Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?
Team Udayavani, Dec 16, 2024, 8:46 AM IST
ಪ್ಯಾರಿಸ್: ‘ಚಿಡೋ’ ಚಂಡಮಾರುತವು ಫ್ರಾನ್ಸ್‌ನ ಮಯೊಟ್ಟೆ ಪ್ರದೇಶದಲ್ಲಿ ಭಾರಿ ಹಾನಿಯನ್ನುಂಟು ಮಾಡಿದ್ದು ಚಂಡಮಾರುತದ ಹೊಡೆತಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ 1,000 ಗಡಿ ದಾಟುವ ಸಾಧ್ಯತೆ ಇದೆ ಎಂದು ಉನ್ನತ ಅಧಿಕಾರಿಯೊಬ್ಬರು ಭಾನುವಾರ(ಡಿ.15) ಮಾಹಿತಿ ನೀಡಿದ್ದಾರೆ.
ಶನಿವಾರ ಹಿಂದೂ ಮಹಾಸಾಗರದ ದ್ವೀಪಗಳಿಗೆ ಚಂಡಮಾರುತ ಅಪ್ಪಳಿಸಿದ್ದು ಇದರಿಂದ ವ್ಯಾಪಕ ಹಾನಿಯಾಗಿದ್ದು ಸಾವಿರಾರು ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡರೆ ಸಾವಿರಾರು ಮಂದಿ ಸಾವಿರಾರು ಮಂದಿ ಜೀವ ಕಳೆದುಕೊಂಡಿರಬಹುದು ಅಲ್ಲದೆ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಅಲ್ಲದೆ ಇದು 90 ವರ್ಷಗಳಲ್ಲಿ ಮಾಯೊಟ್ಟೆಗೆ ಅಪ್ಪಳಿಸಿದ ಅತ್ಯಂತ ಭೀಕರ ಚಂಡಮಾರುತ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನೆಗಳು ನೆಲಸಮ
ಶನಿವಾರದಂದು ಮಯೊಟ್ಟೆಗೆ ಅಪ್ಪಳಿಸಿದ ಚಂಡಮಾರುತದ ಅಬ್ಬರಕ್ಕೆ ಆ ಪ್ರದೇಶದಲ್ಲಿರುವ ನೂರಾರು ಮನೆಗಳು ನೆಲಸಮಗೊಂಡಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ ಅಲ್ಲದೆ ಚಂಡಮಾರುತದಿಂದ ಉಂಟಾದ ಸಾವಿನ ಸಂಖ್ಯೆ ನಿಖರವಾಗಿ ಹೇಳುವುದು ಕಷ್ಟ ಸಾಧ್ಯ ಪ್ರದೇಶ ತುಂಬಾ ಮೃತ ದೇಹಗಳೇ ಕಂಡು ಬರುತಿದ್ದು ಇದು ಸಾವಿರದ ಗಡಿ ದಾಟುವ ಸಂಭವವಿದೆ ಎನ್ನಲಾಗಿದೆ ಅಲ್ಲದೆ ಈ ಪ್ರದೇಶದಲ್ಲಿರುವ ವಿಮಾನ ನಿಲ್ದಾಣ ನೆಲಸಮವಾಗಿದೆ. ಫ್ರಾನ್ಸ್‌ನ ಆಂತರಿಕ ಸಚಿವಾಲಯ ಭಾನುವಾರ ಬೆಳಿಗ್ಗೆ ಚಂಡಮಾರುತದಿಂದ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು ಮತ್ತು 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸಿತ್ತು ಆದರೆ ಸಂಜೆಯ ವೇಳೆ ಸಾವಿನ ಸಂಖ್ಯೆ ಸಾವಿರ ಗಡಿ ದಾಟಿದೆ ಎಂದು ಹೇಳಲಾಗಿದೆ.
ಮಯೊಟ್ಟೆ, ಫ್ರಾನ್ಸ್‌ನ ಬಡ ದ್ವೀಪ ಪ್ರದೇಶ
ಮಯೊಟ್ಟೆ, ಆಫ್ರಿಕಾದ ಕರಾವಳಿಯ ಆಗ್ನೇಯ ಹಿಂದೂ ಮಹಾಸಾಗರದಲ್ಲಿದೆ, ಇದು ಫ್ರಾನ್ಸ್‌ನ ಬಡ ದ್ವೀಪ ಪ್ರದೇಶವಾಗಿದೆ ಈ ಪ್ರದೇಶ ಚಂಡಮಾರುತದ ಹೊಡೆತಕ್ಕೆ ಸಿಲುಕಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಯೊಟ್ಟೆಯಲ್ಲಿ ಗಾಯಗೊಂಡವರ ನಿಖರ ಸಂಖ್ಯೆ ತಿಳಿದಿಲ್ಲ ಆದರೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಫ್ರೆಂಚ್ ಆಂತರಿಕ ಸಚಿವಾಲಯ ತಿಳಿಸಿದೆ.
🧵 I wonder if the catastrophic situation in Mayotte will get more attention than drones that aren’t drones. Where’s the hysteria about this. Where’s MSM 🤬
Cyclone Chido has devastated Mayotte, a small island in the Indian ocean with gusts of at least 226 kilometres per hour… pic.twitter.com/Mk65WPGCte
— Volcaholic 🌋 (@volcaholic1) December 15, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Los Angeles Wildfires: ಇನ್ನೂ 60 ಲಕ್ಷ ಜನರಿಗೆ ಸಂಕಷ್ಟ, ಸಾವಿನ ಸಂಖ್ಯೆ 25ಕ್ಕೇರಿಕೆ
Khaleda Zia: ಭ್ರಷ್ಟಾಚಾರ ಪ್ರಕರಣ… ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾ ಜಿಯಾ ಖುಲಾಸೆ
South Korea; 2ನೇ ಪ್ರಯತ್ನದಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನ : ವರದಿ
Ceasefire: ಇಸ್ರೇಲ್, ಹಮಾಸ್ ಕದನ ವಿರಾಮಕ್ಕೆ ಒಪ್ಪಿಗೆ?
Mauro Morandi: 32 ವರ್ಷ ದ್ವೀಪದಲ್ಲಿದ್ದ ಇಟಲಿಗ ನಾಡಿಗೆ ಬಂದ 3 ವರ್ಷದಲ್ಲೇ ನಿಧನ!
MUST WATCH
ಹೊಸ ಸೇರ್ಪಡೆ
Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು
Saif Ali Khan: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.