ಕೋವಿಡ್-19 ಸೋಂಕು: ಶೇ.66ರಷ್ಟು ಸೈಬರ್ ಕ್ರೈಂ ಪ್ರಕರಣ ಹೆಚ್ಚಳ
ಕೋವಿಡ್-19 ಭೀತಿ ಮಧ್ಯೆ ಪೊಲೀಸರು ಇದಕ್ಕೂ ತಲೆ ಕೆಡಿಸಿಕೊಳ್ಳಬೇಕು
Team Udayavani, Mar 27, 2020, 7:28 PM IST
ಸಾಂದರ್ಭಿಕ ಚಿತ್ರ.
ಕೋವಿಡ್-19 ಹೆಸರಲ್ಲಿ ಕಳೆದ ಫೆಬ್ರವರಿ ಅಂತ್ಯಕ್ಕೆ ಇಮೇಲ್ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ.66.7ರಷ್ಟು ಏರಿಕೆಯಾಗಿದೆ ಎಂಬುದು ಅಂತಾರಾಷ್ಟ್ರೀಯ ಅಧ್ಯಯನದ ಸಾರಾಂಶ. ನಿಮಗೂ ಇಂಥದೊಂದು ಇಮೇಲ್ ಬಂದಿರಬಹುದು, ಕಡೆಗಣಿಸಿ. ಅದರ ಬಲೆಗೆ ಬೀಳಬೇಡಿ.
ನ್ಯೂಯಾರ್ಕ್: ಕೋವಿಡ್-19 ಸೋಂಕು ಹರಡುವಿಕೆ ಸಂಬಂಧಪಟ್ಟಂತೆ ಹಲವಾರು ಸುಳ್ಳು ವದಂತಿಗಳು ಹರಡುತ್ತಿರುವುದು ಹೊಸದಲ್ಲ. ಆದರೆ ಈ ವೈರಸ್ ಭೀತಿಯನ್ನೆ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವ ಪ್ರಕರಣಗಳು ಸ್ವಲ್ಪ ಹೊಸದು. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದ್ದು, ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂಬ ಸಂದೇಶವನ್ನು ರವಾನಿಸಿದೆ.
ವಂಚನೆಗಾರರು ಪ್ರಧಾನವಾಗಿ ಬಳಸುತ್ತಿರುವುದು ಇಮೇಲ್ ಅನ್ನೇ. ಆ ಮೂಲಕವೇ ಮಿಕವನ್ನು ಹುಡುಕಿ ಬಲೆ ಹಾಕಿ ಹಿಡಿಯುತ್ತಿದ್ದಾರೆ. ಅದಕ್ಕೇ ಶೇ. 66 ರಷ್ಟು ಸೈಬರ್ ಅಪರಾಧಗಳು ಹೆಚ್ಚಾಗಿವೆ.
ಇಮೇಲ್ ಫಿಶಿಂಗ್ ದಾಳಿಗಳು
ಮೊದಲಿನಂತೆ ನಡೆಯುತ್ತಿದ್ದ ಫಿಶಿಂಗ್ ತಂತ್ರಗಳನ್ನೇ ಈಗಲೂ ಬಳಸಲಾಗುತ್ತಿದ್ದು, ವಂಚನೆಕಾರರು ಕೋವಿಡ್-19 ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನಸಾಮಾನ್ಯರನ್ನು ಮತ್ತು ಸೋಂಕಿತರನ್ನು, ಶಂಕಿತರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ. ಫೆಬ್ರವರಿ ಅಂತ್ಯದ ಲೆಕ್ಕ ಬಿಟ್ಟು, ಕೇವಲ ಮಾ. 1ರಿಂದ 23ರ ಅವಧಿಯಲ್ಲಿ ಗಮನಿಸಿದರೆ, 4,67,825 ಇಮೇಲ್ ಫಿಶಿಂಗ್ ಪ್ರಕರಣ ನಡೆದಿದೆ. ಇದರಲ್ಲಿ 9,116 ದಾಳಿಗಳು ಕೋವಿಡ್-19 ನ್ನೇ ನೆಪವಾಗಿರಿಸಿಕೊಂಡದ್ದು ಎಂದು ಹೇಳುತ್ತದೆ ಅಧ್ಯಯನ ಸಂಸ್ಥೆಯ ವರದಿ. ಇದೇ ಜನವರಿಯಲ್ಲಿ 137 ಹಾಗೂ ಫೆಬ್ರವರಿಯಲ್ಲಿ 1,188 ಕೋವಿಡ್-19 ಸಂಬಂಧಿತ ಫಿಶಿಂಗ್ ಪ್ರಕರಣಗಳು ನಡೆದಿದ್ದವು.
ಎಚ್ಚರ ವಹಿಸಿ
ಪ್ರಸ್ತುತ ಬೇರೆಲ್ಲ ರೀತಿಯ ಫಿಶಿಂಗ್‌ಗೆ ಹೋಲಿಸಿದಲ್ಲಿ ಕೋವಿಡ್-19 ಸಂಬಂಧಿತ ಫಿಶಿಂಗ್ ಪ್ರಕರಣಗಳು ಕಡಿಮೆ ಇದ್ದಂತೆ ತೋರಬಹುದು. ಆದರೆ, ದಿಢೀರನೇ ಅವುಗಳ ಸಂಖ್ಯೆ ಏರಬಹುದು. ಹಾಗಾಗಿ ಪ್ರತಿಯೊಬ್ಬರೂ ಎಚ್ಚರ ವಹಿಸಿ. ಕೋವಿಡ್-19 ಸೋಂಕಿನ ಹೆಸರಲ್ಲಿ ವಂಚನೆ, ಕಂಪೆನೆಗಳ ಹೆಸರಲ್ಲಿ ಇಮೇಲ್ ಎಲ್ಲವೂ ಬರಬಹುದು. ಕಚೇರಿಗಳ ಇಮೇಲ್‌ನೂ° ಹ್ಯಾಕ್ ಮಾಡಬಹುದು ಎಚ್ಚರವಹಿಸುವುದು ಸೂಕ್ತ ಎಂದಿದೆ ಅಧ್ಯಯನ ಸಂಸ್ಥೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.