ಬನ್ನಿ, ಹೂಡಿಕೆ ಮಾಡಿ…ಭಾರತದ ಬಗ್ಗೆ ಆಶಾವಾದ ಬಿತ್ತಿದ ಮೋದಿ
Team Udayavani, Nov 14, 2017, 6:00 AM IST
ಮನಿಲಾ: ಆಸಿಯಾನ್ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ಫಿಲಿಪ್ಪೀನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಬಗ್ಗೆ ಹೂಡಿಕೆಯ ಆಶಾವಾದ ಬಿತ್ತಿದ್ದಾರೆ.
ಆಸಿಯಾನ್ ಬಿಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿದ ಅವರು, ಸದ್ಯ ಭಾರತದಲ್ಲಿ ಹೂಡಿಕೆಗೆ ಪೂರಕವಾಗಿ ಉದ್ಭವವಾಗಿರುವ ಸನ್ನಿವೇಶಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈಗ ಭಾರತದಲ್ಲಿ ಹೂಡಿಕೆ ಮಾಡುವುದು ಸುಲಭ. ಹಿಂದಿನ ಅಡೆತಡೆಗಳನ್ನು ತೆಗೆದು ಹಾಕಿದ್ದೇವೆ. ಯಾವುದೇ ಭಯವಿಲ್ಲದೇ ಹೂಡಿಕೆ ಮಾಡಬಹುದು ಬನ್ನಿ ಎಂದು ಉದ್ದಿಮೆದಾರರಿಗೆ ಆಹ್ವಾನ ನೀಡಿದ್ದಾರೆ.
ಸದ್ಯ ಶೇ.90ರಷ್ಟು ಎಫ್ಡಿಐ ವಲಯಗಳಲ್ಲಿ ಸ್ವಯಂಚಾಲಿತವಾಗಿ ಒಪ್ಪಿಗೆ ಸಿಗಬಹುದಾದ ಸ್ಥಿತಿ ಸೃಷ್ಟಿ ಮಾಡಲಾಗಿದೆ ಎಂದು ಮೋದಿ ಅವರು ಗುಣಗಾನ ಮಾಡಿದರು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಆಧಾರ್ ಬಗ್ಗೆಯೂ ಶ್ಲಾ ಸಿದ ಅವರು, ಇದರಿಂದಾಗಿ ಆರ್ಥಿಕ ವಹಿವಾಟು ಹೆಚ್ಚಳ ವಾಗಿದೆ ಎಂದರು. ಶೇ.34ರಷ್ಟು ಹೊಸ ತೆರಿಗೆದಾರರು ಹುಟ್ಟಿಕೊಂಡಿದ್ದಾರೆ ಎಂದರು. ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂದ ಸೂತ್ರದಡಿಯಲ್ಲಿ ಕೆಲಸ ಮಾಡುತ್ತಿದ್ದು, ವಿಶ್ವಬ್ಯಾಂಕ್ ಕೂಡ ಸುಲಭವಾಗಿ ಉದ್ದಿಮೆ ಶುರುಮಾಡಬಹುದಾದ ಶ್ರೇಯಾಂಕದಲ್ಲಿ 30 ಸ್ಥಾನ ಮೇಲೇರಿಸಿದೆ. ಈಗ ನಾವು 100ರ ಶ್ರೇಣಿಯೊಳಗೆ ಬಂದಿದ್ದೇವೆ ಎಂದು ಹೇಳಿದರು.
ಪರಿಶ್ರಮದಿಂದ ಕೆಲಸ ಮಾಡಿ: ಮನಿಲಾದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 21 ನೇ ಶತಮಾನವನ್ನು ಭಾರತೀಯರದ್ದಾಗಿ ಮಾಡುವ ಹೊಣೆ ನಮ್ಮ ಮೇಲೆ ಇದೆ. ಇದಕ್ಕಾಗಿ ಹಗಲು ರಾತ್ರಿ ಪರಿಶ್ರಮದಿಂದ ಕೆಲಸ ಮಾಡುವ ಅವಶ್ಯಕತೆ ನಮ್ಮ-ನಿಮ್ಮೆಲ್ಲರ ಮೇಲೆ ಇದೆ ಎಂದರು. ದೇಶವನ್ನು ನಾವೀಗ ಹೊಸ ಹಾದಿಯತ್ತ ಕೊಂಡೊಯ್ಯಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ನಾವು ಗುರುತಿಸಿಕೊಳ್ಳಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
ಚತುಷೊRàನ ವ್ಯೂಹ; ಚೀನಾಕ್ಕೆ ಏಕೆ ಹೆದರಿಕೆ?: ಭಾನುವಾರವಷ್ಟೇ ಭಾರತ-ಅಮೆರಿಕ-ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿ ನಾಲ್ಕು ದೇಶಗಳ ಒಂದು ಒಕ್ಕೂಟ ನಿರ್ಮಿಸಿಕೊಳ್ಳಲು ನಿರ್ಧರಿಸಿವೆ. ಈ ಬಗ್ಗೆಯೂ ಮನಿಲಾದಲ್ಲೇ ನಿರ್ಧಾರ ವಾಗಿದೆ. ಈ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಚೀನಾ, ಇಂಥ ಒಕ್ಕೂಟಗಳು ಮುಕ್ತವಾಗಿರಬೇಕು ಮತ್ತು ಎಲ್ಲರನ್ನು ಒಳಗೊಳ್ಳುವಂತಿರಬೇಕು. ಅಲ್ಲದೆ ಮೂರನೆಯವರನ್ನು ಟಾರ್ಗೆಟ್ ಮಾಡುವಂತಿರ ಬಾರದು ಎಂದು ಹೇಳಿದೆ.
ಆದರೂ ಚೀನಾಗೆ ಈ ವ್ಯೂಹದ ಬಗ್ಗೆ ಅಂಜಿಕೆ ಶುರುವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ನಾಲ್ಕೂ ದೇಶಗಳ ಮಿಲಿಟರಿ ಶಕ್ತಿ ಒಂದಾದರೆ, ಅದು ಇಡೀ ಜಗತ್ತಿಗೇ ಅಂಜಿಕೆ ತರುವಂಥದ್ದಾಗಿದೆ. ಇಂಡೋ-ಫೆಸಿಫಿಕ್‌ನ ಖದರ್ ಬೇರೆಯಾಗುತ್ತದೆ. ಚೀನಾ ಈ ನಾಲ್ಕು ದೇಶಗಳೊಂದಿಗೆ ವ್ಯಾಪಾರ-ವಹಿವಾಟು ನಡೆಸುತ್ತಿದೆ.
ಆಗ ಈ ನಾಲ್ಕು ದೇಶಗಳು ಒಟ್ಟಾಗಿ ಚೀನಾ ಮೇಲೆ ಪ್ರಭಾವ ಬೀರಿ ಸಮಚಿತ್ತದ ವ್ಯಾಪಾರ-ವಹಿವಾಟು ನಡೆಸುವಂತೆ ಮಾಡಬಹುದು. ಅಲ್ಲದೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಈ ದೇಶಗಳು ತೊಡಕಾಗಬಹುದು.
ಭಾರತದ ಬಗ್ಗೆ ಡೋನಾಲ್ಡ್ ಟ್ರಂಪ್ ಮೆಚ್ಚುಗೆ
ಆಸಿಯಾನ್ ಶೃಂಗದ ಅಂಗವಾಗಿ ಮನಿಲಾಗೆ ಬಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಭಾರತ ಮತ್ತು ಮೋದಿ ಆಡಳಿತವನ್ನು ಕೊಂಡಾಡುತ್ತಿರುವ ಟ್ರಂಪ್, ಈ ಬಾರಿಯೂ ಅದೇ ಮಾತುಗಳನ್ನು ಉಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ಅವರು, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತಿದೆ. ಟ್ರಂಪ್ ಅವರು ಎಲ್ಲೇ ಹೋಗಲಿ, ಅಲ್ಲಿ ಭಾರತವನ್ನು ಹೊಗಳಿ ಬರುತ್ತಿದ್ದಾರೆ. ಇದು ನಮ್ಮ ಎರಡು ದೇಶಗಳ ನಡುವಿನ ಗಟ್ಟಿ ಬಾಂಧವ್ಯವನ್ನು ಸಾದರಪಡಿಸುತ್ತಿದೆ. ನಾವು ಕೂಡ ಅಮೆರಿಕ ಹಾಗೂ ಇಡೀ ಜಗತ್ತು ಭಾರತದಿಂದ ಏನನ್ನು ನಿರೀಕ್ಷೆ ಮಾಡುತ್ತಿದೆಯೋ ಅದನ್ನು ಪೂರೈಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ಬಳಿಕ ಮಾತನಾಡಿದ ಟ್ರಂಪ್ ಅವರು, ಮೋದಿ ಅವರನ್ನು ಒಬ್ಬ ಅತ್ಯುತ್ತಮ ಸ್ನೇಹಿತ ಮತ್ತು ಉತ್ತಮ ಜೆಂಟಲ್‌ಮೆನ್ ಎಂದು ಬಣ್ಣಿಸಿದರು. ಈ ಹಿಂದೆ ಶ್ವೇತಭವನದಲ್ಲೇ ನಾವಿಬ್ಬರು ಭೇಟಿಯಾಗಿದ್ದೆವು. ಆಗಿನಿಂದ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಆದೆವು. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಾವಿಬ್ಬರು ಇದೇ ರೀತಿಯಲ್ಲಿ ಸಂಬಂಧ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.