ಕೊಲಂಬಿಯಾದ ರಕ್ಷಣಾ ಸಚಿವ ಕಾರ್ಲೋಸ್ ಕೋವಿಡ್ 19ಗೆ ಬಲಿ
ಟ್ರುಜಿಲ್ಲೊ ಈ ತಿಂಗಳ ಆರಂಭದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು
Team Udayavani, Jan 27, 2021, 1:46 PM IST
ಬೊಗೋಟಾ: ಕೊಲಂಬಿಯಾದ ರಕ್ಷಣಾ ಸಚಿವ ಕಾರ್ಲೋಸ್ ಹೋಮ್ಸ್ ಟ್ರುಜಿಲ್ಲೊ (69) ಕೋವಿಡ್ 19 ಗೆ ಸಂಬಂಧಿಸಿದ ವೈರಲ್ ನ್ಯುಮೋನಿಯಾದಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ಮಂಗಳವಾರ(ಜ. 26) ತಿಳಿಸಿದೆ.
ಓದಿ : ಕೈಗಾರಿಕೆ ಸ್ಥಾಪಿಸಲು ಆದ್ಯತೆ: ಶಾಸಕಿ ರೂಪಕಲಾ
ಟ್ರುಜಿಲ್ಲೊ ಈ ತಿಂಗಳ ಆರಂಭದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು ಮತ್ತು ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ವರದಿ ಹೇಳಿದೆ.
ಕೊಲಂಬಿಯಾದ ರಕ್ಷಣಾ ಮಂತ್ರಿಯಾಗಿ ಸೇವೆ ಸಲ್ಲಿಸುದಕ್ಕಿಂತ ಮೊದಲು, ಅವರು ಅಕ್ರಮ ಸಶಸ್ತ್ರ, ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಗಣಿಗಾರಿಕೆ ಮತ್ತು ಇತರ ಅಪರಾಧ ಕೃತ್ಯಗಳ ವಿರುದ್ಧದ ಹೋರಾಟದಲ್ಲಿ ಮಿಲಿಟರಿ ಮತ್ತು ಪೊಲೀಸ್ ಕಾರ್ಯಾಚರಣೆಗಳನ್ನು ಸಂಘಟಿಸಿದ್ದರು. ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಕಾರ್ಲೋಸ್ ಹೋಮ್ಸ್ ಟ್ರುಜಿಲ್ಲೋ ಅವರ ಸಾವು ನನಗೆ ಅತೀವ ನೋವನ್ನು ತಂದಿದೆ. “ಕೊಲಂಬಿಯಾ ತನ್ನ ಅತ್ಯುತ್ತಮ ಪುರುಷರಲ್ಲಿ ಒಬ್ಬರನ್ನು ಇಂದು ಕಳೆದುಕೊಂಡಿದೆ.” ಎಂದು ಕೊಲಂಬಿಯಾದ ಅಧ್ಯಕ್ಷ ಇವಾನ್ ಡುಕ್ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಓದಿ : ಭಾರತದ ಈ ನಗರದಲ್ಲಿ ‘100 ರೂ. ದಾಟಿದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ .?’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.