ಕೋವಿಡ್-19: ಮರಣ ಪ್ರಮಾಣ ಶೇ.1.93ಕ್ಕೆ ಇಳಿಕೆ, ಲಾಲಾರಸ ಪರೀಕ್ಷೆಗೆ ಗ್ರೀನ್ ಸಿಗ್ನಲ್
Team Udayavani, Aug 17, 2020, 9:23 AM IST
ಹೊಸದಿಲ್ಲಿ/ಹ್ಯೂಸ್ಟನ್: ದೇಶದಲ್ಲಿ ಕೋವಿಡ್ ಸೋಂಕಿನಿಂದಾಗಿ ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಈಗ ಮರಣ ಪ್ರಮಾಣ ಶೇ.1.93ಕ್ಕಿಳಿದಿದೆ. ಜಗತ್ತಿನಲ್ಲೇ ಕನಿಷ್ಠ ಮರಣ ಪ್ರಮಾಣ ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಅಮೆರಿಕದಲ್ಲಿ 23 ದಿನಗಳಲ್ಲಿ 50 ಸಾವಿರ ಮಂದಿ ಮೃತಪಟ್ಟರೆ, ಬ್ರೆಜಿಲ್‌ನಲ್ಲಿ 95 ದಿನ, ಮೆಕ್ಸಿಕೋದಲ್ಲಿ 141 ದಿನಗಳಲ್ಲಿ 50 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಆದರೆ, ಭಾರತದಲ್ಲಿ ಸಾವಿನ ಸಂಖ್ಯೆ 50 ಸಾವಿರಕ್ಕೇರಲು 156 ದಿನಗಳು ಬೇಕಾದವು ಎಂದೂ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲದೆ, ದೇಶದ ಗುಣಮುಖ ಪ್ರಮಾಣವೂ ಶೇ.72 ಸಮೀಪಿಸಿದ್ದು, 18.60 ಲಕ್ಷಕ್ಕೂ ಅಧಿಕ ಮಂದಿ ವಾಸಿಯಾಗಿದ್ದಾರೆ.
63,490 ಪ್ರಕರಣ: ಶನಿವಾರದಿಂದ ರವಿವಾರದ ವರೆಗೆ 24 ಗಂಟೆಗಳಲ್ಲಿ ದೇಶದಲ್ಲಿ 63,490 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 944 ಮಂದಿ ಸಾವಿಗೀಡಾಗಿದ್ದಾರೆ. ಆ.7ರಿಂದ ನಿರಂತರವಾಗಿ (ಆ.11 ಹೊರತುಪಡಿಸಿ) ಭಾರತದಲ್ಲಿ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲದೆ, ಸತತ 12 ದಿನಗಳಿಂದಲೂ ಅಮೆ ರಿಕ, ಬ್ರೆಜಿಲ್‌ಗಿಂತಲೂ ಹೆಚ್ಚು ಪ್ರಕರಣ ಗಳು ಭಾರತದಲ್ಲಿ ಕಂಡುಬಂದಿವೆ.
ಲಾಲಾರಸ ಪರೀಕ್ಷೆಗೆ ಗ್ರೀನ್ ಸಿಗ್ನಲ್
ವ್ಯಕ್ತಿಯ ಲಾಲಾರಸ ಪರೀಕ್ಷೆ ಮೂಲಕ ಕೋವಿಡ್ ಪತ್ತೆಹಚ್ಚುವ ಸರಳ ಹಾಗೂ ತುರ್ತು ವಿಧಾನ ಅನುಸರಿಸಲು ಅಮೆರಿಕ ಮುಂದಾಗಿದೆ.
ಕೋವಿಡ್ ಸೋಂಕು ಪತ್ತೆಗೆ ಈಗಾಗಲೇ ಹಲವು ಮಾದರಿಗಳ ಪರೀಕ್ಷೆಗಳನ್ನು ಅಮೆರಿಕದ ಲ್ಯಾಬ್‌ಗಳು ಅನುಸರಿಸಿವೆ. ಆದರೆ, ನಿಖರ ಫಲಿತಾಂಶಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿರುವುದರಿಂದ, ವಿಶ್ವಾಸಾರ್ಹ ಫಲಿತಾಂಶ ಸಾಧ್ಯವಾಗದೆ ಇರುವುದ ರಿಂದ ಯುಎಸ್ ಫುಡ್ ಆ್ಯಂಡ್ ಅಡ್ಮಿನಿ ಸ್ಟ್ರೇಷನ್ (ಯುಎಸ್‌ಎಫ್ಡಿಎ) ಲಾಲಾ ರಸ ಪರೀಕ್ಷಾ ವಿಧಾನವನ್ನು “ಗೇಮ್ ಚೇಂಜರ್’ ಎಂದು ಘೋಷಿಸಿದೆ.
“ಕೋವಿಡ್ ಸೋಂಕಿನ ಪತ್ತೆಗೆ ಲಾಲಾ ರಸ ಪರೀಕ್ಷೆ ಅತ್ಯಂತ ಪರಿಣಾಮಕಾರಿ. ಪ್ರಯೋಗಾಲಯಕ್ಕೆ ಬಳಸಲ್ಪಡುವ ರಾಸಾ ಯನಿಕಗಳ ಕೊರತೆ ತಪ್ಪಿಸಲೂ ಈ ಟೆಸ್ಟ್ ಸೂಕ್ತವಾಗಿದೆ’ ಎಂದು ಯುಎಸ್‌ಎಫ್ಡಿಎ ನಿರ್ದೇಶಕ ಸ್ಟೀಫನ್ ಹ್ಯಾನ್ ತಿಳಿಸಿದ್ದಾರೆ.
ಎನ್‌ಬಿಎಯಿಂದ ಆರಂಭ: “ಸಲೈವಾ ಡೈರೆಕ್ಟ್ ಟೆಸ್ಟ್’ ಎಂದು ಕರೆಯಲ್ಪಡುವ ಈ ನೂತನ ಪರೀಕ್ಷಾ ವಿಧಾನ, ಎನ್‌ಪಿ ಸ್ವಾಬಿಂಗ್ ಹಾಗೂ ಇತರೆ ಸಾಂಪ್ರದಾಯಿಕ ವಿಧಾನಗಳಿಗಿಂತ ಕಡಿಮೆ ವೆಚ್ಚದ್ದಾಗಿದೆ. ನ್ಯಾಶನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಶನ್ (ಎನ್‌ಬಿಎ) ಆಟಗಾರರು, ಸಿಬಂದಿ ಪರೀಕ್ಷೆ ಮೂಲಕ ಸಲೈವಾ ಡೈರೆಕ್ಟ್ ಟೆಸ್ಟ್ ಆರಂಭಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.