ಕೊರೊನಾ ವೈರಸ್: 2,000 ತಲುಪಿದ ಮೃತರ ಸಂಖ್ಯೆ, ವುಹಾನ್ ಆಸ್ಪತ್ರೆಯ ಮುಖ್ಯಸ್ಥನೂ ಸಾವು
Team Udayavani, Feb 19, 2020, 9:35 AM IST
ಚೀನಾ: ಕೊರೋನಾ ಸೋಂಕು ಪೀಡಿತರ ಪ್ರಕರಣಗಳು ವುಹಾನ್ ನಲ್ಲಿ ಇಳಿಕೆಯಾಗಿದ್ದು ಆದರೇ ಸಾವನ್ನಪ್ಪುವವರ ಪ್ರಮಾಣ ಗಣನೀಯವಾಗಿ ಏರಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೊರೋನಾ ಮರಣ ಮೃದಂಗದ ಕುರಿತು ಕಳವಳ ವ್ಯಕ್ತಪಡಿಸಿದ್ದು ನಿಖರ ಮಾಹಿತಿ ತಿಳಿಯುತ್ತಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದೆ.
ಹುಬೈ ನಲ್ಲಿ ಮಂಗಳವಾರ 1,693 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇತರೆ ದಿನಗಳಿಗೆ ಹೋಲಿಸಿದರೆ ಸೋಂಕು ತಗುಲಿದವರ ಪ್ರಮಾಣ ಇಳಿಕೆಯಾಗಿದೆ. ಆದರೆ ಮೃತರಾದವರ ಸಂಖ್ಯೆ ಮಾತ್ರ ಏರಿಕೆಯಾಗಿದ್ದು ಮಂಗಳವಾರ ಒಂದೇ ದಿನ 132 ಜನರು ಬಲಿಯಾಗಿದ್ದಾರೆ. ಹಾಗಾಗಿ ಚೀನಾದಲ್ಲಿ ಸೋಂಕು ತಗುಲಿದವರ ಪ್ರಮಾಣ ಒಟ್ಟಾರೆಯಾಗಿ 74,000 ತಲುಪಿದ್ದು, ಮೃತರ ಸಂಕ್ಯೆ 2,000 ತಲುಪಿದೆ.
ಕೊರೋನಾ ಕೇಂದ್ರಬಿಂದುವಾದ ವುಹಾನ್ ನ ಆಸ್ಪತ್ರೆಯೊಂದರ ಮುಖ್ಯಸ್ಥ ಕೂಡ ಈ ಮಾರಾಣಾಂತಿಕ ವೈರಸ್ ಗೆ ಬಲಿಯಾಗಿದ್ದು ಪ್ರಮುಖ ವ್ಯಕ್ತಿಯೊಬ್ಬರು ಬಲಿಯಾದ ಮೊದಲನೆ ಪ್ರಕರಣವೆನಿಸಿಕೊಂಡಿದೆ.
ಈ ವೈರಸ್ ಜಾಗತಿಕ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದ್ದು, ತೈಲ ಬೆಲೆಗಳು, ಷೇರು ಮಾರುಕಟ್ಟೆಗಳು ಕುಸಿದಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೂಸ್ ಅದಾನೋಮ್ ಘೀಬ್ರೆಯಸಸ್ ಪ್ರತಿಕ್ರಿಯೆ ನೀಡಿ, ಚೀನಾದ ದಾಖಲೆಗಳ ಪ್ರಕಾರ ಕೊರೋನಾ ವೈರಸ್ ನ ಹೊಸ ಪ್ರಕರಣ ಸಂಖ್ಯೆ ಇಳಿಮುಖವಾಗಿದೆ. ಆದರೆ ಇದೇ ಈ ಮಾಹಿತಿ ಅಂತಿಮವಲ್ಲ ಎಂದು ಪುನರೆಚ್ಚರಿಸಿದ್ದಾರೆ.
ಚೀನಾ ಮಾತ್ರವಲ್ಲದೆ ಇತರೆ ದೇಶಗಳಲ್ಲಿ 827 ಪ್ರಕರಣಗಳು ಪತ್ತೆಯಾಗಿದ್ದು 5 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಜಪಾನ್ ಪ್ರಜೆಗಳು ಎಂದು ಮಾಧ್ಯಮದ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.