ಅರೇಬಿಕ್ ಬೋರ್ಡ್ ತೆಗೆಯುವಂತೆ ಚೀನ ಆದೇಶ
Team Udayavani, Aug 1, 2019, 11:15 AM IST
ಬಿಜಿಂಗ್: ಚೀನದ ಕಮ್ಯೂನಿಸ್ಟ್ ಸರ್ಕಾರ, ಅರೇಬಿಕ್ ಭಾಷೆಯಲ್ಲಿರುವ ಎಲ್ಲಾ ನಾಮಫಲಕಗಳನ್ನು ತೆರವುಗೊಳಿಸಲು ಸೂಚಿಸಿದೆ. ರಾಜಧಾನಿ ಬಿಜಿಂಗ್’ನಲ್ಲಿರುವ ಹೊಟೇಲ್’ಗಳಿಗೆ ಸರಕಾರ ಈ ಆದೇಶ ನೀಡಿದೆ.
ಹೋಟೆಲ್ ನಾಮಫಲಕಗಳಲ್ಲಿ ಅರೇಬಿಕ್ ಭಾಷೆಯ ಪದಗಳು, ಇಸ್ಲಾಂಗೆ ಸಂಬಂಧಿಸಿದ ಚಿಹ್ನೆಗಳನ್ನು ತೆಗೆಯುವಂತೆ ಬಿಜಿಂಗ್ ಸ್ಥಳೀಯ ಆಡಳಿತ ಆದೇಶ ನೀಡಿದೆ. ಇಷ್ಟಕ್ಕೆ ಸುಮ್ಮನಾಗದ ಅಲ್ಲದೇ ಹಲಾಲ್ ಶಬ್ಧ ಬಳಸಲಾಗಿರುವ ಎಲ್ಲಾ ನಾಮಫಲಕಗಳನ್ನು ಬದಲಾಯಿಸುವಂತೆಯೂ ಆದೇಶದಲ್ಲಿ ತಿಳಿಸಿದೆ.
ಚೀನದಲ್ಲಿ ಸುಮಾರು 20 ಮಿಲಿಯನ್ ಮುಸ್ಲಿಂಮರು ಇದ್ದಾರೆ. ಈ ನಡುವೆಯೂ ಚೀನದ ಈ ಕ್ರಮ ಕೈಗೊಂಡಿದ್ದು, ನೆರೆಯ ರಾಷ್ಟ್ರಗಳಿಗೆ ಆಶ್ಚರ್ಯ ತಂದಿದೆ. ಇಸ್ಲಾಂ ಮೂಲಕ ವಿದೇಶಿ ಸಂಸ್ಕೃತಿ ದೇಶದೊಳಕ್ಕೆ ನುಸುಳುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಚೀನದ ಉಯಿಗರ್ ಮುಸ್ಲಿಂ ಹಾಗೂ ಸ್ಥಳೀಯ ಹಾನ್ ಸಮುದಾಯದ ನಡುವೆ ಬಿಕ್ಕಟ್ಟು ಉದ್ಭವಿಸಿದ ಕಾರಣ ಚೀನ ಈ ಕ್ರಮ ಕೈಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಮೂಲಕ ದೇಶದಲ್ಲಿ ಇಸ್ಲಾಂ ಬಲವನ್ನು ಕುಂದಿಸುವ ಪ್ರಯತ್ನ ಮಾಡಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.