“ಈ ದೇಶಗಳು” ಅತೀ ಹೆಚ್ಚು ಮಿಲಿಯನೇರ್ ಶ್ರೀಮಂತರನ್ನು ಹೊಂದಿವೆ..!
Team Udayavani, Sep 14, 2022, 6:19 PM IST
Representative Image used
ನ್ಯೂಯಾರ್ಕ್; ರೆಸಿಡೆನ್ಸಿ ಸಲಹಾ ಸಂಸ್ಥೆಯಾದ ಹೆನ್ಲಿ ಮತ್ತು ಪಾರ್ಟ್‌ನರ್ಸ್ ಗ್ರೂಪ್‌ನ ವರದಿಯ ಪ್ರಕಾರ ನ್ಯೂಯಾರ್ಕ್, ಟೋಕಿಯೊ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶವು ಹೆಚ್ಚು ಮಿಲಿಯನೇರ್‌ಗಳು ವಾಸಿಸುವ ಸ್ಥಳಗಳಾಗಿವೆ.
ಅತಿ ಹೆಚ್ಚು ಮಿಲಿಯನೇರ್‌ಗಳನ್ನು ಹೊಂದಿರುವ ಟಾಪ್ 10 ನಗರಗಳಲ್ಲಿ ಅರ್ಧದಷ್ಟು ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದಾರೆ. ನ್ಯೂಯಾರ್ಕ್ ನಗರವು 2022 ರ ಮೊದಲಾರ್ಧದಲ್ಲಿ 12% ಮಿಲಿಯನೇರ್ ಗಳನ್ನು ಕಳೆದುಕೊಂಡಿತು ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶವು 4% ದಷ್ಟು ಹೆಚ್ಚಳ ಕಂಡಿತು. ನಾಲ್ಕನೇ ಸ್ಥಾನದಲ್ಲಿರುವ ಲಂಡನ್ ಶೇ.9ರಷ್ಟು ಮಿಲಿಯನೇರ್ ಗಳ ಸಂಖೆಯಲ್ಲಿ ಕುಸಿತ ಕಂಡಿದೆ.
ಈ ಮಿಲಿಯನೇರ್‌ಗಳನ್ನು 1 ಮಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆ ಮಾಡಬಹುದಾದ ಆಸ್ತಿ ಹೊಂದಿರುವವರು ಎಂದು ಎನ್ ಡಿ ಟಿವಿ ವರದಿ ವ್ಯಾಖ್ಯಾನಿಸಿದೆ.
ಗುಪ್ತಚರ ಸಂಸ್ಥೆ ನ್ಯೂ ವರ್ಲ್ಡ್ ವೆಲ್ತ್ ಸಂಗ್ರಹಿಸಿದ ಅಂಕಿ-ಅಂಶಗಳು, ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾದ ಶಾರ್ಜಾ ಈ ವರ್ಷ ಇದುವರೆಗೆ ವೇಗವಾಗಿ ಬೆಳೆಯುತ್ತಿರುವ ಮಿಲಿಯನೇರ್ ಜನಸಂಖ್ಯೆಯನ್ನು ಹೊಂದಿರುವುದಾಗಿ ತಿಳಿಸಿದೆ.
ಅಬುಧಾಬಿ ಮತ್ತು ದುಬೈ ಕೂಡ ವೇಗವಾಗಿ ಬೆಳೆಯುತ್ತಿರುವ ಮಿಲಿಯನೇರ್ ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ಒಂದಾಗಿದೆ.ಶ್ರೀಮಂತ ನಗರಗಳ ಪಟ್ಟಿಯಲ್ಲಿ ಕ್ರಮವಾಗಿ ಒಂಬತ್ತನೇ ಮತ್ತು 10 ನೇ ಸ್ಥಾನಗಳನ್ನು ಹೊಂದಿರುವ ಬೀಜಿಂಗ್ ಮತ್ತು ಶಾಂಘೈ ಈ ವಿಷಯದಲ್ಲಿ ತಮಗೆ ನಷ್ಟವಾಗಿದೆ ಎಂದು ಹೇಳಿಕೊಂಡಿವೆ. ಕಾರಣ ಅಮೇರಿಕ ಮತ್ತು ಚೀನಾದ ಕಡೆ ಮಿಲಿಯನೇರ್ ಗಳು ಹೆಚ್ಚಿನ ಆಸಕ್ತಿ ತೋರುತ್ತಿರುವುದಾಗಿ ತಿಳಿಸಿದೆ. ಅಬುಧಾಬಿ ಮತ್ತು ದುಬೈ ಕೂಡ ವೇಗವಾಗಿ ಬೆಳೆಯುತ್ತಿರುವ ಮಿಲಿಯನೇರ್ ಜನಸಂಖ್ಯೆಯನ್ನು ಹೊಂದಿರುವ ನಗರಗಳ ಪಟ್ಟಿಯನ್ನು ಸೇರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.