ಕೋವಿಡ್19 ಲಸಿಕೆಯ ಸಂಶೋಧನಾ ಡೇಟಾ ಕದಿಯಲು ಯತ್ನಿಸುತ್ತಿರುವ ಚೀನಾ ಹ್ಯಾಕರ್ಸ್: ಅಮೆರಿಕ ಆರೋಪ
Team Udayavani, May 12, 2020, 8:55 AM IST
ವಾಷಿಂಗ್ಟನ್: ಕೋವಿಡ್-19ಗೆ ಹಲವು ರಾಷ್ಟ್ರಗಳು ಲಸಿಕೆ ಅಭಿವೃದ್ಧಿಪಡಿಸುವ ಕಾಯಕದಲ್ಲಿ ನಿರತವಾಗಿದೆ. ಏತನ್ಮಧ‍್ಯೆ ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಂಯುಕ್ತ ತನಿಖಾ ದಳ) ಮತ್ತು ಸೈಬರ್ ಸೆಕ್ಯೂರಿಟಿ ತಜ್ಞರು, ಚೈನಾದ ಹ್ಯಾಕರ್ ಗಳು ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುವ ಸಂಶೋಧನೆಯ ಡಾಟಾವನ್ನು ಕದಿಯಲು ಯತ್ನಿಸುತ್ತಿದ್ದಾರೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದೆ.
ಸೋಮವಾರ ಅಮೆರಿಕಾದ 2 ಪ್ರಮುಖ ಪತ್ರಿಕೆಗಳಾದ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ನ್ಯೂಯಾರ್ಕ್ ಟೈಮ್ಸ್ ಈ ವರದಿಯನ್ನು ಪ್ರಕಟಿಸಿದ್ದು, ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸಲು ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಸ್ಪರ್ಧಿಸುತ್ತಿರುವುದರಿಂದ ಎಫ್‌ಬಿಐ ಮತ್ತು ಸೈಬರ್ ಸೆಕ್ಯುರಿಟಿ ಇಲಾಖೆ ಚೀನಾದ ಹ್ಯಾಕಿಂಗ್ ಬಗ್ಗೆ ಎಚ್ಚರಿಕೆ ನೀಡಿವೆ.
ಕೋವಿಡ್-19ಗಾಗಿ ಮಾಡಲಾಗುತ್ತಿರುವ ಚಿಕಿತ್ಸೆಗಳು ಮತ್ತು ಪರೀಕ್ಷೆಗಳ ಕುರಿತು ಮಾಹಿತಿಗಳನ್ನು ಹ್ಯಾಕರ್ಸ್ ಗಳು ಗುರಿಯಾಗಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಈ ಹ್ಯಾಕರ್ ಗಳು ಚೀನಾದ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆದರೇ ಬೀಜಿಂಗ್ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಈ ಆರೋಪವನ್ನು ನಿರಾಕರಿಸಿದ್ದು ಮತ್ತು ಚೀನಾ ಸೈಬರ್ ದಾಳಿಯನ್ನು ದೃಢವಾಗಿ ವಿರೋಧಿಸುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲದೆ ಚೀನಾ ಲಸಿಕೆ ಅಭಿವೃದ್ಧಿ ಪಡಿಸುವ ದೇಶಗಳಲ್ಲೇ ಮುಂಚೂಣಿಯಲ್ಲಿದ್ದು, ಪುರಾವೆಗಳಿಲ್ಲದೆ ಚೀನಾವನ್ನು ನಿಂದನೆಗೆ ಒಳಪಡಿಸಲಾಗುತ್ತಿದೆ ಎಂದು ದೂರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.