360ಕ್ಕೇರಿದ ಕೊರೊನಾ ಸಾವಿನ ಸಂಖ್ಯೆ: ಭಾರತದಲ್ಲಿ ಭಾರಿ ಕಟ್ಟೆಚ್ಚರ
Team Udayavani, Feb 3, 2020, 9:14 AM IST
ಹೊಸದಿಲ್ಲಿ/ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಗೆ ಮತ್ತಷ್ಟು ಬಲಿಯಾಗಿದೆ. ಸದ್ಯ ಈ ವೈರಸ್ ನಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ 360ಕ್ಕೇರಿದ್ದು, 2829 ಜನರಲ್ಲಿ ಈ ಕಿಲ್ಲರ್ ವೈರಸ್ ಇರುವುದು ಖಚಿತವಾಗಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಈ ವೈರಸ್ ಹಬ್ಬದಂತೆ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ. ರವಿವಾರ ಭಾರತದ ಎರಡನೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಈ ಎರಡೂ ಪ್ರಕರಣಗಳು ಕೇರಳದಲ್ಲಿಯೇ ಪತ್ತೆಯಾಗಿದೆ.
ಚೀನಾ ನಾಗರಿಕರು ಮತ್ತು ಅಲ್ಲಿ ವಾಸವಿರುವ ವಿದೇಶಿಯರಿಗೆ ಇ-ವೀಸಾ ವಿತರಿಸುವ ವ್ಯವಸ್ಥೆಗೆ ಭಾರತವು ತಾತ್ಕಾಲಿಕ ನಿರ್ಬಂಧ ಹೇರಿದೆ. ಈಗಾಗಲೇ ವಿತರಿಸಲಾಗಿರುವ ಇ-ವೀಸಾಗಳು ಕೂಡಾ ರವಿವಾರದಿಂದ ಅಮಾನ್ಯವಾಗಿದೆ.
ಭಾರತೀಯರ ಜೊತೆ ಮಾಲ್ಡೀವ್ಸ್ ಪ್ರಜೆಗಳು ವಾಪಾಸ್
ರವಿವಾರ ವುಹಾನ್‌ನಿಂದ ಮತ್ತೆ 323 ಭಾರತೀಯರು ಏರ್ ಇಂಡಿಯಾ ವಿಮಾನದಲ್ಲಿ ಸ್ವದೇಶಕ್ಕೆ ಮರಳಿದ್ದಾರೆ. ಇವರೊಂದಿಗೆ ಮಾಲ್ಡೀವ್ಸ್‌ನ 7 ನಾಗರಿಕರನ್ನೂ ಕರೆತರಲಾಗಿದೆ. ಇವರೆಲ್ಲರನ್ನೂ ಸೇನೆ ನಿರ್ಮಿಸಿರುವ ನಿಗಾ ಕೇಂದ್ರಕ್ಕೆ ಕರೆದೊಯ್ದು, 2 ವಾರಗಳ ಕಾಲ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಮಾಲ್ಡೀವ್ಸ್‌ನ 7 ಮಂದಿಯನ್ನು ಭಾರತಕ್ಕೆ ಕರೆತಂದು ಮಾನವೀಯತೆ ತೋರಿದ್ದಕ್ಕೆ ಭಾರತ ಸರಕಾರಕ್ಕೆ ಅಲ್ಲಿನ ಸರಕಾರ ಟ್ವೀಟ್ ಮೂಲಕ ಧನ್ಯವಾದ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 95ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.