ಔಷಧ ಇಲ್ಲದೆ ಸೋಂಕು ಗೆದ್ದ ಗಟ್ಟಿಗಿತ್ತಿ!
Team Udayavani, Mar 19, 2020, 7:50 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮೆಲ್ಬೊರ್ನ್ ನಲ್ಲಿ ಸೋಂಕಿಗೆ ತುತ್ತಾಗಿದ್ದ 47 ವರ್ಷದ ಮಹಿಳೆಯೊಬ್ಬರು ಯಾವುದೇ ಔಷಧಗಳ ನೆರವಿಲ್ಲದೆ 10 ದಿನದಲ್ಲಿ ಸೋಂಕಿನಿಂದ ಪಾರಾಗಿದ್ದಾರೆ. ಈ ಬಗ್ಗೆ “ನೇಚರ್ ಮೆಡಿಸಿನ್ ಜರ್ನಲ್’ನಲ್ಲಿ ಲೇಖನ ಪ್ರಕಟವಾಗಿದೆ.
ಕೋವಿಡ್ 19ನ ತವರು ಮನೆಯೆನಿಸಿದ ಚೀನದ ವುಹಾನ್‌ಗೆ ಕೆಲವು ತಿಂಗಳ ಹಿಂದೆ ಪ್ರವಾಸ ಹೋಗಿ ಬಂದಿದ್ದರಿಂದ ಆಕೆಗೆ ಸೋಂಕು ತಗುಲಿತ್ತು. ಆಕೆಯ ದೇಹ ಅಗತ್ಯ ಸಂಖ್ಯೆಯಲ್ಲಿ ಪ್ರತಿಜೀವಗಳನ್ನು (ಆ್ಯಂಟಿ ಬಾಡೀಸ್) ಉತ್ಪತ್ತಿ ಮಾಡಿದ್ದರಿಂದ 10 ದಿನಗಳಲ್ಲಿ ಸೋಂಕು ಮಾಯವಾಗಿದೆ ಎಂದು ಈಕೆಯ ಪ್ರಕರಣವನ್ನು ಅಧ್ಯಯನ ಮಾಡಿರುವ ತಜ್ಞರು ತಿಳಿಸಿದ್ದಾರೆ.
ಕಿಟ್ ತಯಾರಿಕೆಗೆ ಅನುಮತಿ: ಸ್ವಿಟರ್ಲೆಂಡ್ ಮೂಲದ “ರೋಚ್ ಡಯಾಗ್ನೋಸ್ಟಿಕ್ಸ್ ಇಂಡಿಯಾ’ ಎಂಬ ಖಾಸಗಿ ಸಂಶೋಧನಾ ಸಂಸ್ಥೆಗೆ ಕೊರೊನಾ ತಪಾಸಣೆ ಮಾಡುವ ಕಿಟ್‌ಗಳನ್ನು ತಯಾರಿಸಲು ಕೇಂದ್ರ ಔಷಧ ಗುಣಮಟ್ಟ ಹಾಗೂ ನಿಯಂತ್ರಣ ಸಂಸ್ಥೆ (ಸಿಡಿಸಿಎಸ್‌ಒ) ಲೈಸನ್ಸ್ ನೀಡಿದೆ. ಭಾರತದ ಟ್ವಿವಿಟ್ರಾನ್ ಹೆಲ್ತ್‌ಕೇರ್ ಹಾಗೂ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಕಂಪೆನಿಗಳೂ ಅನುಮತಿಗಾಗಿ ಕಾಯುತ್ತಿವೆ.
ನಮ್ಮಲ್ಲೇ ಔಷಧ ತಯಾರು?: ಖ್ಯಾತ ಔಷಧ ತಯಾರಿಕಾ ಕಂಪೆನಿಯಾದ ಸಿಪ್ಲಾ ಹಾಗೂ ಸರಕಾರಿ ಸಂಸ್ಥೆಗಳಾದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನ ಕೌನ್ಸೆಲ್ (ಸಿಐಎಸ್‌ಆರ್) ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಐಸಿಟಿ), ಜಂಟಿ ಸಹಬಾಗಿತ್ವದಲ್ಲಿ ಕೊರೊನಾ ವೈರಸ್ ಚಿಕಿತ್ಸೆಗೆ ಔಷಧ ಕಂಡುಹಿಡಿ ಯುವ ಸಾಹಸಕ್ಕೆ ಕೈ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕದನ ವಿರಾಮ: 3 ಒತ್ತೆಯಾಳುಗಳ ಬಿಡುಗಡೆ ಬೆನ್ನಲ್ಲೇ 90 ಕೈದಿಗಳನ್ನು ಬಿಡುಗಡೆ ಮಾಡಿದ ಇಸ್ರೇಲ್
Israel-Hamas;ಅಂತೂ ಕದನ ವಿರಾಮ ಜಾರಿ: ಮೂವರು ಇಸ್ರೇಲಿಗರ ಬಿಡುಗಡೆ
Davos; ಇಂದು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಆರಂಭ
Donald Trump ಪ್ರಮಾಣವಚನ: ಭೋಜನಕೂಟದಲ್ಲಿ ಮುಖೇಶ್ ಮತ್ತು ನೀತಾ ಅಂಬಾನಿ
America: ಟ್ರಂಪ್ ಪ್ರಮಾಣದ ಬೆನ್ನಲ್ಲೇ ಅಕ್ರಮ ವಲಸಿಗರು ಹೊರಕ್ಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.