ವಾಯು ಮಾಲಿನ್ಯ ಕುಸಿದರೂ ಕಾಡುತ್ತಿದೆ ಓಜೋನ್ ಮಾಲಿನ್ಯ!
Team Udayavani, Jun 29, 2020, 6:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಒಂದೆಡೆ ಕೋವಿಡ್ 19 ವೈರಸ್ ಕಾಡುತ್ತಿದ್ದು, ದೇಶದಲ್ಲಿ ದಿನೇ ದಿನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಈ ನಡುವೆ ಹೊಸ ಮಾಲಿನ್ಯದ ಅಪಾಯವೊಂದು ಎದುರಾಗಿದೆ. ಅದುವೇ ಓಜೋನ್ ಮಾಲಿನ್ಯ.
ಲಾಕ್‌ಡೌನ್ ಅವಧಿಯಲ್ಲಿ ಜಗತ್ತಿನಾದ್ಯಂತ ವಾಯು ಮಾಲಿನ್ಯ ಕಡಿಮೆಯಾಗಿದೆ. ಎನ್‌ಒ2 (ನೈಟ್ರೋಜನ್ ಡಯಾಕ್ಸೈಡ್) ಮತ್ತು ಪಿಎಂ2.5 ಹಂತಗಳಲ್ಲಿ ಕುಸಿತ ಕಂಡುಬಂದಿದೆ. ಆದರೆ ಇದೇ ವೇಳೆ ಓಜೋನ್‌ನಿಂದಾಗುವ ಅಗೋಚರ ಮಾಲಿನ್ಯದ ಪ್ರಮಾಣ ವೃದ್ಧಿಸಿದೆ.
ದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ ಮಾಹಿತಿ ಪ್ರಕಾರ, ಮಾ.25ರಂದು ಲಾಕ್‌ಡೌನ್ ಆರಂಭವಾದಾಗಿನಿಂದ ದೇಶದ 22 ಬೃಹತ್ ನಗರಗಳು ಮತ್ತು ಮೆಟ್ರೋ ಸಿಟಿಗಳಲ್ಲಿ ಓಜೋನ್‌ನಿಂದಾಗುವ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಹಲವು ನಗರಗಳಲ್ಲಿ ಇದು
ಸಾಮಾನ್ಯ ಮಟ್ಟವನ್ನು ಮೀರಿರುವುದು ಆತಂಕಕ್ಕೆ ಕಾರಣವಾಗಿದೆ.
ಓಜೋನ್ ಮಾಲಿನ್ಯ ಎಲ್ಲಿ?
ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿ, ಮುಂಬೈ, ಪುಣೆ, ದೆಹಲಿ ಎನ್‌ಸಿಆರ್ (ಫರೀದಾಬಾದ್, ಗಾಜಿಯಾಬಾದ್, ಗುರುಗ್ರಾಮ ಮತ್ತು ನೋಯ್ಡಾ ಒಳಗೊಂಡು), ಕೋಲ್ಕತಾ, ಅಹಮದಾಬಾದ್, ಉಜ್ಜೈನಿ, ಜೈಪುರ, ಪಾಟ್ನಾ, ವಿಶಾಖಪಟ್ಟಣಂ, ಅಮೃತಸರ, ಹೌರಾ, ಗುವಾಹಟಿ, ಲಕ್ನೋ ನಗರಗಳಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಪಿಎಂ2.5 ಮತ್ತು ಎನ್‌ಒ2 ಮಾಲಿನ್ಯ ದಿಢೀರ್ ಕುಸಿದರೆ, ಓಜೋನ್‌ನಿಂದಾಗುವ ಮಾಲಿನ್ಯ ಏಕಾಏಕಿ ಹೆಚ್ಚಾಗಿದೆ.
ಕಾರಣವೇನು?
ಬಿಸಿಲು ಹೆಚ್ಚಾಗಿರುವ ತಿಂಗಳುಗಳಲ್ಲಿ ಸಾಮಾನ್ಯವಾಗಿ ಓಜೋನ್ ಮಾಲಿನ್ಯ ವೃದ್ಧಿಸುತ್ತದೆ.
ಓಜೋನ್ ಮಾಲಿನ್ಯವೆಂದರೆ ಅದು ನೇರವಾಗಿ ಓಜೋನ್‌ನಿಂದ ಆಗುವುದಲ್ಲ. ಸೂರ್ಯನ ಅತಿಯಾದ ಶಾಖದಿಂದಾಗಿ ಸಾರಜನಕದ ಆಕ್ಸೈಡ್‌ಗಳು, ಬಾಷ್ಪಶೀಲ ಜೈವಿಕ ಸಂಯುಕ್ತಗಳು ಮತ್ತು ಗಾಳಿಯಲ್ಲಿನ ಇತರ ಅನಿಲಗಳ ನಡುವಿನ ರಾಸಾಯನಿಕ ಕ್ರಿಯೆಯಿಂದಾಗಿ ಮಾಲಿನ್ಯ ಉಂಟಾಗುತ್ತದೆ. ಎಲ್ಲ ಮೂಲಗಳಿಂದ ಹೊರಸೂಸುವ ಅನಿಲಗಳನ್ನು ನಿಯಂತ್ರಿಸಿದರೆ ಮಾತ್ರ ಓಜೋನ್ ಮಾಲಿನ್ಯ ತಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.