ಅಮೆರಿಕವನ್ನು ಥರಗುಟ್ಟಿಸಿದ ಬಾಂಬ್ ಸೈಕ್ಲೋನ್! ಕ್ರಿಸ್ಮಸ್, ಹೊಸ ವರ್ಷದ ಸಂಭ್ರಮಕ್ಕೆ ತಡೆ
ಮೈನಸ್ 40 ಡಿ.ಸೆ. ತಾಪಮಾನದೊಂದಿಗೆ ಬೀಸುತ್ತಿದೆ ಶೀತ ಚಂಡಮಾರುತ
Team Udayavani, Dec 24, 2022, 8:10 AM IST
ಶಿಕಾಗೋ: ಅಮೆರಿಕದ ಹಲವು ಭಾಗಗಳಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನವಾದ “ಬಾಂಬ್ ಸೈಕ್ಲೋನ್’ ಆರಂಭವಾಗಿದೆ. ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಬೀಸುತ್ತಿರುವ ಚಳಿ ಗಾಳಿಯು ನಾಗರಿಕರನ್ನು ಥರಗುಟ್ಟುವಂತೆ ಮಾಡಿದೆ.
ಕ್ರಿಸ್ಮಸ್, ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗಿದ್ದ ಅಮೆರಿಕನ್ನರಿಗೆ “ತಲೆಮಾರಿನಲ್ಲಿ ಒಂದು ಬಾರಿಯಷ್ಟೇ’ ಕಂಡುಬರುವಂಥ “ಬಾಂಬ್ ಸೈಕ್ಲೋನ್’ ಆಘಾತ ಉಂಟುಮಾಡಿದೆ. ವಿಪರೀತ ಚಳಿಯ ಜತೆಗೆ ಶೀತ ಗಾಳಿ ಹಾಗೂ ಮುಂದೆ ಏನಿದೆ ಎಂಬುದು ಗೋಚರಿಸದಂತೆ ದಟ್ಟ ಮಂಜು ಕವಿದಿದ್ದು, ಸಾವಿರಾರು ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಪ್ರಮುಖ ಹೆದ್ದಾರಿಗಳನ್ನೂ ಬಂದ್ ಮಾಡಲಾಗಿದೆ. ಈ ಮಂಜಿನ ಚಂಡಮಾರುತದಿಂದಾಗಿ ರಜೆಯ ಮಜಾ ಅನುಭವಿಸಬೇಕಿದ್ದ ಅಮೆರಿಕನ್ನರು ಈಗ ಮನೆಯೊಳಗೇ ಬಂಧಿಯಾಗಿದ್ದಾರೆ. ಕೆಂಟುಕಿ, ಮಿಸೌರಿ, ಓಕ್ಲಹೋಮಾ, ಜಾರ್ಜಿಯಾ ಮತ್ತು ನಾರ್ತ್ ಕರೋಲಿನಾದಲ್ಲಿ ತುರ್ತು ಪರಿಸ್ಥಿತಿಯ ಸ್ಥಿತಿಯಿದೆ.
ಏನಿದು ಬಾಂಬ್ ಸೈಕ್ಲೋನ್?
ವಾಯುಭಾರ ಒತ್ತಡವು ಇಳಿಕೆಯಾಗಿ, ಶೀತ ಗಾಳಿಯ ದ್ರವ್ಯರಾಶಿಯು ಬಿಸಿಗಾಳಿಯ ದ್ರವ್ಯರಾಶಿಯೊಂದಿಗೆ ಘರ್ಷಣೆಯಾದಾಗ “ಬಾಂಬ್ ಸೈಕ್ಲೋನ್’ ಉಂಟಾಗುತ್ತದೆ. ಒತ್ತಡವು ಎಷ್ಟು ಕಡಿಮೆಯಾಗುತ್ತದೋ ಗಾಳಿಯು ಎಷ್ಟೇ ಬಲಿಷ್ಠವಾಗುತ್ತದೆ. ಕೆಲವೇ ಗಂಟೆಗಳ ಅವಧಿಯಲ್ಲಿ ತಾಪಮಾನ 11 ಡಿ.ಸೆ.ಗಿಂತಲೂ ಹೆಚ್ಚು ಇಳಿಯುತ್ತದೆ.
ಫ್ರಾಸ್ಟ್‌ಬೈಟ್ ಆತಂಕ
ಲಕ್ಷಾಂತರ ಮಂದಿಗೆ ಈ ಚಳಿ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಮನೆಗಳಿಂದ ಹೊರಗೆ ಕಾಲಿಡದಂತೆ ಸೂಚನೆ ನೀಡಲಾಗಿದೆ. ಕೆಲವು ಪ್ರದೇಶಗಳಲ್ಲಂತೂ ಪರಿಸ್ಥಿತಿ ಹೇಗಿದೆಯೆಂದರೆ ಮನೆಯಿಂದ ಹೊರಗೆ ಕಾಲಿಟ್ಟರೆ ಕ್ಷಣಮಾತ್ರದಲ್ಲಿ ಫ್ರಾಸ್ಟ್‌ಬೈಟ್(ಶೀತದಿಂದ ಉಂಟಾಗುವ ಉರಿಯೂತ) ಉಂಟಾಗುತ್ತದೆ ಎಂದೂ ಎಚ್ಚರಿಸಲಾಗಿದೆ. ಫ್ರಾಸ್ಟ್‌ಬೈಟ್ ಎಂದರೆ ಅತಿಯಾದ ಶೀತಕ್ಕೆ ಮೈ ಒಡ್ಡಿಕೊಂಡರೆ ದೇಹದ ಅಂಗಾಂಶಗಳಿಗೆ ಉಂಟಾಗುವ ಗಾಯ. ಮೂಗು, ಕೈಬೆರಳು, ಕಾಲೆºರಳುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗ್ಯಾಂಗ್ರೀನ್‌ಗೂ ಕಾರಣವಾಗಬಹುದು.
12 ಗಂಟೆ; 104 ಅಪಘಾತ!
ದಟ್ಟ ಮಂಜಿನಿಂದಾಗಿ ದೃಷ್ಟಿ ಗೋಚರತೆ ಶೂನ್ಯಕ್ಕೆ ತಲುಪಿದೆ. ಕೇವಲ 12 ಗಂಟೆಗಳ ಅವಧಿಯಲ್ಲಿ 104 ಅಪಘಾತಗಳು ಸಂಭವಿಸಿವೆ. ಅಮೆರಿಕದ ವ್ಯೋಮಿಂಗ್ ಹೆದ್ದಾರಿ ಗಸ್ತು ಪಡೆಯೊಂದಕ್ಕೇ 787 ಕರೆಗಳು ಬಂದಿವೆ. ರ್ಯಾಪಿಡ್ ಸಿಟಿಯಲ್ಲಿ ಸಂಚರಿಸಲಾಗದೇ 100ಕ್ಕೂ ಹೆಚ್ಚು ಬೈಕ್ ಸವಾರರು ಅತಂತ್ರರಾಗಿದ್ದಾರೆ.
ಇದು ನೀವು ಸಾಮಾನ್ಯವಾಗಿ ನೋಡುವ ಮಂಜಿನ ಮಳೆಯಲ್ಲ. ದಯವಿಟ್ಟು ಯಾರೂ ಇದನ್ನು ಹಗುರವಾಗಿ ಪರಿಗಣಿಸಬೇಡಿ. ಇದೊಂದು ಗಂಭೀರ ವಿಚಾರ. ನಿಮ್ಮ ಪ್ರಯಾಣವನ್ನೆಲ್ಲ ಮುಂದೂಡಿ.
-ಜೋ ಬೈಡೆನ್, ಅಮೆರಿಕ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.