ಹೆತ್ತಬ್ಬೆಗೆ ಚಿಕಿತ್ಸೆಯಿತ್ತ ವೈದ್ಯನ ವಿರುದ್ಧ ಗೆದ್ದ ಪುತ್ರಿ
ವೈದ್ಯರು ಸೂಕ್ತ ಸಲಹೆ ನೀಡದ್ದರಿಂದ ಕಾಣಿಸಿಕೊಂಡ ಬೆನ್ನೆಲುಬಿನ ಸಮಸ್ಯೆ
Team Udayavani, Dec 3, 2021, 6:50 AM IST
ಲಂಡನ್: “ಅಯ್ಯೋ ಅಮ್ಮಾ ನನ್ನೇಕೆ ಹುಟ್ಟಿಸಿದೆ?’ ಹೀಗೆಂದು ಹೆತ್ತಮ್ಮನನ್ನು ಪ್ರಶ್ನಿಸುವವರಿದ್ದಾರೆ. ಹಾಗೆಂದು ಕೋರ್ಟ್‌ಗೆ ಹೋಗಿ ದಾವೆ ಹೂಡಿದವರು ಭಾರತದಲ್ಲಿ ಇಲ್ಲ. ಆದರೆ ಲಂಡನ್‌ನಲ್ಲಿ ಇವಿ ಟೊಂಬೆಸ್ (20) ಎಂಬ ಯುವತಿ ವೈದ್ಯರು ತಾಯಿಗೆ ತಪ್ಪು ಮಾಹಿತಿ ನೀಡಿದ್ದರಿಂದಲೇ ತನ್ನ ಹುಟ್ಟಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ದಾವೆ ಹೂಡಿ, ಗೆದ್ದಿದ್ದಾಳೆ.
ಜಗತ್ತಿನಲ್ಲಿ ಇದೊಂದು ಅತ್ಯಂತ ಅಪರೂಪದ ಪ್ರಕರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇವಿ ಅವರಿಗೆ ಹುಟ್ಟಿನಿಂದಲೇ ಬೆನ್ನೆಲುಬಿನ ಸಮಸ್ಯೆ ಉಂಟಾಗಿದೆ. ತನ್ನ ತಾಯಿ ಕ್ಯಾರೊ ಲೈನ್ ಅವರ ವೈದ್ಯ ಡಾ| ಫಿಲಿಪ್ ಮೈಕೆಲ್ ತನಗೆ ಬೆನ್ನೆಲುಬಿನ ಸಮಸ್ಯೆ ಉಂಟಾಗದಂತೆ ಸೂಕ್ತ ರೀತಿ ಯಲ್ಲಿ ಔಷಧ ಸೇವಿಸಲು ಸೂಚಿಸುವಲ್ಲಿ ವಿಫಲರಾಗಿ ದ್ದಾರೆ. ಹೀಗಾಗಿ ನನ್ನ ಜನನವಾಯಿತು ಎಂದು ದೂರಿದ್ದಾಳೆ. ಅದರಿಂದಾಗಿ ತಾನು 24 ಗಂಟೆಗಳ ಕಾಲ ಮೂಗಿನಲ್ಲಿ ನಳಿಕೆ ಇರಿಸಿಕೊಂಡೇ ಇರಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದ್ದಾಳೆ.
ತಾಯಿ ಕ್ಯಾರೊಲೈನ್ ಗರ್ಭಿಣಿ ಯಾಗಿದ್ದಾಗ ಫಾಲಿಕ್ ಆ್ಯಸಿಡ್ ಅನ್ನು ಸೂಕ್ತ ರೀತಿಯಲ್ಲಿ ಸೇವಿಸುವಂತೆ ವೈದ್ಯಕೀಯ ಸಲಹೆ ನೀಡಲಿಲ್ಲ ಎಂದು ಆರೋಪಿಸಿದ್ದಾಳೆ. ಈ ಬಗ್ಗೆ ಲಂಡನ್ ಹೈಕೋರ್ಟ್‌ನಲ್ಲಿ ಇವಿ ಟೊಂಬೆಸ್ ದಾವೆ ಹೂಡಿದ್ದರು. ಅದನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಯುವತಿಯ ಪರವಾಗಿ ನ್ಯಾ| ರೊಸಾಲಿಂಡ್ ಅವರ ಪರವಾಗಿ ಯೇ ಆದೇಶ ತೀರ್ಪು ನೀಡಿ ನಗದು ಪರಿಹಾರ ನೀಡುವಂತೆಯೂ ಆದೇಶ ನೀಡಿದೆ.
ಇದನ್ನೂ ಓದಿ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್
ಡಾ| ಫಿಲಿಪ್ ಮೈಕೆಲ್ ಬಳಿ ವೈದ್ಯಕೀಯ ಸಲಹೆ ಪಡೆಯುವ ಸಂದರ್ಭದಲ್ಲಿ ಇವಿ ಅವರ ತಾಯಿ ಗರ್ಭಿಣಿಯಾಗಿ ರಲಿಲ್ಲ. ಅನಂತರದ ಸಂದರ್ಭಗಳಲ್ಲಿ ವೈದ್ಯರು ಯುವತಿಯ ತಾಯಿಗೆ ಗರ್ಭಧಾರಣೆಯ ಮೊದಲ 12 ವಾರಗಳಲ್ಲಿ ಫಾಲಿಕ್ ಆಮ್ಲದ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಿದ್ದರೆ ಅರ್ಜಿದಾರರಿಗೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಹೀಗಾಗಿ ಅವರಿಗೆ ಪರಿಹಾರ ನೀಡಬೇಕಾದ ಅಗತ್ಯವಿದೆ ಎಂದು ನ್ಯಾಯಮೂರ್ತಿ ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಆರೋಪ ನಿರಾಕರಣೆ: ಯುವತಿ ಇವಿ ತಮ್ಮ ಮೇಲೆ ಹೊರಿಸಿದ ಆರೋಪಗಳನ್ನು ಡಾ| ಮೈಕೆಲ್ ಫಿಲಿಪ್ ನಿರಾಕರಿಸಿದ್ದಾರೆ. ಅವರ ತಾಯಿ ಕ್ಯಾರೊ ಲೈನ್ ಅವರಿಗೆ ಸೂಕ್ತ ರೀತಿಯಲ್ಲಿಯೇ ವೈದ್ಯಕೀಯ ಸಲಹೆ ನೀಡಿದ್ದಾಗಿ ಹೇಳಿದ್ದಾರೆ. ತಾಯಿ ಕ್ಯಾರೊ ಲೈನ್ ಕೂಡ ಪ್ರತಿಕ್ರಿಯೆ ನೀಡಿ, ವೈದ್ಯರು ಫಾಲಿಕ್ ಆ್ಯಸಿಡ್ ಮಾತ್ರೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಉತ್ತಮ ಆಹಾರ ಪದ್ಧತಿ ಅನುಸರಿಸಿದರೆ ಸಾಕಾಗು ತ್ತದೆ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.
ನೋವಿನಲ್ಲೂ ಸಾಧನೆ ಬೆನ್ನೆಲುಬಿನ ಸಮಸ್ಯೆ ಇದ್ದಾಗಿಯೂ ಇವಿ ಟೊಂಬೆಸ್ ಕುದುರೆ ಸವಾರಿಯಲ್ಲಿ ಉತ್ತಮ ಪರಿಣತಿಯನ್ನು ಪಡೆದುಕೊಂಡಿದ್ದಾರೆ. ಅದರಲ್ಲಿಯೇ ಯಶಸ್ಸು ಸಾಧಿಸಿರುವ ಅವರು, ಹಲವು ಪ್ರಶಸ್ತಿಗಳನ್ನೂ ಗೆದ್ದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.