ಮೆಕ್ಕಾ , ಮದೀನಾ ಯಾತ್ರೆಗೆ ನಿರ್ಬಂಧ
Team Udayavani, Feb 28, 2020, 6:32 AM IST
ಸಾಂದರ್ಭಿಕ ಚಿತ್ರ
ರಿಯಾದ್: ವಿಶ್ವಾದ್ಯಂತ ವ್ಯಾಪಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಮುಸ್ಲಿಮರ ವಾರ್ಷಿಕ ಹಜ್ ಯಾತ್ರೆ ಮತ್ತು ಉಮ್ರಾ ಮೇಲೂ ಪರಿಣಾಮ ಬೀರಿದೆ. ಸದ್ಯಕ್ಕೆ ಮೆಕ್ಕಾ ಮತ್ತು ಮದೀನಾ ಭೇಟಿಗೆ ನಿಷೇಧ ಹೇರಿರುವ ಸೌದಿ ಅರೇಬಿಯಾವು ಇಸ್ಲಾಂನ ಪವಿತ್ರ ಯಾತ್ರಾಸ್ಥಳಕ್ಕೆ ಆಗಮಿಸುವವರ ವೀಸಾಗಳನ್ನು ರದ್ದು ಮಾಡಿದೆ.
ಪ್ರತಿ ವರ್ಷವೂ ಮೆಕ್ಕಾ ಮತ್ತು ಮದೀನಾಗಳಿಗೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಹಜ್ ಯಾತ್ರೆಯ ದಿನಗಳನ್ನು ಹೊರತುಪಡಿಸಿಯೂ ಉಮ್ರಾ ಯಾತ್ರೆಗಾಗಿ ಆಗಮಿಸುತ್ತಾರೆ. ಸದ್ಯಕ್ಕೆ ಸೌದಿ ಅರೇಬಿಯಾ ದಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟ ಪ್ರಕರಣಗಳು ವರದಿ ಯಾಗಿಲ್ಲ. ಆದರೆ ನೆರೆಹೊರೆಯ ರಾಷ್ಟ್ರಗಳಲ್ಲಿ, ಅಂದರೆ ಒಟ್ಟಾರೆ ಮಧ್ಯ ಪ್ರಾಚ್ಯದಲ್ಲಿ 240 ಮಂದಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ ಯಾರಿಗೂ ವೀಸಾ ನೀಡದಿರಲು ನಿರ್ಧರಿಸಲಾಗಿದೆ ಎಂದು ಸೌದಿ ಸರಕಾರ ತಿಳಿಸಿದೆ.
ಈ ನಿರ್ಬಂಧ ಎಷ್ಟು ದಿನಗಳ ಕಾಲ ಇರಲಿದೆ ಎಂಬ ಮಾಹಿತಿಯನ್ನು ಸರಕಾರ ನೀಡಿಲ್ಲ. ಹೀಗಾಗಿ ಮೆಕ್ಕಾ ಯಾತ್ರೆ ತೆರಳಲು ಸಿದ್ಧತೆ ನಡೆಸಿದ ಲಕ್ಷಾಂತರ ಮಂದಿ ಗೊಂದಲದಲ್ಲಿ ಸಿಲುಕುವಂತಾಗಿದೆ. ಜಗತ್ತಿನಾದ್ಯಂತ ಕೊರೊನಾ ಪೀಡಿತ ಸಂಖ್ಯೆ ಹೆಚ್ಚುತ್ತಿದ್ದು, ಇರಾನ್‌ನಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ. ಚೀನದಲ್ಲಿ ಮೃತರ ಸಂಖ್ಯೆ 2,744ಕ್ಕೆ ಏರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.