![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 13, 2020, 6:05 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀಜಿಂಗ್: ಬ್ರೆಜಿಲ್‌ನಿಂದ ಆಮದಾದ ಕೋಳಿಯಲ್ಲಿ ಕೋವಿಡ್-19 ಪತ್ತೆಯಾಗಿದೆ ಎಂದು ಚೀನ ಹೇಳಿದೆ.
ಕಳೆದ ವಾರ, ಯಾಂಟೈ ನಗರದ ಈಕ್ವೆಡಾರ್‌ನಿಂದ ಕಳುಹಿಸಲಾದ ಲಾಬ್‌ಸ್ಟರ್ ಮೀನುಗಳೂ ಸಹ ಸೋಂಕಿಗೆ ಒಳಗಾಗಿದ್ದವು ಎಂದು ವರದಿಯಾಗಿದೆ.
ಈ ಮೂಲಕ ಚೀನ ತನಗೆ ಅಂಟಿರುವ ಕಳಂಕವನ್ನು ನಿವಾರಿಸಲು ಯುರೋಪಿಯನ್ ಸಮುದಾಯದ ಮೇಲೆ ಕೋವಿಡ್-19ನ ಮೂಲವನ್ನು ಹೇರಲು ಹೊರಟಿದೆ.
ಜೂನ್‌ನಲ್ಲಿ ಚೀನ ಬ್ರೆಜಿಲ್ ಸೇರಿದಂತೆ ಇತರ ಕೆಲವು ದೇಶಗಳಿಂದ ಮಾಂಸ ಆಮದನ್ನು ನಿಲ್ಲಿಸಿತ್ತು. ಆದರೆ ಬಳಿಕ ಆಮದು ನಿಷೇಧವನ್ನು ತೆಗೆದುಹಾಕಲಾಯಿತು.
ಬ್ರೆಜಿಲ್‌ನಿಂದ ಕಳುಹಿಸಿದ ಕೋಳಿಯನ್ನು ಸ್ಯಾಂಪಲ್ ಮಾಡಲಾಗಿತ್ತು. ಇದರ ವರದಿಯು ಕೋವಿಡ್-19 ಪಾಸಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ ಕೋಳಿಯೊಂದಿಗೆ ಸಂಪರ್ಕಕ್ಕೆ ಬಂದ ಕೆಲವು ಜನರು ಮತ್ತು ಇತರ ಉತ್ಪನ್ನಗಳನ್ನು ತನಿಖೆ ಮಾಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಆದರೆ ಅವರ ವರದಿ ನೆಗೆಟಿವ್ ಬಂದಿತ್ತು.
ಇದೀಗ ಚೀನ ಕೋವಿಡ್-19 ಆರೋಪವನ್ನು ಬ್ರೆಜಿಲ್ ಮೇಲೆ ಮಾಡಿದ್ದು ಈ ಬಗ್ಗೆ ಆ ದೇಶ ಯಾವುದೇ ಹೇಳಿಕೆ ನೀಡಿಲ್ಲ. ಈ ಘಟನೆ ಕುರಿತಂತೆ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಚೀನ ಹೇಳಿದೆ. ಜೂನ್‌ನಲ್ಲಿ ಚೀನದ ರಾಜಧಾನಿ ಬೀಜಿಂಗ್‌ನ ಸೀ ಫುಡ್ ಮಾರುಕಟ್ಟೆಯಲ್ಲಿ ಸೋಂಕಿನ ಪ್ರಕರಣಗಳು ಕಂಡುಬಂದವು. ಅಂದಿನಿಂದ ಸರಕಾರವು ಎಲ್ಲ ಆಹಾರ ಉತ್ಪನ್ನಗಳ ಮಾದರಿಯನ್ನು ತೆಗೆದುಕೊಂಡು ಅದರ ಕೋವಿಡ್-19 ಪರೀಕ್ಷೆ ಮಾಡುತ್ತಿದೆ.
ಕೋವಿಡ್-19 ವೈರಸ್ ಚೀನಾದ ವುಹಾನ್ ನಗರದಿಂದ ವಿಶ್ವಾದ್ಯಂತ ಹರಡಿದೆ. ಈ ಮಾರುಕಟ್ಟೆಯಲ್ಲಿ ಬಾವಲಿಗಳು ಮತ್ತು ಹಾವುಗಳು ಸೇರಿದಂತೆ ಅನೇಕ ರೀತಿಯ ಪ್ರಾಣಿಗಳ ಮಾಂಸವನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿಂದ ಸೋಂಕು ಹರಡಿದೆ ಎಂಬ ವಿವಾದ ಹೆಚ್ಚಾದ ಅನಂತರ ಚೀನ ಅನೇಕ ಪ್ರಾಣಿಗಳ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಿತ್ತು.
ಈ ನಡುವೆ ತಿಂಗಳ ಹಿಂದೆ ಗುಣಮುಖರಾದ 2 ರೋಗಿಗಳು ಮತ್ತೆ ಸೋಂಕಿಗೆ ಒಳಗಾಗಿದ್ದಾರೆ. ಹುಬೈನಲ್ಲಿ 68 ವರ್ಷದ ಮಹಿಳೆಯೊಬ್ಬರಿಗೆ ಡಿಸೆಂಬರ್‌ನಲ್ಲಿ ಸೋಂಕು ದೃಢಪಟ್ಟಿದೆ. ಎರಡನೆಯ ಪ್ರಕರಣ ಶಾಂಗೈಗೆ ಸಂಬಂಧಿಸಿದೆ. ಎಪ್ರಿಲ್‌ನಲ್ಲಿ ವ್ಯಕ್ತಿಯೊಬ್ಬರು ಇಲ್ಲಿ ಸೋಂಕಿಗೆ ಒಳಗಾಗಿದ್ದರು ಮತ್ತು ಸೋಮವಾರ ಮತ್ತೆ ಧನಾತ್ಮಕ ವರದಿ ಬಂದಿದೆ. ಆದರೆ ಅವರಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ.
ಸ್ಥಳೀಯ ಆಡಳಿತದ ಪ್ರಕಾರ ಈ ಇಬ್ಬರು ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ ಜನರಲ್ಲಿ ಯಾರೊಬ್ಬರೂ ಸೋಂಕಿಗೆ ಒಳಗಾಗಿಲ್ಲ. ಕೊರೊನಾದಿಂದ ಚೇತರಿಸಿಕೊಂಡ ಜನರ ದೇಹದಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳು ಕೆಲವು ಸಂದರ್ಭ ಬೇಗನೇ ಕಡಿಮೆಯಾಗುತ್ತವೆ ಎಂದು ಈ ಹಿಂದೆ ನಡೆದ ಕೆಲವು ಅಧ್ಯಯನಗಳು ಹೇಳಿಕೊಂಡಿವೆ. ಅಂತಹ ಪ್ರಕರಣಗಳಲ್ಲಿ ಜನರು ಎರಡನೇ ಬಾರಿಗೆ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.