ಕೋವಿಡ್‌-19 ವಿರುದ್ಧ ಹೋರಾಟದಲ್ಲಿ ದಕ್ಷಿಣ ಕೊರಿಯಾದ ತಂತ್ರಜ್ಞಾನ


Team Udayavani, Apr 11, 2020, 5:15 PM IST

ಕೋವಿಡ್‌-19 ವಿರುದ್ಧ ಹೋರಾಟದಲ್ಲಿ ದಕ್ಷಿಣ ಕೊರಿಯಾದ ತಂತ್ರಜ್ಞಾನ

ಸಿಯೋಲ್‌: ದಕ್ಷಿಣ ಕೊರಿಯಾದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದರ ಬಳಿಕ ಕೋವಿಡ್‌ ವೈರಸ್‌ ಅನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳು ಜಗತ್ತಿನ ಪ್ರಶಂಸೆಯನ್ನು ಗಳಿಸಿದೆ. ಚೀನದಲ್ಲಿ ಅತೀ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದಂತೆ ದಕ್ಷಿಣ ಕೊರಿಯಾ ಎಚ್ಚೆತ್ತುಕೊಂಡದ್ದು ಹಲವು ಸಮಸ್ಯೆಗಳನ್ನು ಬಗೆಹರಿಸಿತು.

ತ್ವರಿತ ಕ್ರಮದ ಭಾಗವಾಗಿ ಉಚಿತ ಕೋವಿಡ್‌ ಪರೀಕ್ಷೆ ಮತ್ತು ಸಾಮೂಹಿಕ ಪರೀಕ್ಷೆಯನ್ನು ಕೊರಿಯಾ ಮಾಡಿತು. ಈ ಮೂಲಕ ವೈರಸ್‌ ಅನ್ನು ಎದುರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾದ ಹೆಜ್ಜೆಯನ್ನು ಇಟ್ಟಿತ್ತು. ಹೆಚ್ಚಿನ ವೇಗಕ್ಕಾಗಿ ದಕ್ಷಿಣ ಕೊರಿಯಾ ತಂತ್ರಜ್ಞಾನವನ್ನೂ ಬಳಸಿ ಕೊಂಡಿತು. ಇದರ ಪರಿಣಾಮ ಸೋಂಕು ಹರಡುವಿಕೆಯ ಸರಪಳಿಯನ್ನು ಕಡಿತಗೊಳಿಸಲು ಸಾಧ್ಯವಾಯಿತು.

ಮಾಹಿತಿ
ಸೋಂಕಿತ ರೋಗಿಗಳು ತೆಗೆದುಕೊಳ್ಳಲೇ ಬೇಕಾದ ಕ್ರಮಗಳನ್ನು ನಿಯಮಿತವಾಗಿ ಆನ್ ಲೈನ್ ನಲ್ಲಿ ಪ್ರಕಟಿಸಲಾಗುತ್ತದೆ. ವಿದೇಶಗಳಿಂದ ಬಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸೋಂಕಿನ ಪರೀಕ್ಷೆ ಮಾಡಿಸಬೇಕಿತ್ತು. ಬಳಿಕ ಅಲ್ಲೇ ಈ ಆಪ್‌ ಅನ್ನು ಡೌನ್‌ ಲೋಡ್‌ ಮಾಡಿ ಪ್ರತಿದಿನ ತಮ್ಮ ರೋಗಲಕ್ಷಣಗಳನ್ನು ವರದಿ ಮಾಡುವುದನ್ನು ಕಡ್ಡಾಯ ಗೊಳಿಸಿತ್ತು.

ಎಚ್ಚರಿಕೆ
ಕೊರಿಯಾದಲ್ಲಿ ಬಹುತೇಕರಲ್ಲಿ ಅಂದರೆ 10ರಲ್ಲಿ 9 ಮಂದಿಯಲ್ಲಿ ಮೊಬೈಲ್‌ ಇದೆ. ಮೇಲಿನ ಆಪ್‌ ಮೂಲಕ ಪಡೆಯಲಾದ ಮಾಹಿತಿಗಳು ಅಧಿಕಾರಿಗಳಿಗೆ ಲಭ್ಯವಾಗುತ್ತಿತ್ತು. ಆ ಆಪ್‌ ಸೋಂಕಿತರ ಮಾಹಿತಿಯ ಜತೆಗೆ ಅವರ ಲೊಕೇಶನ್‌ ಅನ್ನು ಟ್ರ್ಯಾಕ್‌ ಮಾಡುತ್ತಿತ್ತು. ಅವರು ಮನೆಯಿಂದ ಹೊರ ಬರುವಂತಿಲ್ಲ. ಅಲ್ಲಿನ ಜನರು ಈ ಆಪನ್ನು ಡೌನ್‌ ಲೋಡ್‌ ಮಾಡಿಕೊಂಡಿದ್ದು, ಸ್ಥಳ ಆಧಾರಿತ ತುರ್ತು ಸಂದೇಶಗಳನ್ನು ಪಡೆಯುತ್ತಿದ್ದರು. ಅಂದರೆ ಸೋಂಕು ತಗುಲಿದ ವ್ಯಕ್ತಿ ನಿಮ್ಮ ಸಮೀಪದಲ್ಲಿ ಇದ್ದರೆ ನಿಮ್ಮನ್ನು ಈ ಆಪ್‌ ಎಚ್ಚರಿಸುತ್ತಿತ್ತು. ಜನರು ಸಂದೇಶಗಳನ್ನು ಸ್ವಯಂಚಾಲಿತವಾಗಿ ಪಡೆಯುತ್ತಾರೆ. ನನಗೆ ಸಂದೇಶ ಬೇಡ ಎಂದು ಆಫ್‌ ಮಾಡುವಂತಿಲ್ಲ. ಅದು ಕಡ್ಡಾಯವೂ ಹೌದು.

ಹೊಸ ಸೋಂಕು ಪತ್ತೆಯಾಗುತ್ತಿದ್ದಂತೆ ದೇಶದಾದ್ಯಂತದ ಫೋನ್‌ಗಳಲ್ಲಿ ಸಂದೇಶಗಳು ರವಾನೆಯಾಗುತ್ತದೆ. ತುರ್ತು ಸೂಚನೆಗಳು ಬಂದಾಗ ಜನರು ಇದನ್ನು ಪಾಲಿಸುತ್ತಾರೆ. ಪ್ರಾದೇಶಿಕ ಸರಕಾರಗಳು ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಕೋವಿಡ್‌ ಮಾಹಿತಿಯನ್ನು ಪ್ರಜೆಗಳಿಗೆ ನೀಡುತ್ತಿದ್ದಾರೆ. ಆ ಪ್ರದೇಶಗಳಲ್ಲಿನ ಜನರನ್ನು ಕೇಂದ್ರವಾಗಿರಿಸಿ ಪಾಸಿಟಿವ್‌ ಪ್ರಕರಣ ಪತ್ತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಹೊಸ ವೈರಸ್‌ ಪ್ರಕರಣಗಳಲ್ಲಿ ದಕ್ಷಿಣ ಕೊರಿಯಾ ಸ್ವಲ್ಪ ಕುಸಿತ ಕಂಡಿದೆ.

ದಕ್ಷಿಣ ಕೊರಿಯಾದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ. 200 ಜನರು ಸಾವನ್ನಪ್ಪಿದ್ದು. ಸುಮಾರು ಅರ್ಧದಷ್ಟು ಸೋಂಕಿತ ಜನರು ಗುಣಮುಖರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವೆಬ್‌ ಸೈಟ್‌ ನಲ್ಲಿ ಮಾಹಿತಿ
ಸಿಯೋಲ್‌ ನ ಸುಮಾರು 158,000 ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾದ ಜೊಂಗ್ನೊ-ಗು ಸರಕಾರವು ತಮ್ಮ ವೆಬ್‌ ಸೈಟ್‌ ನಲ್ಲಿ ರೋಗಿಗಳ ಹೆಸರನ್ನು ಬಿಟ್ಟು ಪಟ್ಟಿಯನ್ನು ಸಂಗ್ರಹಿಸುತ್ತದೆ. ಅವರು ವಾಸಿಸುವ ಪ್ರದೇಶ ಮತ್ತು ಪ್ರಸ್ತುತ ಅವರು ಯಾವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾವ ಸಮಯದಲ್ಲಿ ದಾಖಲಾಗಿದ್ದಾರೆ ಮೊದಲಾದ ಮಾಹಿತಿಯನ್ನು ನಿಯಮಿತವಾಗಿ ಅಪ್‌ ಡೇಟ್‌ ಮಾಡುತ್ತಿದೆ.

ಮೆಸೇಜ್‌ ಹೀಗೆ ಬರುತ್ತದೆ
ಜನರಿಗೆ ಬರುವ ಸಂದೇಶದ ಉದಾಹರಣೆ: ಸಿಯೋಲ್‌ನ ಸೋಮರ್ಸೆಟ್‌ ಪ್ಯಾಲೇಸ್‌ ಹೋಟೆಲ್ನಲ್ಲಿ ತಂಗಿರುವ 15 ವಿದೇಶಿಯರಲ್ಲಿ ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ. ಅವರ ಚಲನ ವಲನಗಳು, ನಡೆದು ಬಂದ ಹಾದಿ ಮೊದಲಾದ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ವೆಬ್‌ ಸೈಟ್‌ ಭೇಟಿ ನೀಡಿ.”

ಕೆಲವರಿಗೆ ಕಿರಿಕಿರಿ
Covid 19 ನಿಂದ ಉಂಟಾಗುವ ಅಪಾಯದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯೂ ದೈನಂದಿನ ಮಾಹಿತಿ ಮತ್ತು ಸೋಂಕಿತರ ವಿವರಗಳನ್ನು ಮೆಸೇಜ್‌ ಮೂಲಕ ಪಡೆಯುತ್ತಾರೆ. ಇದು ಜನರ ಮೇಲೂ ಪರಿಣಾಮ ಬೀರುತ್ತಿದೆ. ಕೆಲವರಿಗೆ ಪ್ರಯೋಜನವಾದರೆ ಕಿರಿಕಿರಿಯಾಗುತ್ತಿದೆ ಎಂಬವರೂ ಇದ್ದಾರೆ.

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

America: ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.