ಉಳಿದಿದ್ದು ಬರೀ ಕಣ್ಣೀರ ಕಥೆಗಳು…

ಶವಾಗಾರದ ಮುಂದೆ ಎಲ್‌ಸಿಡಿ ಪರದೆ ಮೇಲೆ ಶವಗಳ ಅವಶೇಷ ಪ್ರದರ್ಶನ

Team Udayavani, Apr 23, 2019, 5:45 AM IST

19

ಸೋಮವಾರ ಮೃತರ ಅಂತ್ಯಸಂಸ್ಕಾರದ ವೇಳೆ ಸಂಬಂಧಿಕರ ರೋದನ.

ಕೊಲೊಂಬೋ: ಮುಂದೆ ದೊಡ್ಡ ಪರದೆಯೊಂದನ್ನು ಹಾಕಲಾಗಿತ್ತು. ಸುತ್ತಲೂ ಸಾವಿರಾರು ಮಂದಿ. ಎಲ್ಲರ ಕಣ್ಣುಗಳೂ ಆ ಪರದೆ ಯತ್ತಲೇ ನೆಟ್ಟಿದ್ದವು. ಆ ಕಣ್ಣುಗಳಲ್ಲಿ ಅವ್ಯಕ್ತ ಭಯವಿತ್ತು. ಸುತ್ತಲೂ ಸಂಪೂರ್ಣ ನಿಶ್ಶಬ್ಧ. ಆ ನಿಶ್ಶಬ್ದವೇ ಭಯಾನಕ ಎನಿಸು ವಂತಿತ್ತು. ಪರದೆಯಲ್ಲಿ ಒಂದೊಂದೇ ಚಿತ್ರಗಳು ಮೂಡುತ್ತಿದ್ದಂತೆ, ನಿಶ್ಶಬ್ಧವನ್ನು ಸೀಳಿ ಕಿರುಚಾಟ, ಆಕ್ರಂದನ ಮುಗಿಲುಮುಟ್ಟಿತ್ತು. ಕೆಲವರು ಆ ದೃಶ್ಯಗಳನ್ನು ನೋಡಲಾಗದೇ ಕಣ್ಣುಗಳನ್ನು ಮುಚ್ಚಿಕೊಂಡರೆ, ಇನ್ನು ಕೆಲವರು ಭೂಮಿಯೇ ಬಿರಿಯುವಂತೆ ಅಳತೊಡಗಿದರು, ಮತ್ತೆ ಕೆಲವರು ಕುಸಿದುಬಿದ್ದರು… ಶ್ರೀಲಂಕಾ ಈಸ್ಟರ್‌ ನರಮೇಧದ ಬಲಿಪಶುಗಳ ಚಿತ್ರಗಳನ್ನು ಸೋಮವಾರ ಕೊಲೊಂಬೋದ ಶವಾಗಾರದ ಮುಂದೆ ದೊಡ್ಡ ಪರದೆಯಲ್ಲಿ ಪ್ರದರ್ಶಿಸಿದಾಗ ಕಂಡುಬಂದ ಮನಕಲಕುವ ದೃಶ್ಯಗಳಿವು.

ಸ್ಫೋಟದ ತೀವ್ರತೆಗೆ ಮೃತದೇಹಗಳು ಗುರುತು ಸಿಗದಷ್ಟು ಚಿಂದಿಯಾಗಿರುವ ಕಾರಣ, ಸಂಬಂಧಿಕರಿಗೆ ತಮ್ಮವರನ್ನು ಪತ್ತೆ ಹಚ್ಚುವುದೇ ಅಸಾಧ್ಯ ಎನ್ನುವಂತಾಗಿದೆ. ಶವಾಗಾರದಲ್ಲಿ ಲೆಕ್ಕವಿಲ್ಲದಷ್ಟು ಪಾರ್ಥಿವ ಶರೀರಗಳ ಅವಶೇಷಗಳು ಬಿದ್ದಿವೆ, ತಮ್ಮವರ ಪತ್ತೆಗಾಗಿ ಸಾವಿರಾರು ಮಂದಿ ಸೋಮವಾರ ಶವಾಗಾರದತ್ತ ಧಾವಿಸಿದ್ದರು. ಕೊನೆಗೆ ಶವಾಗಾರದ ಮುಂದೆ ಬೃಹತ್‌ ಪರದೆಯೊಂದನ್ನು ಹಾಕಿ, ಒಂದೊಂದೇ ಮೃತದೇಹದ ಚಿತ್ರವನ್ನು ಪ್ರದರ್ಶಿಸಲಾಯಿತು. ಮುಂಡವಿಲ್ಲದ ರುಂಡಗಳು, ರುಂಡವಿಲ್ಲದ ಮುಂಡಗಳು, ಕೈ ಕಾಲುಗಳಿಲ್ಲದ ಶರೀರಗಳ ಚಿತ್ರಗಳು ಪರದೆಯಲ್ಲಿ ಮೂಡಿದಾಗ ಎಲ್ಲರ ಕಣ್ಣಾಲಿಗಳು ತುಂಬಿಬರುತ್ತಿದ್ದವು. ಇಂಥ ಬೀಭತ್ಸ ದಾಳಿಗೆ ಕಾರಣರಾದವರನ್ನು ಎಲ್ಲ ಮನಸ್ಸುಗಳೂ ಶಪಿಸತೊಡಗಿದ್ದವು.

ಕ್ಷಣಾರ್ಧದಲ್ಲಿ ಪತ್ನಿ ಶವವಾಗಿದ್ದಳು: 28 ವರ್ಷದ ಜನಕ ಶಕ್ತಿವೇಲ್‌ ತಮ್ಮ 18 ತಿಂಗಳ ಹಸುಗೂಸಿನೊಂದಿಗೆ ಶವಾಗಾರದ ಮೂಲೆಯೊಂ ದರಲ್ಲಿ ಆಘಾತಕ್ಕೊಳಗಾದವರಂತೆ ಕುಳಿತಿದ್ದರು. ಅವರ ಪತ್ನಿಯ ಮೃತದೇಹವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಸೈಂಟ್‌ ಅಂಥೋನಿ ಚರ್ಚ್‌ನ ಹೊರಗೆ ಶಕ್ತಿವೇಲ್‌ ಅಂಗಡಿ ನಡೆಸುತ್ತಿದ್ದರು. ರವಿವಾರ ಹಬ್ಬವಾದ ಕಾರಣ ಪತಿ, ಪತ್ನಿ ಮತ್ತು ಮಗು ಚರ್ಚ್‌ನೊಳಗಿದ್ದರು. “ಮಗು ಅಳತೊಡಗಿತೆಂದು ನಾನು ಅದನ್ನೆತ್ತಿಕೊಂಡು ಹೊರಕ್ಕೆ ಬಂದೆ. ಚರ್ಚಿನ ಬಾಗಿಲ ಬಳಿ ತಲುಪಿದ್ದೆ ಅಷ್ಟೆ. ಕಿವಿಗಡಚಿಕ್ಕುವಂತೆ ಶಬ್ದ ಸೀಳಿ ಬಂದು. ಒಳಕ್ಕೆ ಧಾವಿಸಿದಾಗ ನನ್ನ ಕಣ್ಣುಗಳನ್ನು ನನಗೇ ನಂಬಲಾಗಲಿಲ್ಲ. ಅಂಥ ದೃಶ್ಯಗಳನ್ನು ಕಂಡೆ. ಪತ್ನಿಗಾಗಿ ಹುಡುಕಾಡಿದೆ. ರಕ್ತದ ಮಡುವಲ್ಲಿ ಅವಳು ಕಾಣಿಸಲೇ ಇಲ್ಲ. ಅವಳು ಧರಿಸಿದ್ದ ಮದುವೆಯ ಉಂಗುರದಿಂದ ಇವತ್ತು ಶವದ ಗುರುತು ಸಿಕ್ಕಿತು’ ಎನ್ನುತ್ತಾ ಶಕ್ತಿವೇಲ್‌ ಕಣ್ಣೀರಾದರು.

ಮಕ್ಕಳನ್ನು ಕಳೆದುಕೊಂಡ ಹೆತ್ತವರು, ಅಪ್ಪ-ಅಮ್ಮನನ್ನು ಕಳೆದು ಕೊಂಡ ಮಕ್ಕಳು, ಪತಿಯನ್ನು ಕಳೆದುಕೊಂಡ ಮಹಿಳೆಯರು…. ಹೀಗೆ ಶವಾಗಾರದ ಸುತ್ತ ನೆರೆದಿದ್ದ ಒಬ್ಬೊಬ್ಬರ ಕಥೆಯೂ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಒಟ್ಟಾರೆ ಕೊಲೊಂಬೋ ದಲ್ಲೀಗ ಉಳಿದಿರುವುದು ಇಂಥ ಕಣ್ಣೀರ ಕಥೆಗಳು ಮಾತ್ರ.

ಗುಪ್ತಚರ ವೈಫ‌ಲ್ಯ ಕಾರಣವೇ?
ಇಷ್ಟೊಂದು ಭೀಕರ ದಾಳಿಗೆ ಗುಪ್ತಚರ ವೈಫ‌ಲ್ಯ ಕಾರಣವೇ ಎಂಬ ಪ್ರಶ್ನೆ ಈಗ ಮೂಡಿದೆ. ಸಂಭಾವ್ಯ ಆತ್ಮಾಹುತಿ ದಾಳಿ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡುವಲ್ಲಿ ಸೋತಿತೇ ಅಥವಾ ಸರಕಾರ ಕ್ರಮ ಕೈಗೊಳ್ಳುವಲ್ಲಿ ವಿಫ‌ಲವಾಯಿತೇ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕೆಲವೊಂದು ಗುಪ್ತಚರ ಅಧಿಕಾರಿಗಳಿಗೆ ದಾಳಿ ಬಗ್ಗೆ ಸುಳಿವು ಸಿಕ್ಕಿತ್ತಾದರೂ, ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಯಿತು. ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿದ್ದು ಏಕೆ ಎಂಬ ಬಗ್ಗೆ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಬ್ಬರು ಸಚಿವರು ಆಗ್ರಹಿಸಿದ್ದಾರೆ.

ಮತ್ತಷ್ಟು ದಾಳಿ ಸಾಧ್ಯತೆ: ಅಮೆರಿಕ
ರವಿವಾರದ ದಾಳಿಯ ನೋವಿನಲ್ಲಿರುವಾಗಲೇ ಶ್ರೀಲಂಕಾಗೆ ಅಮೆರಿಕವು ಮತ್ತೂಂದು ಶಾಕ್‌ ನೀಡಿದೆ. ಲಂಕೆಯಲ್ಲಿ ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಎಚ್ಚರಿಸಿದೆ. ಪ್ರವಾಸಿ ತಾಣಗಳು, ಸಾರಿಗೆ ಹಬ್‌ಗಳು, ಶಾಪಿಂಗ್‌ ಮಾಲ್‌, ಹೋಟೆಲ್‌, ಧಾರ್ಮಿಕ ಕೇಂದ್ರಗಳು, ಏರ್‌ಪೋರ್ಟ್‌ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಅಲ್ಲದೆ, ಆದಷ್ಟು ಎಚ್ಚರಿಕೆಯಿಂದಿರುವಂತೆ ಮತ್ತು ಲಂಕಾಗೆ ತೆರಳದಂತೆ ತಮ್ಮ ದೇಶದ ನಾಗರಿಕರಿಗೆ ಸೂಚನೆಯನ್ನೂ ನೀಡಿದೆ.

ಭಾರತದಲ್ಲೂ ಹೈಅಲರ್ಟ್‌
ಶ್ರೀಲಂಕಾ ಸರಣಿ ಸ್ಫೋಟ ಹಿನ್ನೆಲೆಯಲ್ಲಿ ಭಾರತದ ಕರಾವಳಿಯಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಭಾರತೀಯ ಕರಾ ವಳಿ ರಕ್ಷಕ ಪಡೆಯು ತಮ್ಮ ಕಣ್ಗಾವಲನ್ನು ಹೆಚ್ಚಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ಗಸ್ತು ತಿರುಗಲು ಹೆಚ್ಚುವರಿ ನೌಕೆಗಳು ಮತ್ತು ವಿಮಾನಗಳನ್ನು ನಿಯೋಜಿಸಿದೆ. ಸಮುದ್ರದ ಮೂಲಕ ಯಾವುದೇ ಭದ್ರತಾ ಬೆದರಿಕೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ಯುಟಿಕೋರಿನ್‌, ಮಂಡಪಂ ಮತ್ತು ಕರೈಕಲ್‌ನಲ್ಲಿನ ಎಲ್ಲ ನೌಕೆಗಳನ್ನೂ ಕಣ್ಗಾವಲಿಗೆ ನಿಯೋಜಿಸಿದ್ದೇವೆ. ಭಾನು ವಾರ ಸ್ಫೋಟದ ಮಾಹಿತಿ ಹೊರಬಂದ ಕೂಡಲೇ ನಿಗಾ ಹೆಚ್ಚಿಸಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಬಿಳಿ ವಸ್ತ್ರ ಕೆಂಪಾಗಿ ಬದಲಾಯಿತು
ದಾಳಿ ವೇಳೆ ಶಾಂಗ್ರಿಲಾ ಹೋಟೆಲ್‌ನಲ್ಲಿದ್ದ ಭಾರತೀಯ, 30 ವರ್ಷದ ಅಕ್ಷತ್‌ ಸರಫ್ ಭಾನು ವಾ ರದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ನಾನು, ಪತ್ನಿ ಮತ್ತು ಮಗಳು ಹೋಟೆಲ್‌ನ ಕೊಠಡಿಯಲ್ಲಿ ತಂಗಿದ್ದೆವು. ಮೊದಲ ಸ್ಫೋಟ ಉಂಟಾ ದಾಗ, ಕೊಠಡಿ ಕಂಪಿಸತೊಡಗಿತು. ನಾನು ಸಿಡಿಲು ಬಡಿ ಯಿತು ಎಂದು ಭಾವಿಸಿ, ಅದರ ಬಗ್ಗೆ ಹೆಚ್ಚು ಗಮನ ಕೊಡ ಲಿಲ್ಲ. ಏಕೆಂದರೆ, ಶ್ರೀಲಂಕಾದಲ್ಲಿ ಕೆಲವು ದಿನಗಳಿಂದ ಮಳೆ ಯಾಗುತ್ತಿತ್ತು. ಆದರೆ, ಎರಡನೇ ಸ್ಫೋಟ ಸಂಭವಿಸಿದಾಗ, ಏನೋ ಅನಾಹುತ ಆಗಿದೆ ಎಂಬುದು ಗೊತ್ತಾಯಿತು. ಕೂಡಲೇ ಮೂವರ ಪಾಸ್‌ಪೋರ್ಟ್‌ಗಳನ್ನೂ ಬಾಚಿ ಕೊಂಡು, ಕುಟುಂಬವನ್ನು ಕರೆದುಕೊಂಡು ತುರ್ತು ನಿರ್ಗ ಮನ ಬಾಗಿಲು ಮೂಲಕ ಕೆಳಗಿನ ಅಂತಸ್ತಿಗೆ ಓಡಿದೆವು. ಅಲ್ಲಿನ ದೃಶ್ಯ ನೋಡಿ ಆಘಾತಗೊಂಡೆ. ಹೋಟೆಲ್‌ನಲ್ಲಿ ಉಪಾಹಾರ ಸೇವಿಸುತ್ತಿದ್ದ ಅನೇಕರ ದೇಹಗಳಲ್ಲಿ ಚೂಪಾದ ಗಾಜಿನ ಚೂರುಗಳು ಹೊಕ್ಕಿದ್ದವು, ಶೆಫ್ಗಳ ಶುಭ್ರ ಬಿಳಿ ಬಣ್ಣದ ಬಟ್ಟೆಗಳೆಲ್ಲ ರಕ್ತ ಅಂಟಿಕೊಂಡು ಕೆಂಪಾಗಿ ಬದಲಾಗಿದ್ದವು. ಅದನ್ನು ನೋಡಿದಾಗ ತಲೆ ಸುತ್ತು ಬಂದ ಹಾಗಾಯಿತು ಎಂದಿದ್ದಾರೆ.

ಶ್ರೀಮಂತ ಉದ್ಯಮಿಯ 3 ಮಕ್ಕಳು ಬಲಿ?
ಡೆನ್ಮಾರ್ಕ್‌ನ ಅತಿ ಶ್ರೀಮಂತ ಉದ್ಯಮಿಯೆಂದೇ ಹೆಸರಾಗಿರುವ ಆ್ಯಂಡರ್ಸ್‌ ಹೋಲ್‌c ಪೊವೆನ್ಸನ್‌ ಅವರ ಮೂವರು ಮಕ್ಕಳು ರವಿವಾರ ಸಂಭವಿಸಿದ ಈಸ್ಟರ್‌ ಸ್ಫೋಟಗಳಲ್ಲಿ ಮೃತರಾಗಿದ್ದಾರೆ. ಈ ಕುರಿತಂತೆ, ಆ್ಯಂಡರ್ಸ್‌ ಹೋಲ್‌c ಅವರ ವಕ್ತಾರರು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಡೆನ್ಮಾರ್ಕ್‌ ನ ಕೆಲ ಪತ್ರಿಕೆಗಳು, ಸ್ಫೋಟ ನಡೆದ ದಿನ ಆ್ಯಂಡರ್ಸ್‌ ಕುಟುಂಬ ಶ್ರೀಲಂಕಾ ಪ್ರವಾಸದ ಲ್ಲಿತ್ತು ಎಂದು ಹೇಳಿವೆ. ಆ್ಯಂಡರ್ಸ್‌ ಹೋಲ್‌c ಅವರು, ಡೆನ್ಮಾರ್ಕ್‌ನ ದೊಡ್ಡ ಫ್ಯಾಷನ್‌ ಕಂಪನಿಯಾದ ಬೆಸ್ಟ್‌ ಸೆಲ್ಲರ್‌ನ ಒಡೆತನ ಹೊಂದಿದ್ದು, ಈ ಮಾತೃಸಂಸ್ಥೆಯಡಿ “ವೆರೋ ಮೊಡಾ’, “ಜ್ಯಾಕ್‌ ಆ್ಯಂಡ್‌ ಜೋನ್ಸ್‌’ ಎಂಬಿತ್ಯಾದಿ ಖ್ಯಾತ ಬ್ರಾಂಡ್‌ಗಳು ಅಸ್ತಿತ್ವದಲ್ಲಿವೆ.

ದಾಳಿಕೋರನ ಪತ್ನಿ, ಸಹೋದರಿ ಸಾವು!
ಮತ್ತೂಬ್ಬರಿಗೆ ಕೇಡು ಬಗೆಯಲು ಯತ್ನಿಸಿದರೆ ತನಗೇ ತಿರುಗುಬಾಣ ವಾಗುತ್ತದೆ ಎಂಬ ಮಾತಿನಂತೆ, ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಭಾನು ವಾರ ಹಲವರ‌ನ್ನು ಬಲಿಪಡೆದ ಆತ್ಮಾಹುತಿ ದಾಳಿಕೋರನ ಪತ್ನಿ ಹಾಗೂ ಸಹೋದರಿ, ಅದೇ ದಿನ ನಡೆದ ಮತ್ತೂಂದು ಸ್ಫೋಟದಲ್ಲಿ ಮೃತರಾಗಿದ್ದಾರೆ. ಕೊಲಂಬೋದ ಚರ್ಚ್‌ಗಳು, ಹೋಟೆಲ್‌ಗ‌ಳ ಮೇಲೆ ರವಿವಾರ ಬೆಳಗ್ಗೆ ದೊಡ್ಡ ಸರಣಿ ಸ್ಫೋಟಗಳು ಸಂಭವಿಸಿದ ಮೇಲೆ, ಉತ್ತರ ಕೊಲಂಬೋದ ವಸತಿ ಸಮುತ್ಛಯವೊಂದರಲ್ಲಿ ಸ್ಫೋಟ ಸಂಭವಿಸಿತ್ತು. ಅದರಲ್ಲಿ, ಶಾಂಗ್ರಿ-ಲಾ ದಾಳಿಕೋರನ ಪತ್ನಿ, ಸಹೋದರಿ ಪ್ರಾಣ ತೆತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಂಗ್ರಿ -ಲಾ ದಾಳಿಕೋರ ನ‌ನ್ನು ಇನ್ಸಾನ್‌ ಶೀಲವನ್‌ ಎಂದು ಗುರುತಿಸಲಾಗಿದೆ.

ಪ್ರತೀಕಾರದ ದಾಳಿಯೇ?
ಐಸಿಸ್‌ ಉಗ್ರ ಸಂಘಟನೆಗೆ ಸೇರ್ಪಡೆ ಗೊಳ್ಳಲು ಸಿರಿಯಾ ಅಥವಾ ಇರಾಕ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಲಂಕನ್ನರು ಹೋದ ಉದಾಹರಣೆಗಳಿಲ್ಲ. ಆದರೂ, ಕ್ರಿಶ್ಚಿಯನ್ನರು, ಚರ್ಚ್‌ ಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಇದನ್ನು ನೋಡಿದರೆ, ನ್ಯೂಜಿಲೆಂಡ್‌ನ‌ ಮಸೀದಿಯಲ್ಲಿ ನಡೆದ ದಾಳಿಗೆ ಉಗ್ರರು ನಡೆಸಿರುವ ಪ್ರತೀಕಾರ ಇದಾಗಿರಬಹುದೇ ಎಂಬ ಸಂದೇಹ ಮೂಡು ತ್ತದೆ ಎಂದು ಮಾಜಿ ರಾಜತಾಂತ್ರಿಕ ಅಧಿಕಾರಿ ಜಿ. ಪಾರ್ಥಸಾರಥಿ ಹೇಳಿದ್ದಾರೆ.

ಎನ್‌ಟಿಜೆ ಹಿಂದೆ ಯಾರಿದ್ದಾರೆ?
ನ್ಯಾಷನಲ್‌ ತೌಹೀದ್‌ ಜಮಾತ್‌(ಎನ್‌ಟಿಜೆ). ಶ್ರೀಲಂಕಾ ಸರಕಾರದ ವಕ್ತಾರರು ಈ ಹೆಸರು ಹೇಳುವವರೆಗೆ ಯಾರಿಗೂ ಈ ಸಂಘಟನೆ ಬಗ್ಗೆ ಮಾಹಿತಿ ಯಿರಲಿಲ್ಲ. ಆದರೆ, ಈ ಸಂಘಟನೆಯು ಶ್ರೀಲಂಕಾ ತೌಹೀದ್‌ ಜಮಾತ್‌ ಎಂಬ ಉಗ್ರ ಸಂಘಟನೆ ಯಿಂದ ಪ್ರತ್ಯೇಕ ಗೊಂಡ ಗುಂಪು ಎಂದು ಬಿಬಿಸಿ ವರದಿ ಮಾಡಿದೆ. ಮೊಹಮ್ಮದ್‌ ಝಹ್ರಾನ್‌ ಇದರ ನಾಯಕ. ಇಷ್ಟೊಂದು ಸಣ್ಣ ಗುಂಪು ಇಂಥ ಭೀಕರ ಕೃತ್ಯ ಎಸಗಬೇಕೆಂ ದರೆ, ಇದಕ್ಕೆ ಅಂತಾರಾಷ್ಟ್ರೀಯ ನೆರವು ಸಿಕ್ಕಿರಲೇಬೇಕು ಎಂಬ ಶಂಕೆ ದಟ್ಟವಾಗಿದೆ.

ಟಾಪ್ ನ್ಯೂಸ್

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

America: ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.