ಕೋವಿಡ್-19ಗೆ ಜಾಗತಿಕವಾಗಿ 1.54 ಲಕ್ಷ ಜನರು ಬಲಿ, ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ
Team Udayavani, Apr 18, 2020, 8:04 AM IST
ವಾಷಿಂಗ್ಟನ್: ಕೋವಿಡ್-19 ವೈರಸ್ ವಿವಿಧ ರಾಷ್ಟ್ರಗಳಲ್ಲಿ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಜಾಗತಿಕವಾಗಿ 1.54 ಲಕ್ಷಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡುಬಂದಿದ್ದು 22,50,450 ಜನರು ವೈರಾಣುವಿಗೆ ಬಾಧೀತರಾಗಿದ್ದಾರೆಂದು ವರದಿ ತಿಳಿಸಿದೆ.
ಇತರ ದೇಶಗಳಿಗಿಂತಲೂ ಅಮೆರಿಕಾದಲ್ಲಿ ಈ ಸಾಂಕ್ರಮಿಕ ರೋಗ ಅಟ್ಟಹಾಸ ಮೆರೆಯುತ್ತಿದ್ದು 37 ಸಾವಿರಕ್ಕೂ ಅಧಿಕ ಜನರು ಕೊನೆಯುಸಿರೆಳೆದಿದ್ದಾರೆ. 7ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಏತನ್ಮಧ್ಯೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ರೈತರಿಗೆ 19 ಬಿಲಿಯನ್ ಡಾಲರ್ ಗಳಷ್ಟು ಪರಿಹಾರವನ್ನು ಘೋಷಿಸಿದ್ದಾರೆ.
ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ, ಬ್ರಿಟನ್ ಗಳಲ್ಲೂ ವೈರಸ್ ತಹಬದಿಗೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲವಾಗಿದ್ದು, ದಿನೇ ದಿನೇ ಸೋಂಕಿತರ ಪ್ರಮಾಣ ಮತ್ತು ಸಾವಿನ ಪ್ರಮಾಣ ಏರುತ್ತಲೇ ಇದೆ.
ಭಾರತದಲ್ಲಿ ಶುಕ್ರವಾರ ಒಂದೇ ದಿನ 1000 ಪ್ರಕರಣಗಳ ದಾಖಲಾಗಿವೆ. 14,352 ಜನರಿಗೆ ಸೋಂಕು ಖಚಿತವಾಗಿದ್ದು 450ಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆಂದು ಆರೋಗ್ಯ ಸಚಿವಾಲಯ ತಿಳಿಸಿದೆ. 15ಲಕ್ಷಕ್ಕಿಂತ ಹೆಚ್ಚು ಜನರು ವಾಸ ಮಾಡುತ್ತಿರುವ ಮುಂಬೈನ ಕೊಳಚೆ ನಗರಿ ಧಾರವಿಯಲ್ಲಿ ದಿನದಿನಕ್ಕೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು 101 ಮಂದಿ ವೈರಾಣುವಿಗೆ ತುತ್ತಾಗಿದ್ದಾರೆಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.