ಲಡಾಖ್ ಸಮೀಪದ ಕೆರೆ ಚೀನಾದ “ದೋಣಿ ಕಾವಲು’
Team Udayavani, Apr 10, 2018, 6:00 AM IST
ಬೀಜಿಂಗ್: ಡೋಕ್ಲಾಂ ಗಡಿ ವಿವಾದದ ನಂತರದಲ್ಲಿ ಇದೀಗ ಲಡಾಖ್‌ಗೆ ಹೊಂದಿಕೊಂಡಿರುವ ಗಡಿಯಲ್ಲಿರುವ ಪಾಂಗಾಂಗ್ ಕೆರೆಗೆ ಚೀನಾ ಸೇನೆ ವ್ಯಾಪಕ ಭದ್ರತೆ ಒದಗಿಸಿದೆ. ಹೊಸ ರಿತಿಯ ಪಹರೆ ಬೋಟ್‌ಅನ್ನು ಚೀನಾ ಸೇನೆ ಇಲ್ಲಿ ನಿಯೋಜಿಸಿದೆ. ಈ ಬೋಟ್ ಲೋಹವನ್ನು ಹೊಂದಿಲ್ಲದ್ದರಿಂದ, ನೀರು ಹಿಮಗಟ್ಟಿದರೂ ಬೋಟ್‌ಗೆ ಯಾವುದೇ ಹಾನಿಯಾಗುವುದಿಲ್ಲ. ಗಂಟೆಗೆ 40 ಕಿ.ಮೀ ವೇಗವನ್ನು ಇದು ಹೊಂದಿದೆ.
ಈ ಭಾಗದಲ್ಲಿ ಸರ್ವೇಕ್ಷಣೆ ಕ್ಯಾಮೆರಾವನ್ನೂ ನಿಯೋಜಿಸಲಾಗಿದ್ದು, ಯಾವುದೇ ಅಪಾಯಕರ ಸನ್ನಿವೇಶ ಎದುರಾದಾಗ ಸ್ಯಾಟಲೈಟ್ ಮೂಲಕ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನೂ ಒದಗಿಸಲಿದೆ. ಚೀನಾ ತನ್ನ ಭದ್ರತಾ ವ್ಯವಸ್ಥೆ ಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮವಾಗಿದೆ ಎಂದು ಹೇಳಲಾಗಿದೆ. ಈ ಕೆರೆ ಲಡಾಖ್ ಹಾಗೂ ಟಿಬೆಟ್ ಮಧ್ಯೆ ಇದ್ದು, ಮೂರೂ ದೇಶಗಳಿಗೆ ಅತ್ಯಂತ ಮಹತ್ವದ ಪ್ರದೇಶವಾಗಿದೆ. ಹಲವು ಬಾರಿ ಈ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೇನೆಗಳು ಮುಖಾಮುಖೀಯಾಗಿವೆ.
ಕಳೆದ ಫೆಬ್ರವರಿಯಲ್ಲಿ ಜೆ-10 ಫೈಟರ್ ಜೆಟ್ ಮತ್ತು ಜೆ 11 ಟ್ವಿನ್ ಇಂಜಿನ್ ಯುದ್ಧವಿಮಾನಗಳನ್ನು ಈ ಗಡಿ ಭಾಗ ದಲ್ಲಿ ಚೀನಾ ನಿಯೋಜಿಸಿತ್ತು. ಈ ಭದ್ರತಾ ಹೆಚ್ಚಳದ ನಂತರ ದಲ್ಲಿ ಇದೀಗ ಸರ್ವೇಕ್ಷಣೆಯ ಕಡೆಗೆ ಗಮನ ಹರಿಸಿದಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.