ಲಾದನ್ ಪುತ್ರಗೆ ಉಗ್ರ ನೇತೃತ್ವ
Team Udayavani, Sep 20, 2017, 10:56 AM IST
ಪ್ಯಾರಿಸ್: ವಿಶ್ವದ ನಂ.1 ಉಗ್ರನೆಂದೇ ಕುಖ್ಯಾತಿ ಗಳಿಸಿದ್ದ ಉಸಾಮ ಬಿನ್ ಲಾದನ್‌ನಿಂದ ತೆರವಾಗಿರುವ ಉಗ್ರ ಸಂಘಟನೆ ಅಲ್‌ಕಾಯಿದಾದ ಉತ್ತರಾಧಿಕಾರಿ ಸ್ಥಾನವನ್ನು ಆತನ ಪುತ್ರನೇ ತುಂಬಲಿದ್ದಾನೆಯೇ ಎಂಬ ಶಂಕೆಯೊಂದು ಮೂಡಿದೆ. 9/11ರ ದಾಳಿಗೆ 16 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಲ್‌ಕಾಯಿದಾ ಇತ್ತೀಚೆಗೆ ಒಂದು ಫೋಟೋ ಸಂಯೋಜನೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಮೆರಿಕದ ಅವಳಿ ಕಟ್ಟಡಗಳು ಹೊತ್ತಿ ಉರಿಯುತ್ತಿರುವ ಫೋಟೋ ಇದ್ದು, ಅದರ ಬೆಂಕಿಯಲ್ಲಿ ಉಸಾಮ ಬಿನ್ ಲಾದನ್ ನಗುತ್ತಿರುವ ಫೋಟೋವನ್ನು ಸೇರಿಸಲಾಗಿದೆ. ಲಾಡೆನ್‌ನ ಪಕ್ಕದಲ್ಲೇ ಅವನ ಪುತ್ರ ಹಮಾl ಕೂಡ ಇದ್ದಾನೆ. ಈ ಮೂಲಕ ಅಲ್‌ಕಾಯಿದಾವು ಹಮಾlನನ್ನು “ಜೆಹಾದ್‌ನ ದೊರೆ’ ಎಂದು ಬಿಂಬಿಸಲು ಹೊರಟಿದೆ ಎಂದು ಫ್ರಾನ್ಸ್‌ನ ಮಾಧ್ಯಮಗಳು ವರದಿ ಮಾಡಿವೆ.
ಹಮಾl ಈಗ 28ರ ಯುವಕ. ಉಸಾಮ ಸತ್ತಾಗಿನಿಂದಲೂ ಈತನ ಹೆಸರು ಚಾಲ್ತಿಯಲ್ಲಿತ್ತು. ಇದೀಗ ಮತ್ತೂಂದು ಉಗ್ರ ಸಂಘಟನೆಯಾದ ಐಸಿಸ್‌ನ ಪ್ರಭಾವ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಲಾಭ ಪಡೆದು ವಿಶ್ವಾದ್ಯಂತ ಎಲ್ಲ ಜೆಹಾದಿಗಳನ್ನೂ ಈ ಯುವಕನ ನೇತೃತ್ವದಲ್ಲಿ ಒಗ್ಗೂಡಿಸುವುದು ಅಲ್‌ಕಾಯಿದಾದ ಚಿಂತನೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಲಾದನ್‌ನ 20 ಮಕ್ಕಳ ಪೈಕಿ ಹಮಾl 15ನೆಯವ. ಈತನಿಗೆ ಬಾಲ್ಯದಿಂದಲೇ ಜೆಹಾದಿಯಾಗಲು ಎಲ್ಲ ತರಬೇತಿಗಳನ್ನು ನೀಡಲಾಗಿದೆ. ಶಸ್ತ್ರಾಸ್ತ್ರಗಳ ನಿರ್ವಹಣೆಯನ್ನೂ ಕಲಿಸಲಾಗಿದೆ. ಆದರೆ, ಈಗ ಆತ ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲ. ಆದರೆ, ಅವನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಈಗಾಗಲೇ ಸೇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Hard Disk: ಬಿಟ್ಕಾಯಿನ್ ಇದ್ದ ಹಾರ್ಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.