ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಬೇಸರವಿಲ್ಲ; 5 ಲಕ್ಷ ರೂ.ದಂಡ ಕಟ್ಟಲು ತಯಾರಿರಿ ಎಲ್ಲ
Team Udayavani, Mar 27, 2020, 9:51 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸಿಂಗಾಪುರ: ಸಿಂಗಾಪುರ ಸರಕಾರ ಹೇಳುತ್ತಿರುವುದು ಇದನ್ನೇ. ನೀವು ಸಾಮಾಜಿಕ ಅಂತರ ಕಾಯ್ದುಕೊಂಡರೆ ನಿಮ್ಮ ಆರೋಗ್ಯವಷ್ಟೇ ಅಲ್ಲ ; ನಿಮ್ಮ ಜೇಬಿನ ಆರೋಗ್ಯವೂ ಸಹ. ಇಲ್ಲವಾದರೆ ನಮಗೆ ಬೇಸರವಿಲ್ಲ. ರೋಗದ ಜತೆಗೆ ದೊಡ್ಡ ಮೊತ್ತದ ದಂಡವನ್ನೂ ಕಟ್ಟಬೇಕಾದೀತು.
ಕೋವಿಡ್ 19 ವೈರಸ್ ಮಾರಿ ನಮ್ಮ ದೇಹವನ್ನು ಆಕ್ರಮಿಸದಿರಲು ವಹಿಸುವ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಒಂದು. ಮನೆಯಲ್ಲೇ ಇರಿ, ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಬೇಡಿ ಎಂದು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಅದನ್ನೂ ನಿರ್ಲಕ್ಷ್ಯಿಸುವವರ ವಿರುದ್ಧ ಸಿಂಗಾಪುರ ಬರೀ ಕೆಲವು ಕಠಿನ ಕ್ರಮಗಳಕ್ಕೆ ಮುಂದಾಗಿಲ್ಲ. ಜತೆಗೆ ಹತ್ತು ಸಾವಿರ ಡಾಲರ್ ದಂಡ ವಿಧಿಸುತ್ತಿದೆ.
10 ಸಾವಿರ ಡಾಲರ್ ದಂಡ
ಸಿಂಗಾಪುರ ಸರಕಾರದ ಪ್ರಕಾರ ಫಿಜಿಕಲ್ ಡಿಸ್ಟಾನ್ಸ್ ನಿಯಮಗಳಡಿ ಸಾರ್ವಜನಿಕ ಪ್ರದೇಶಗಳಲ್ಲಿ ಒಬ್ಬರಿಂದ ಮತ್ತೂಬ್ಬರಿಗೆ ಕನಿಷ್ಟ ಅಂದರೂ 1 ಮೀಟರ್‌ಅಂತರ ಇರಬೇಕು. ಇದನ್ನು ಉಲ್ಲಂ ಸುವವರಿಗೆ 10,000 ಡಾಲರ್ (5,22,342 ರೂ.) ವರೆಗೂ ದಂಡ ವಿಧಿಸಲು ಅಥವಾ ಆರು ತಿಂಗಳ ಕಾಲ ಜೈಲು ಅಥವಾ ಈ 2 ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಅಲ್ಲಿನ ಅಂಕಿಅಂಶದ ಪ್ರಕಾರ ಇಲ್ಲಿಯವರೆಗೆ 683 ಸೋಂಕು ಪೀಡಿತರಿದ್ದು, 2 ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಇನ್ನೂ 172 ಜನ ಗುಣಮುಖರಾಗಿದ್ದು, 17ಮಂದಿ ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.