ಪಾಕಿಸ್ಥಾನದಲ್ಲೂ ಕೋವಿಡ್‌ 19 ವೈರಸ್‌ ಉಪಟಳ

ಪೂರ್ವ ಸಿದ್ಧತೆ ಆರಂಭಿಸಲೆಂದೇ ನೂರೆಂಟು ವಿಘ್ನ

Team Udayavani, Mar 27, 2020, 6:38 PM IST

ಪಾಕಿಸ್ಥಾನದಲ್ಲೂ ಕೋವಿಡ್‌ 19 ವೈರಸ್‌ ಉಪಟಳ

ಕರಾಚಿ: ಚೀನದ ಜತೆ ಗಡಿಯನ್ನು ಹಂಚಿಕೊಂಡ ಪಾಕಿಸ್ಥಾನದಲ್ಲಿ ದಿನದಿಂದ ದಿನಕ್ಕೆ ವೈರಸ್‌ ಹಾನಿ ಹೆಚ್ಚಾಗುತ್ತಿದೆ. ತೀವ್ರವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ಥಾನ ಕೋವಿಡ್‌ 19 ಕಾಟಕ್ಕೆ ನಲುಗುತ್ತಿದೆ. ಆರೋಗ್ಯ ತುರ್ತು ಪರಿಸ್ಥಿತಿ ಸನ್ನಿವೇಶ ನಿರ್ಮಾಣವಾಗಿದ್ದು, ವೈರಸ್‌ ಹೊಡೆದೋಡಿಸಲು ಸೇನೆ ಮುಂದಾಗಿದೆ.

ಪಂಜಾಬ್‌, ಸಿಂಧ್‌ ಹಾಗೂ ಬಲೂಚಿಸ್ಥಾನ‌ ಪ್ರಾಂತ್ಯಗಳಲ್ಲಿ ಅತಿ ಹೆಚ್ಚು ಕೋವಿಡ್‌ 19 ಪ್ರಕರಣಗಳು ಪತ್ತೆಯಾಗಿವೆ. ಆದರೆ ಇತರ ದೇಶಗಳಂತೆ ಪಾಕಿಸ್ಥಾನ ಇನ್ನೂ ಸಂಪೂರ್ಣ ಜಾಗೃತವಾಗಿಲ್ಲ. ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ಪಾಕ್‌ ನ ನಡೆಯ ಕುರಿತು ಆತಂಕವನ್ನೂ ವ್ಯಕ್ತಪಡಿಸಿವೆ.

ಪಾಕಿಸ್ಥಾನ ಹಾಗೂ ಇರಾನ್‌ದೇಶಗಳ ಗಡಿಯಲ್ಲಿ ಕೋವಿಡ್‌ 19 ಸೋಂಕಿತರ ಚಿಕಿತ್ಸೆಗೆ ಕ್ಯಾಂಪ್‌ ನಿರ್ಮಿಸಲಾಗಿದೆ ಎಂದು ದಿ ಡಾನ್‌ ಹೇಳಿದೆ. ಇಲ್ಲಿನ ಕ್ಯಾಂಪ್‌ ಸ್ವತ್ಛತೆ ಕುರಿತು ಆತಂಕ ಎದುರಾಗಿದೆ. ಕ್ಯಾಂಪ್‌ಗ್ಳು ದುರ್ವಾಸನೆ, ಧೂಳು, ಮಾಲಿನ್ಯದಿಂದ ಕೂಡಿವೆ. ವಿಚಿತ್ರ ಎಂದರೆ ಈ ಕ್ಯಾಂಪ್‌ ಗಳಲ್ಲಿ ವೈದ್ಯಕೀಯ ಸೌಲಭ್ಯಗಳೇ ಇಲ್ಲ. ಜತೆಗೆ ಶೌಚಾಲಯಗಳನ್ನು ನಿರ್ಮಿಸಲಾಗಿಲ್ಲ.

ಬಂದದ್ದು ಹೇಗೆ?ಹೀಗೊಂದು ಶಂಕೆ
ವಾರ್ಷಿಕ ತಬ್ಲಿ ಜಮಾಅತ್‌ ಸಭೆಯು ಲಾಹೋರ್‌ ಉಪನಗರವಾದ ರೈವಿಂಡ್‌ ನಲ್ಲಿ ನಡೆದಿತ್ತು. 90 ದೇಶಗಳ 2.50 ಲಕ್ಷ ಮಂದಿ ಭಾಗವಹಿಸಿದ್ದರು. ಇದರ ಪರಿಣಾಮವಾಗಿ ಇಬ್ಬರು ಪುರುಷರು ಪಾಕಿಸ್ಥಾನದಿಂದ ಹಿಂದಿರುಗಿದಾಗ ಕೋವಿಡ್‌ 19 ವೈರಸ್‌ ಸೋಂಕಿಗೆ ಒಳಗಾಗಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ಇಸ್ಲಾಮಾಬಾದ್‌ನ ಉಪನಗರಗಳ 12 ಮಂದಿಗೂ ಸೋಂಕು ತಗುಲಿತ್ತು. ಬಳಿಕ ಸಿಂಧ್‌ನಲ್ಲಿ ಇತರ ನಾಲ್ವರಲ್ಲಿ ಪಾಸಿಟಿವ್‌ ಕಂಡುಬಂದಿದೆ. ಇದಕ್ಕೆ ಜಮ್ಮತ್‌ನ ಒಬ್ಬ ಕಿರ್ಗಿಸ್ತಾನ್‌ ಬೋಧಕನನ್ನು ಇತರ 13 ಮಂದಿಯೊಂದಿಗೆ ಬಂಧಿಸಲಾಗಿದೆ.

ವಿಮಾನ ಸೇವೆ ನಿಲುಗಡೆ
ಬ್ರಿಟನ್‌ ಮತ್ತು ಕೆನಡಾದಲ್ಲಿ ಕೋವಿಡ್‌ 19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಉಭಯ ದೇಶಗಳಿಗೆ ತೆರಳಬೇಕಿದ್ದ ನಾಲ್ಕು ವಿಶೇಷ ವಿಮಾನಗಳ ಸಂಚಾರವನ್ನು ಪಾಕಿಸ್ತಾನ ಇಂಟರ್‌ನ್ಯಾಶನಲ್‌ ಏರ್‌ಲೈನ್ಸ್‌ ನಿಷೇಧಿಸಿದೆ. ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಪರಿಗಣಿಸಿ ಈ ಕ್ರಮ ಎಂದಿದೆ ಸರಕಾರ. ಶುಕ್ರವಾರ ಮತ್ತು ಶನಿವಾರ ನಿಗದಿಯಾಗಿದ್ದ ಲಂಡನ್‌, ಮ್ಯಾಂಚೆರ್ಸ್ಟ, ಬರ್ಮಿಂಗ್‌ಹ್ಯಾಮ್‌ ಮತ್ತು ಟೊರೊಂಟೊಗಳಿಗೆ ವಿಶೇಷ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಕ್ಯಾಂಪ್‌ ಗಳಲ್ಲ ಜೈಲುಗಳು
ಇರಾನ್‌ನಿಂದ ಪಾಕಿಸ್ಥಾನಕ್ಕೆ ಸೋಂಕು ಬರಬಾರದು ಎಂದು ಮುನ್ನೆಚ್ಚರಿಕೆ ವಹಿಸಿ ನಿರ್ಮಿಸಿರುವ ಕ್ಯಾಂಪ್‌ ಗಳ ಮೂಲಕವೇ ವೈರಸ್‌ ಹರಡುವ ಸಾಧ್ಯತೆ ಹೆಚ್ಚು ಎಂಬ ಟೀಕೆಯೂ ವ್ಯಕ್ತವಾಗುತ್ತಿದೆ. ಚಿಕಿತ್ಸಾ ಸಲಕರಣೆಗಳಂತೂ ಇಲ್ಲವೇ ಇಲ್ಲ. ವೈದ್ಯರು ಹಾಗೂ ನರ್ಸ್‌ಗಳ ಕೊರತೆ ತುಂಬಾ ಕಾಡುತ್ತಿದೆ. ಈ ಕಾರಣಕ್ಕೆ ಅಲ್ಲಲ್ಲಿ ಪ್ರತಿಭಟನೆಗಳು ಆರಂಭವಾಗುತ್ತಿವೆ. ಇವುಗಳು ಕ್ಯಾಂಪ್‌ ಗಳಲ್ಲ, ಜೈಲುಗಳು ಎಂದೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದು ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

ಸಿದ್ಧವಾಗದ ಪಾಕ್‌
ಕೋವಿಡ್‌ 19ವನ್ನು ನಿಗ್ರಹಿಸುವ ಹೊಣೆ ಈಗ ಪಾಕ್‌ ಸೇನೆಯ ಹೆಗಲ ಮೇಲಿದೆ. ಆದರೆ ವೈರಸ್‌ ಉಪಟಳವನ್ನು ಎದುರಿಸಲು ಸರಿಯಾದ ಸಿದ್ಧತೆಯನ್ನೇ ನಡೆಸಿಲ್ಲ. ಇತರ ದೇಶಗಳು ಸಾಮಾಜಿಕ ಅಂತರದ ಕುರಿತು ಹೆಚ್ಚು ಗಮನವಹಿಸಿದ್ದರೆ ಪಾಕ್‌ ಮಾತ್ರ ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಆರ್ಥಿಕ ಸ್ಥಿತಿ ಕಾರಣ?
ಪಾಕಿಸ್ಥಾನದ ಈ ಸ್ಥಿತಿಗೆ ಅಲ್ಲಿನ ಆರ್ಥಿಕ ಸ್ಥಿತಿಯೂ ಕಾರಣ ಎನ್ನಲಾಗುತ್ತಿದೆ. ಪ್ರಸ್ತುತ ಪಾಕಿಸ್ಥಾನದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಸಂಪನ್ಮೂಲಗಳ ಕೊರತೆ ಸಾಕಷ್ಟು ಬಾಧಿಸುತ್ತಿದೆ. ಈ ಸಂಬಂಧ ಇತ್ತೀಚೆಗಷ್ಟೇ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಜಗತ್ತಿನಾದ್ಯಂತ ಲಾಕ್‌ಡೌನ್‌ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಆ ಲಕ್ಷುರಿ ನಮಗೆ ಇಲ್ಲ. ಲಾಕೌಡೌನ್‌ ಮಾಡುವಷ್ಟು ಅದೃಷ್ಟ ನಮಗಿಲ್ಲ ಎಂದು ಹೇಳಿದ್ದರು.

ಪಾಕಿಸ್ಥಾನದ ಪ್ರಕರಣಗಳು ಎಲ್ಲೆಲ್ಲೆ ಎಷ್ಟೆಷ್ಟು
ಒಟ್ಟು ಪ್ರಕರಣಗಳು 1238
ಸಾವುಗಳು 9
ಗುಣಮುಖ 21

ಸಿಂಧ್‌ 421
ಪಂಜಾಬ್‌ 419
ಇಸ್ಲಾಮಾಬಾದ್‌ 27
ಬಲೂಚಿಸ್ಥಾನ್‌ 131
ಖೈಬರ್‌ಪ್ರಾಂತ್ಯ 147
ಎಜೆಕೆ ಪ್ರಾಂತ್ಯ 93

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.