5 ವರ್ಷಗಳ ಹಿಂದೆ “ಕೋವಿಡ್” ಬಗ್ಗೆ ಚರ್ಚೆ ನಡೆಸಿದ್ದರು ಚೀನಾ ವಿಜ್ಞಾನಿಗಳು..! : ವರದಿ

“ದಿ ಅನ್ ನ್ಯಾಚುರಲ್ ಒರಿಜಿನಲ್ ಆಫ್ ಸಾರ್ಸ್ ಆ್ಯಂಡ್  ನ್ಯೂ ಸ್ಪೀಷೀಸ್ ಆಫ್ ಮ್ಯಾನ್-ಮೇಡ್ ವೈರಸ್ ಆ್ಯಸ್ ಜೆನೆಟಿಕ್ ಬಯೋ ವೆಪನ್ಸ್” ಎಂಬ ಸಂಶೋಧನಾ ಲೇಖನ

ಶ್ರೀರಾಜ್ ವಕ್ವಾಡಿ, May 10, 2021, 7:34 PM IST

“ದಿ ಅನ್ ನ್ಯಾಚುರಲ್ ಒರಿಜಿನಲ್ ಆಫ್ ಸಾರ್ಸ್ ಆ್ಯಂಡ್  ನ್ಯೂ ಸ್ಪೀಷೀಸ್ ಆಫ್ ಮ್ಯಾನ್-ಮೇಡ್ ವೈರಸ್ ಆ್ಯಸ್ ಜೆನೆಟಿಕ್ ಬಯೋ ವೆಪನ್ಸ್” ಎಂಬ ಸಂಶೋಧನಾ ಲೇಖನ

ಬೀಜಿಂಗ್ :   2019ರ ಡಿಸೆಂಬರ್ ನ ಹೊತ್ತಿಗೆ ಚೀನಾದ ವುಹಾನ್ ನಗರದಲ್ಲಿನ ಮಾಂಸದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಪತ್ತೆಯಾದ ವೈರಸ್ ಕೆಲವೇ ಕೆಲವು ದಿನಗಳ ಅಂತರದಲ್ಲಿ ಅದು ಇಡೀ ಚೀನಾವನ್ನು ಆವರಿಸಿಕೊಂಡು ಅಡಿಮೇಲಾಗಿಸಿತ್ತು, ಇದಾದ ಕೆಲವು ವಾರಗಳಲ್ಲಿ ಇಡೀ ಪ್ರಪಂಚಕ್ಕೆ ಹಬ್ಬಿ ಅದು ಅದರ ಕರಾಳ ಮುಖ ತೋರಿಸಿ ಇಡೀ ಪ್ರಪಂಚಕ್ಕೆ ದೊಡ್ಡ ಪ್ರಹಾರ ಮಾಡಿರುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ.

ಕೋವಿಡ್ ಸೋಂಕಿನ ಮೂಲವನ್ನು ಹುಡುಕಲು ಹೊರಟ ಜಾಗತಿಕ ಸಮುದಾಯಕ್ಕೆ ಇನ್ನೂ ಸ್ಪಷ್ಟ ಉತ್ತರ ದೊರಕಿಲ್ಲ. ಚೀನಾವೇ ಕೋವಿಡ್ ಸೋಂಕಿನ ಜನಕ ಎಂದು ಇಡೀ ಜಗತ್ತು ಆಡಿಕೊಳ್ಳುತ್ತಿದ್ದರೂ ಅದಕ್ಕೆ ಸ್ಪಷ್ಟ ಪುರಾವೆ ಇಲ್ಲ. ಅದಕ್ಕೆ ಪೂರಕವೆಂಬಂತೆ ವೀಕೆಂಡ್ ಆಸ್ಟ್ರೇಲಿಯನ್ ಎಂಬ ಒಂದು ನಿಯತಕಾಲಿಕೆ ಭಯಾನಕ ವರದಿಯೊಂದನ್ನು ಜಗತ್ತಿಗೆ ಬಹಿರಂಗಪಡಿಸಿದ್ದು, ಅದು ಭಾರಿ ಚರ್ಚೆಯನ್ನು ಸೃಷ್ಟಿ ಮಾಡಿದೆ.

ಓದಿ : ವಿಶೇಷ ಅಧಿವೇಶನ; ವಿಶ್ವಾಸ ಮತಯಾಚನೆಯಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾಗೆ ಸೋಲು

ಹೌದು, ಚೀನಾದ ವಿಜ್ಞಾನಿಗಳು ಹಾಗೂ ಆರೋಗ್ಯ ಅಧಿಕಾರಿಗಳು ಬರೆದಿರುವ ಒಂದು ಸಂಶೋಧನಾ ಲೇಖನದಲ್ಲಿ, ಸಾರ್ಸ್(SARS) ಕೊರೋನಾ ವೈರಸ್  ನನ್ನು ಜಾಗತಿಕ ಯುದ್ಧಕ್ಕೆ ‘ಜೈವಿಕ ಅಸ್ತ್ರ’ವಾಗಿ ಬಳಸಿಕೊಳ್ಳಬಹುದು ಹಾಗೂ ಇಡೀ ಮಾನವ ಕುಲ ನಾಶಕ್ಕಾಗಿ ಈ ವೈರಸ್ ನನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದೆಂಬುದಾಗಿ ಬರೆಯಲಾಗಿದೆ ಎಂದು ವೀಕೆಂಡ್ ಆಸ್ಟ್ರೇಲಿಯನ್ ವರದಿ ಮಾಡಿದೆ.

ಚೀನಾದ ವಿಜ್ಞಾನಿಗಳು ಬರೆದಿರುವ “ದಿ ಅನ್ ನ್ಯಾಚುರಲ್ ಒರಿಜಿನಲ್ ಆಫ್ ಸಾರ್ಸ್ ಆ್ಯಂಡ್  ನ್ಯೂ ಸ್ಪೀಷೀಸ್ ಆಫ್ ಮ್ಯಾನ್-ಮೇಡ್ ವೈರಸ್ ಆ್ಯಸ್ ಜೆನೆಟಿಕ್ ಬಯೋ ವೆಪನ್ಸ್” ಎಂಬ ಸಂಶೋಧನಾ ಲೇಖನದಲ್ಲಿ ಮೂರನೇ ವಿಶ್ವ ಮಹಾ ಯುದ್ಧಕ್ಕೆ ಜೈವಿಕ ಅಸ್ತ್ರವಾಗಿ ಈ ವೈರಸ್ ನನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಕೋವಿಡ್ 19 ಸಾಂಕ್ರಾಮಿಕ ಸೋಂಕು ಬರುವ  ಐದು ವರ್ಷಗಳ ಮೊದಲು ಚೀನಾದ ಮಿಲಿಟರಿ ವಿಜ್ಞಾನಿಗಳು ಸಾರ್ಸ್ ಕೊರೋನ ವೈರಸ್ ಗಳ ಶಸ್ತ್ರಾಸ್ತ್ರೀಕರಣದ ಬಗ್ಗೆ ಚರ್ಚಿಸಿರುವುದಾಗಿ ಈ ಸಂಶೋಧನಾ ಲೇಖನ ಬಹಿರಂಗಪಡಿಸಿದೆ.

ಇನ್ನು, ವೀಕೆಂಡ್ ಆಸ್ಟ್ರೇಲಿಯಾದ ವರದಿಯನ್ನು ನ್ಯೂಸ್. ಕಾಮ್ ನಲ್ಲಿ ಪ್ರಕಟಿಸಲಾಗಿದೆ. ನ್ಯೂಸ್.ಕಾಮ್  ಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡ ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ (ಎಎಸ್ ಪಿ ಐ) ನ ಕಾರ್ಯನಿರ್ವಾಹಕ ನಿರ್ದೇಶಕ ಪೀಟರ್ ಜೆನ್ನಿಂಗ್ಸ್, ಇದು ಚೀನಾದವರಿಗೆ ಮಹತ್ವದ್ದಾಗಿದೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಚೀನಾದ ವಿಜ್ಞಾನಿಗಳು ಕೊರೋನ ವೈರಸ್ ನ ವಿವಿಧ ತಳಿಗಳ ಬಗ್ಗೆ ಯೋಚಿಸುತ್ತಿದ್ದಾರೆ ಮತ್ತು ಅದನ್ನು ಹೇಗೆ ನಿಯೋಜಿಸಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಹೇಳಿದ್ದಾರೆ.

ಜಾಗತಿಕ ಯುದ್ಧಕ್ಕಾಗಿ ಇಂತಹ ಸಾಂಕ್ರಾಮಿಕ ರೋಗಗಳನ್ನು ಹಬ್ಬಿಸಿರುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.

ಇನ್ನು,  ಸೈಬರ್ ಸೆಕ್ಯುರಿಟಿ ತಜ್ಞ ರಾಬರ್ಟ್ ಪಾಟರ್, ಈ ಲೇಖನವನ್ನು ಪರಿಶೀಲಿಸಲು ಕೇಳಿಕೊಂಡರು, ಈ ದಾಖಲೆಗಳು ಖಂಡಿತವಾಗಿಯೂ ನಕಲಿ ಆಗಿರಲಿಕ್ಕಿಲ್ಲ. “ಇದು ನಿಜವೆಂದು ನಾವು ತೀರ್ಮಾನಕ್ಕೆ ಬಂದಿದ್ದೇವೆ … ಇದು ನಕಲಿ ಅಲ್ಲ. ಆದರೆ ಈ ಬಗ್ಗೆ ವಿಸ್ತೃತವಾಗಿ ಪರಿಶೀಲನೆಯಾಗಬೇಕು ಎಂದು ಹೇಳಿರುವುದಾಗಿ ನ್ಯೂಸ್ . ಕಾಮ್ ವರದಿ ಮಾಡಿದೆ.

ಒಟ್ಟಿನಲ್ಲಿ, “ಚೀನಾ ಮೇಡ್” ವೈರಸ್ ಇದು ಎನ್ನುವುದಕ್ಕೆ ಚೀನಾದ ವಿಜ್ಞಾನಿಗಳೇ ಬರೆದಿರುವ ಈ ಸಂಶೋಧನಾ ಲೇಖನ ಬಹುತೇಕ ಉತ್ತರ ನೀಡಿದೆ ಎಂಬಂತೆ ವೀಕೆಂಡ್ ಆಸ್ಟ್ರೇಲಿಯನ್ ವರದಿ ಮಾಡಿದೆ.

ಓದಿ : ಸಾಲ ಕಂತು ಪಾವತಿಗೆ ಕೃಷಿಕರಿಗೆ ನೋಟಿಸ್‌ : ಅವಧಿ ವಿಸ್ತರಿಸುವಂತೆ ಸಿಎಂ ಗೆ ಸಚಿವ ಕೋಟ ಮನವಿ

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.