ದೇಶದಲ್ಲಿರುವ ಮತ್ತಷ್ಟು ಕಚೇರಿ ಮುಚ್ಚಿಸುತ್ತೇವೆ: ಚೀನ ವಿರುದ್ಧ ಡೊನಾಲ್ಡ್ ಟ್ರಂಪ್ ಕಿಡಿ
ನಡವಳಿಕೆ ಬದಲಾಯಿಸದಿದ್ದರೆ ಕಠಿನ ಕ್ರಮ ಅನಿವಾರ್ಯ ; ಸ್ಯಾನ್‌ಫ್ರಾನ್ಸಿಸ್ಕೋ ರಾಯಭಾರ ಕಚೇರಿಯಲ್ಲಿ ಅಡಗಿದ್ದಾರೆ ವಿಜ್ಞಾನಿ: FBI
Team Udayavani, Jul 24, 2020, 6:23 AM IST
ವಾಷಿಂಗ್ಟನ್/ಬೀಜಿಂಗ್: ದೇಶದಲ್ಲಿರುವ ಮತ್ತಷ್ಟು ಚೀನ ರಾಯಭಾರ ಕಚೇರಿಗಳನ್ನು ಮುಚ್ಚುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಬೌದ್ಧಿಕ ಆಸ್ತಿ ಹಾಗೂ ಖಾಸಗಿ ಮಾಹಿತಿಯನ್ನು ರಕ್ಷಿಸುವ ಕ್ರಮವಾಗಿ ಹ್ಯೂಸ್ಟನ್‌ನಲ್ಲಿರುವ ಚೀನ ರಾಯಭಾರ ಕಚೇರಿಯನ್ನು ಮುಚ್ಚುವಂತೆ ಸೂಚನೆ ನೀಡಿದ ಕೆಲವೇ ಗಂಟೆಗಳ ನಂತರ ಈ ಹೇಳಿಕೆ ಹೊರಬಿದ್ದಿದೆ.
ಈ ಹೇಳಿಕೆ ಎರಡು ರಾಷ್ಟ್ರಗಳ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್, ಚೀನದ ವಿರುದ್ಧ ಮತ್ತೂಮ್ಮೆ ಹರಿಹಾಯ್ದರು.
ಚೀನ ತನ್ನ ನಡವಳಿಕೆಯನ್ನು ಬದಲಾಯಿಸಿಕೊಳ್ಳದಿದ್ದರೆ ಚೀನದ ಇನ್ನಷ್ಟು ರಾಯಭಾರ ಕಚೇರಿಗಳನ್ನು ಮುಚ್ಚಲಾಗುವುದು ಎಂದರು.
ಈ ಮಧ್ಯೆ, ಹ್ಯೂಸ್ಟನ್‌ನಲ್ಲಿರುವ ಚೀನ ರಾಯಭಾರ ಕಚೇರಿಯನ್ನು ಮುಚ್ಚುವಂತೆ ನೀಡಿರುವ ಸೂಚನೆಯನ್ನು ಅಮೆರಿಕದ ಪ್ರಮುಖ ಸಂಸದರು ಸ್ವಾಗತಿಸಿದ್ದಾರೆ. ಅಮೆರಿಕದಲ್ಲಿ ಒಟ್ಟು 6 ಚೀನದ ರಾಯಭಾರ ಕಚೇರಿಗಳಿದ್ದು, ಅದರಲ್ಲಿ ಹ್ಯೂಸ್ಟನ್ ರಾಯಭಾರ ಕಚೇರಿಯೂ ಒಂದಾಗಿದೆ.
ಅಡಗಿರುವ ವಿಜ್ಞಾನಿ: ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಚೀನ ರಾಯಭಾರ ಕಚೇರಿಯಲ್ಲಿ ವಿಜ್ಞಾನಿ ಟಾಂಗ್ ಜುವಾನ್ ಅಡಗಿದ್ದಾರೆಂದು ಅಮೆರಿಕದ ತನಿಖಾ ಸಂಸ್ಥೆ ಆರೋಪಿಸಿದೆ. ಅವರ ವಿರುದ್ಧ ವೀಸಾ ವಂಚನೆ ಆರೋಪಗಳನ್ನೂ ಹೊರಿಸಲಾಗಿದೆ. ಅಮೆರಿಕಕ್ಕೆ ಪ್ರವೇಶಾವಕಾಶ ಪಡೆವ ನಿಟ್ಟಿನಲ್ಲಿಯೇ ಚೀನದ ಸೇನೆಯ ಜತೆಗೆ ಇರುವ ನಿಕಟ ಸಂಪರ್ಕದ ಮಾಹಿತಿ ನೀಡಿಲ್ಲ.
ಆಕೆ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ, ಅವರ ವಿರುದ್ಧ ಕೋರ್ಟ್‌ನಲ್ಲಿ ಜೂ.26 ರಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು. ನಂತರ ಅವರು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಪ್ರಬಲ ಆರೋಪ ಮಾಡಿದೆ.
ಅಪಪ್ರಚಾರವಿದೆ: ರಾಯಭಾರ ಕಚೇರಿ ಮುಚ್ಚುವ ಆದೇಶದ ಹಿಂದೆ ಅಪಪ್ರಚಾರ ಕೆಲಸ ಮಾಡಿದೆ ಎಂದು ಚೀನ ವಿದೇಶಾಂಗ ಸಚಿವಾಲಯ ದೂರಿದೆ. ಬೀಜಿಂಗ್‌ನಲ್ಲಿ ಮಾತನಾಡಿದ ವಾಂಗ್ ವೆನ್‌ಬಿನ್ ಅಮೆರಿಕ ಸರಕಾರದ ಆದೇಶ ಅಂತಾರಾಷ್ಟ್ರೀಯ ಕಾನೂನುಗಳಿಗೆ ಚ್ಯುತಿ ತರುತ್ತದೆ. 2 ದೇಶಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.