ಕೋವಿಡ್ 19 : ಸತ್ತವರಲ್ಲಿ ಶೇ.95ರಷ್ಟು ಮಂದಿ ವೃದ್ಧರು
Team Udayavani, Apr 3, 2020, 12:45 PM IST
ಜಿನಿವಾ: ಯುರೋಪ್ ಪ್ರಾಂತ್ಯದಲ್ಲಿ ಕೋವಿಡ್ 19 ಸೋಂಕಿಗೆ ಬಲಿಯಾದವರ ಪೈಕಿ ಶೇ.95ರಷ್ಟು ಜನ 60 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸದ್ಯ ಸೋಂಕಿಗೆ ಬಲಿಯಾಗಿರುವವರ ಮತ್ತು ಪೀಡಿತರ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಹಂಚಿಕೊಂಡಿದ್ದು, ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಕೋವಿಡ್ 19 ವೈರಸ್‌ನಿಂದ ಸಾವನ್ನಪ್ಪಿದ ಶೇ.95ರಷ್ಟು ಹೆಚ್ಚು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೂ, ಕೋವಿಡ್ 19 ವಯಸ್ಸು ನೋಡಿ ಬರುವುದಿಲ್ಲ .
ಕೇವಲ ಹಿರಿಯರು ಮಾತ್ರ ಕೋವಿಡ್ 19 ದಿಂದ ಸಾವಿಗೆ ತುತ್ತಾಗುತ್ತಾರೆ ಎಂಬ ಕಲ್ಪನೆ ವಾಸ್ತವಿಕದಿಂದ ದೂರವಿದೆ ಎಂದು ಡಾ| ಹ್ಯಾ®Õ… ಕ್ಲುಗೆ ತಿಳಿಸಿದ್ದಾರೆ.ಇನ್ನು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.10 ರಿಂದ ಶೇ.15 ರಷ್ಟು ಜನರು ತೀವ್ರವಾದ ಸೋಂಕನ್ನು ಹೊಂದಿದ್ದಾರೆ ಎಂದು ಯು.ಎನ್. ಆರೋಗ್ಯ ಸಂಸ್ಥೆ ಹೇಳಿದ್ದು, 20ರ ಹರೆಯದ ಯುವಕರಲ್ಲಿ ಈ ರೋಗದ ತೀವ್ರತೆ ಅಧಿಕ ಮಟ್ಟದಲ್ಲಿರುತ್ತದೆ. ಹಾಗಾಗಿ ಈ ವಯೋಮಾನದವರು ಹೆಚ್ಚಿನ ಆರೈಕೆಯನ್ನು ತೆಗೆದು ಕೊಳ್ಳ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ಸೋಂಕು ತಗುಲುವ ಸಾಧ್ಯತೆಯ ಜತೆಗೆ ಚಿಕಿತ್ಸೆಗೆ ಪ್ರತಿಕ್ರಿಯಿಸುವ ವೇಗ ಕಡಿಮೆ ಇರಬಹುದೆಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.