ಯ ಮಾಡಿಲ್ಲ. ಮಾನವೀಯ ಸಹಾಯ ಎಂಬ ನೆಲೆಯಲ್ಲಿ ಕಳೆದ ವಾರ ಚೀನಾ 1 ಸಾವಿರ ಟನ್ ಆಹಾರ ವಸ್ತುಗಳು ಮತ್ತು 31 ಮಿಲಿಯ ಡಾಲರ್ ಮೊತ್ತದ ನೆರವು ಪ್ರಕಟಿಸಿತ್ತು. ತಾಲಿಬಾನ್ ಆಡಳಿತ ಅಫ್ಘಾನ್ ಆಡಳಿತದಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದು ಈಗಾಗಲೇ ಪ್ರಕಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.