ಪ್ರವಾಹದಿಂದ ರಸ್ತೆಗಿಳಿದ ಮೊಸಳೆಗಳು!
Team Udayavani, Feb 5, 2019, 12:30 AM IST
ಸಿಡ್ನಿ: ಆಸ್ಟ್ರೇಲಿಯದ ಟೌನ್ಸ್ ವಿಲ್ಲೆಯಲ್ಲಿ ಈ ಶತಮಾನದಲ್ಲೇ ಕಂಡು ಕೇಳರಿಯದ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದ್ದು, 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಈ ಭಾಗದಲ್ಲಿನ ರೋಸ್ ನದಿ ಆಣೆಕಟ್ಟೆ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿದ್ದರಿಂದ ನೀರು ಬಿಡುಗಡೆ ಮಾಡಲಾಗಿದ್ದು, ಈಗ ಮೊಸಳೆಗಳು ಮತ್ತು ಸರೀಸೃಪಗಳ ಭೀತಿ ಎದುರಾಗಿದೆ. ಸದ್ಯ ಬೋಟ್ ಹಾಗೂ ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯಾಚಾರಣೆ ನಡೆಸಲಾಗುತ್ತಿದೆ.
ರಸ್ತೆಗಳಲ್ಲೇ ಮೊಸಳೆಗಳು ಕಂಡು ಬರುತ್ತಿದ್ದು, ನೀರಿನ ಮಟ್ಟ ಇಳಿದ ಅನಂತರ ಮನೆಗಳು ಅಥವಾ ಕಾಲುವೆಗಳಲ್ಲಿ ಸೇರಿಕೊಳ್ಳಬಹುದಾಗಿದೆ. ಅದೇ ರೀತಿ ಹಾವುಗಳು ಕೂಡ ಮನೆಗಳಲ್ಲಿ ಸೇರಿಕೊಳ್ಳಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಹಲವರು ರಸ್ತೆ ಬದಿಯಲ್ಲಿ, ಮನೆ ಸಮೀಪ ಕಾಣಿಸಿಕೊಂಡಿರುವ ಮೊಸಳೆಗಳ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.
ಕಳೆದ ಒಂದು ವಾರದಲ್ಲಿ 3.3 ಅಡಿಗಿಂತಲೂ ಹೆಚ್ಚು ಮಳೆ ಸುರಿದಿದೆ. ಇದು ಒಂದು ವರ್ಷದ ಸರಾಸರಿ ಮಳೆಗಿಂತ 20 ಪಟ್ಟು ಹೆಚ್ಚಿನದಾಗಿದೆ. ಇಲ್ಲಿನ ನಿವಾಸಿಗಳ ಪ್ರಕಾರ ಈ ಪ್ರಮಾಣದ ಮಳೆಯನ್ನು ನಾವು ಹಿಂದೆಂದೂ ಕಂಡಿರಲಿಲ್ಲ. ಸುಮಾರು 100 ವರ್ಷಗಳ ಹಿಂದೆ ಇಂತಹ ಮಳೆಯಾಗಿತ್ತು ಎಂದು ನಾವು ಕೇಳಿದ್ದೇವೆ ಎಂದಿದ್ದಾರೆ. ಕ್ವೀನ್ಸ್‌ಲ್ಯಾಂಡ್‌ಉತ್ತರಕ್ಕಿರುವ ಟೌನ್ಸ್‌ವಿಲ್ಲೆಯಲ್ಲಿ ಡಿಸೆಂಬರ್‌ನಿಂದ ಎಪ್ರಿಲ್‌ವರೆಗೆ ಮಳೆಯಾಗುತ್ತದೆ. ಆದರೆ ಈ ಬಾರಿ ನಿರೀಕ್ಷೆಗಿಂತ ವಿಪರೀತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.