ವಿಶಿಷ್ಟ ಚಂದ್ರಯಾನಕ್ಕೆ ಚೀನ ಸಜ್ಜು
Team Udayavani, Jan 4, 2018, 6:00 AM IST
ಬೀಜಿಂಗ್: ಆರ್ಥಿಕತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶ್ವದ ದೊಡ್ಡ ರಾಷ್ಟ್ರಗಳಿಗೇ ಸೆಡ್ಡು ಹೊಡೆದಿರುವ ಚೀನ, ಇದೀಗ ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ಆ ಕ್ಷೇತ್ರದ ದಿಗ್ಗಜರಾದ ಅಮೆರಿಕ, ರಷ್ಯಾಗಳನ್ನು ಹಿಂದಿಕ್ಕಲು ಸಜ್ಜಾಗಿದೆ.
ಕೆಲ ವರ್ಷಗಳ ಹಿಂದೆಯೇ, ಚೀನ ಘೋಷಿಸಿದ್ದ ಚಂದ್ರ ಗ್ರಹ ಅಧ್ಯಯನದ ಮಹತ್ವದ ಯೋಜನೆ ಈಗ ಅಂತಿಮ ರೂಪ ಪಡೆಯುತ್ತಿದೆ. “ಚಾಂಗ್ 4′ ಎಂಬ ಹೆಸರಿನ ಈ ಯೋಜನೆಯು 2018ರ ಜೂನ್‌ನಲ್ಲಿ ಸಾಕಾರಗೊಳ್ಳಲಿದೆ. ಈ ಯೋಜನೆಯಲ್ಲಿ ಚಂದ್ರನ ಮೇಲೆ “ಚಾಂಗ್ 4′ ಎಂಬ ಉಪಗ್ರಹವನ್ನು ಚೀನ ಇಳಿಸಲಿದೆ. ಈ ಯೋಜನೆಯ ವಿಶೇಷವೆಂದರೆ, ಭೂಮಿಗೆ ಕಾಣದಿರುವ ಚಂದ್ರನ ಮತ್ತೂಂದು ಮಗ್ಗು ಲಿನ ಮೇಲೆ ತನ್ನ ಉಪಗ್ರಹವನ್ನು ಇಳಿಸಿ ಆ ಪಾರ್ಶ್ವದ ಅಧ್ಯಯನ ಮಾಡುವುದು.
ಈ ಹಿಂದೆ, ಅಮೆರಿಕ, ರಷ್ಯಾ ದೇಶಗಳು ಚಂದ್ರನಲ್ಲಿಗೆ ತಮ್ಮ ನೌಕೆಗಳನ್ನು ಕಳುಹಿಸಿ ಅಲ್ಲಿನ ಮಣ್ಣು, ಕಲ್ಲು ಇತ್ಯಾದಿಗಳನ್ನು ಪರೀಕ್ಷೆಗಾಗಿ ಭೂಮಿಗೆ ತಂದಿದ್ದವು. ಆದರೆ, ನಾವು ಕಾಣದ ಚಂದ್ರನ ಮಗ್ಗುಲಿಗೆ ಉಪಗ್ರಹವನ್ನು ಕಳುಹಿಸಿರಲಿಲ್ಲ. ಇದೀಗ, ಆ ಕೆಲಸಕ್ಕೆ ಚೀನ ಕೈ ಹಾಕಿದೆ. ಈ ಯೋಜನೆ ಯಶಸ್ವಿಯಾದರೆ, ಚಂದ್ರನ ಅಧ್ಯಯನದಲ್ಲಿ ಅಮೆರಿಕ, ರಷ್ಯಾ ಮಾಡಿರುವ ಸಾಧನೆಗಳನ್ನು ಚೀನ ಹಿಂದಿಕ್ಕಿದಂತಾಗುತ್ತದೆ.
ಅಂದಹಾಗೆ, 1976ರಲ್ಲಿ ಚಾಂಜ್-3 ಯೋಜನೆಯಡಿ, ಜೇಡ್ ರಾಬಿಟ್ ರೋವರ್ ಎಂಬ ನೌಕೆಯನ್ನು ಚೀನ ಚಂದ್ರನ ನಾವು ಕಾಣುವ ಪಾರ್ಶ್ವದ ಮೇಲ್ಮೆ„ ಮೇಲೆ ಇಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.