ಕೊರೊನಾ ಮೃತರ ಸಂಖ್ಯೆ 636ಕ್ಕೆ ಏರಿಕೆ, ಅಪಾಯದ ಬಗ್ಗೆ ಎಚ್ಚರಿಸಿದ್ದ ವೈದ್ಯನೂ ಸಾವು
Team Udayavani, Feb 7, 2020, 9:00 AM IST
ಚೀನಾ: ಕೊರೊನಾ ವೈರಸ್ ದಾಳಿಗೂ ಮುನ್ನವೇ ಅದರ ಅಪಾಯದ ಬಗ್ಗೆ ಜಗತ್ತಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದ ಚೀನದ ಎಂಟು ವೈದ್ಯರಲ್ಲೊಬ್ಬರಾದ ಲೀ ವೆನ್ಲಿಯಾಂಗ್ ಅದೇ ವೈರಸ್ಗೆ ತುತ್ತಾಗಿ ಪ್ರಾಣ ತೆತ್ತಿದ್ದಾರೆ. ವುಹಾನ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ ಎಂದು ಚೀನ ಸರಕಾರ ಪ್ರಕಟಿಸಿದೆ.
ಗುರುವಾರ ಕೊರೋನಾ ವೈರಸ್ ಗೆ 73 ಜನರು ಬಲಿಯಾಗಿದ್ದು ಆ ಮೂಲಕ ಮೃತರ ಸಂಖ್ಯೆ 636ಕ್ಕೆ ಏರಿದೆ. ಹುಬೈ ಪ್ರಾಂತ್ಯವೊಂದರಲ್ಲೆ 69 ಜನರು ಸಾವನ್ನಪ್ಪಿದ್ದಾರೆ. 3143 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 31,161 ಜನರಲ್ಲಿ ಅಧಿಕೃತವಾಗಿ ವೈರಾಣು ಪತ್ತೆಯಾಗಿದೆ ಎಂದು ಚೀನಾದ ಆರೋಗ್ಯ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ, ಜಗತ್ತಿನಾದ್ಯಂತ 15 ಸುಸಜ್ಜಿತ ಪ್ರಯೋಗಾಲಯಗಳು ಕೊರೋನಾ ವೈರಸ್ ಪತ್ತೆಗಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದೆ. ಆ ಪಟ್ಟಿಯಲ್ಲಿ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಾಜಿ ಪ್ರಯೋಗಾಲಯ ಕೂಡ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.