ಯುಕೆ: 2 ತಿಂಗಳು ಕೋಮಾದಲ್ಲಿದ್ದು ಪವಾಡ ಸದೃಶ ಬದುಕುಳಿದ ಭಾರತೀಯ ಮೂಲದ ವೈದ್ಯೆ
ಹಲವು ದಿನಗಳ ನಂತರ ಇಸಿಎಂಒಗೆ ಸ್ಥಳಾಂತರಿಸಿದ್ದರು ಎಂದು ಡಾ.ಅನುಷಾ ತಿಳಿಸಿದ್ದಾರೆ.
Team Udayavani, May 21, 2021, 10:06 AM IST
ಲಂಡನ್/ನವದೆಹಲಿ: ಬ್ರಿಟನ್ ನಲ್ಲಿ ಕಳೆದ ಎರಡು ತಿಂಗಳಿನಿಂದ ಕೋವಿಡ್ ಸೋಂಕಿತ ಭಾರತೀಯ ಮೂಲದ ವೈದ್ಯೆಯೊಬ್ಬರು ಕೋಮಾದಲ್ಲಿದ್ದು, ಇದೀಗ ಪವಾಡ ಸದೃಶ ರೀತಿಯಲ್ಲಿ ಚೇತರಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 2.59 ಲಕ್ಷ ಕೋವಿಡ್ ಪ್ರಕರಣ ಪತ್ತೆ, 4,200 ಮಂದಿ ಸಾವು
ಗಂಭೀರವಾಗಿ ಆರೋಗ್ಯ ಹದಗೆಟ್ಟಿದ್ದರಿಂದ ವೈದ್ಯೆ ತನ್ನ ಕುಟುಂಬ ಸದಸ್ಯರಿಗೆ ಕೊನೆಗಾಲ ಸಮೀಪಿಸಿರುವುದಾಗಿಯೇ ಹೇಳಿದ್ದರು. ಇಸಿಎಂಒ-ಎಕ್ಟ್ರಾ ಕಾರ್ಪೊರಾಲ್ ಅಕ್ಸಿಜನ್ ಯಂತ್ರದ ನೆರವಿನಲ್ಲಿದ್ದು, ಇದು ಜೀವದ ಕೊನೆಯ ಘಟ್ಟವೆಂದು ವೈದ್ಯಕೀಯವಾಗಿ ಪರಿಗಣಿಸಲಾಗುತ್ತಿದೆ. ಆದರೆ ಅಚ್ಚರಿ ಎಂಬಂತೆ 35 ದಿನಗಳ ಮಾಡು ಇಲ್ಲವೇ ಮಡಿ ಎಂಬ ಚಿಕಿತ್ಸೆಯ ಬಳಿಕ ವೈದ್ಯೆ ಚೇತರಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಪವಾಡಸದೃಶ ಚೇತರಿಕೆ ಕಂಡು ನನ್ನ ಕುಟುಂಬ ನಿಜಕ್ಕೂ ಅಚ್ಚರಿಗೊಳಗಾಗಿದೆ. ನನ್ನ ಮಗಳು, ನನ್ನ ಪತಿ ಪ್ರತಿ ಹಂತದಲ್ಲಿಯೂ ನನ್ನೊಂದಿಗಿದ್ದರು ಎಂದು ಡಾ. ಅನುಷಾ ಗುಪ್ತಾ ತಿಳಿಸಿದ್ದಾರೆ. ಸಂಪೂರ್ಣವಾಗಿ ಕೋಮಾದಿಂದ ಹೊರಬಂದ ನಂತರ ಆಕೆ ಮತ್ತೆ ನಿಲ್ಲುವುದನ್ನು ಮತ್ತು ನಡೆಯುವುದನ್ನು ಕಲಿಯಬೇಕಾಗಿತ್ತು. ಡಾ.ಅನುಷಾ ಅವರು ಯುಕೆಯಲ್ಲಿರುವ ಐದು ಇಸಿಎಂಒ ಕೇಂದ್ರಗಳಲ್ಲಿ ಒಂದಾಗಿರುವ ಮ್ಯಾಂಚೆಸ್ಟರ್ ಆಸ್ಪತ್ರೆಯಲ್ಲಿ ಒಟ್ಟು 150 ದಿನಗಳನ್ನು ಕಳೆದಿದ್ದರು ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ಡಾ.ಗುಪ್ತಾ 40ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ನಂತರ ಕೆಲವು ವಾರಗಳಲ್ಲಿಯೇ ಗುಪ್ತಾಗೆ ಕೋವಿಡ್ 19 ಸೋಂಕು ತಗುಲಿತ್ತು. ದಿಢೀರನೆ ಅವರ ಆರೋಗ್ಯ ಹದಗೆಟ್ಟಿತ್ತು. ಆಮ್ಲಜನಕದ ಪ್ರಮಾಣ ಶೇ.80ಕ್ಕಿಂತ ಕಡಿಮೆಯಾಗಿತ್ತು. ನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್ ನಲ್ಲಿ ಇರಿಸಿದ್ದರು. ಹಲವು ದಿನಗಳ ನಂತರ ಇಸಿಎಂಒಗೆ ಸ್ಥಳಾಂತರಿಸಿದ್ದರು ಎಂದು ಡಾ.ಅನುಷಾ ತಿಳಿಸಿದ್ದಾರೆ.
ಇಸಿಎಂಒ ಅತ್ಯುತ್ತಮ ಜೀವರಕ್ಷಕ ವ್ಯವಸ್ಥೆಯಾಗಿದೆ. ಇದು ರೋಗಿಯ ಜೋಡಿ ಶ್ವಾಸಕೋಶದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಯ ಪ್ರಾಣ ರಕ್ಷಿಸಲು ನೆರವಾಗುತ್ತದೆ ಎಂದು ಡಾ.ಅನುಷಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.