ರೋಗಗ್ರಸ್ತ ಊರುಗಳೀಗ “ದೆವ್ವದ ನಗರ’!
Team Udayavani, Feb 10, 2020, 6:40 AM IST
ಬೀಜಿಂಗ್: ಅದು ಚೀನದ ಜಿಂಗ್‌ಶಾನ್ ಪಾರ್ಕ್. ಇಲ್ಲಿ ಹಿಮದ ಮಳೆ ಆರಂಭವಾಗಿ 2 ದಿನಗಳಾದವು. ಈ ಅಪರೂಪದ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಪ್ರತಿ ಬಾರಿ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಿದ್ದರು. ಆದರೆ, ಈ ಬಾರಿ… ನೀರವ!
ಹೌದು, ಕೊರೊನಾವೈರಸ್ ಎಂಬ ಮಹಾಮಾರಿ ಯೊಂದು ಚೀನವನ್ನು ಹಿಂದೆಂದೂ ಕಂಡರಿಯದಂತಹ “ನರಕದ ಕೂಪ’ಕ್ಕೆ ತಳ್ಳಿದೆ. 800ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿರುವ ಈ ಸೋಂಕಿ ನಿಂದಾಗಿ, ರಾಜಧಾನಿಯಿಂದ ಹಿಡಿದು ಕುಗ್ರಾಮಗಳವರೆಗೆ ಇಡೀ ಚೀನಗೆ ಚೀನವೇ ಅಕ್ಷರಶಃ ಸ್ತಬ್ಧವಾಗಿದೆ. ಜನರಿಂದ ಗಿಜಿಗುಡುತ್ತಿದ್ದ ರಸ್ತೆಗಳು, ಮಾಲ್‌ಗಳು, ಪಾರ್ಕ್‌ಗಳು, ಸಿನಿಮಾ ಮಂದಿರಗಳಲ್ಲಿ ಶ್ಮಶಾನ ಮೌನ ಆವರಿಸಿದೆ. ಜನರು ಕಳೆದೊಂದು ತಿಂಗಳಿಂದ ಗೃಹಬಂಧನದಲ್ಲಿದ್ದಾರೆ. ಮನೆಗಳಿಂದ ಹೊರಗೆ ಕಾಲಿಡಲೂ ಆಗದ ಸ್ಥಿತಿ. ಅಕ್ಕಪಕ್ಕದ ಮನೆಯವರೊಂದಿಗೆ ಹರಟಲೂ ಆಗದಷ್ಟು ಭಯ, ಶಾಲೆಗಳು, ಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ, ಕಣ್ಣ ಮುಂದೆ ಅನಿಶ್ಚಿತತೆಯ ದೊಡ್ಡ ಗೋಡೆ ಎದ್ದಿದೆ. ಇದಕ್ಕೆಲ್ಲ ಕಾರಣ ಆ ಮಾರಣಾಂತಿಕ ವೈರಸ್. ದಿನ ಬೆಳಗಾಗುತ್ತಿದ್ದಂತೆ, ಎಲ್ಲರೂ ಮೊದಲು ನೋಡುವುದೇ ತಮ್ಮ ಮೊಬೈಲ್ ಫೋನ್‌ಗಳನ್ನು. ಸಾವಿನ ಸಂಖ್ಯೆ ಎಷ್ಟಾಗಿದೆ, ಸೋಂಕಿತರ ಸಂಖ್ಯೆ ತಗ್ಗಿದೆಯೇ ಎಂಬ ಮಾಹಿತಿಗಾಗಿ ಕಾಯುತ್ತಿರುತ್ತೇವೆ ಎನ್ನುತ್ತಾರೆ ಚೀನ ನಾಗರಿಕರು.
ಹೀಗಾಗಿದೆ ನರ್ಸ್‌ಗಳ ಮುಖ
ವೈರಸ್ ವಕ್ಕರಿಸಿದಾಗಿನಿಂದಲೂ ನಿರಂತರವಾಗಿ ಹಗಲುರಾತ್ರಿ ದುಡಿಯುತ್ತಿರುವವರೆಂದರೆ ವೈದ್ಯಕೀಯ ಸಿಬಂದಿ. ಎಲ್ಲ ಆಸ್ಪತ್ರೆಗಳೂ ಫುಲ್ ರಷ್. ವೈದ್ಯರು, ದಾದಿಯರು, ಇತರೆ ಸಿಬಂದಿಗೆ ದಿನದ 24 ಗಂಟೆಯೂ ಕೆಲಸವೋ ಕೆಲಸ. ಅದರ ಜತೆಗೆ ತಾವೂ ಮುಖಕ್ಕೆ ಮಾಸ್ಕ್ ಧರಿಸಿಯೇ ಇರಬೇಕು. ಹೀಗೆ ದಿನವಿಡೀ ಮಾಸ್ಕ್ ಧರಿಸಿದ್ದರ ಪರಿಣಾಮವೆಂಬಂತೆ, ಅವರ ಮುಖಗಳಿಡೀ ಗಾಯದ ಗುರುತುಗಳು ಮೂಡಿವೆ. ಅವುಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.