ಭಾರತದಲ್ಲಿ ಸೌದಿ ಹೂಡಿಕೆ ಉತ್ತೇಜಿಸಲು ನಿರ್ಧಾರ
Team Udayavani, Dec 1, 2018, 6:00 AM IST
ಬ್ಯುನೋಸ್ ಏರ್ಸ್: ಅರ್ಜೆಂಟೀನಾದಲ್ಲಿ ನಡೆಯುತ್ತಿರುವ ಜಿ20 ಶೃಂಗದ ವೇಳೆ ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಭಾರತದಲ್ಲಿ ಇಂಧನ, ಮೂಲಸೌಕರ್ಯ ಮತ್ತು ರಕ್ಷಣಾ ವಲಯದಲ್ಲಿ ಹೂಡಿಕೆ ಹೆಚ್ಚಳ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ. ಬ್ಯುನೋಸ್ ಏರ್ಸ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗದ ಮಧ್ಯೆಯೇ ಇಬ್ಬರೂ ಮುಖಂಡರು ಭೇಟಿಯಾಗಿ, ಆರ್ಥಿಕತೆ, ಸಾಂಸ್ಕೃತಿಕ ಹಾಗೂ ಇಂಧನ ಕ್ಷೇತ್ರದಲ್ಲಿ ಒಪ್ಪಂದದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಭಾರತ ಮೂಲ ಸೌಕರ್ಯ ನಿಧಿಯಲ್ಲಿ ಆರಂಭಿಕ ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ರಾಜಕುಮಾರ ಸಲ್ಮಾನ್ ಹೇಳಿದ್ದಾರೆ.
ಇದೇ ವೇಳೆ ಭಾರತದ ಹೆಚ್ಚುತ್ತಿರುವ ತೈಲ ಬೇಡಿಕೆಯನ್ನು ಪೂರೈಸಲು ಸೌದಿ ಅರೇಬಿಯಾ ನೆರವಾಗಲಿದೆ ಎಂದು ಸಲ್ಮಾನ್ ಭರವಸೆ ನೀಡಿದ್ದಾರೆ. ಸೌದಿಯ ಅರಮ್‌ಕೋ ಕಂಪನಿಯು ಭಾರತದ ರಿಫೈ ನರಿಗಳಲ್ಲಿ ಹೂಡಿಕೆ ಮಾಡುವ ಪ್ರಸ್ತಾಪ ಮಾಡಲಾಗಿದೆ. ಅಲ್ಲದೆ ಭಾರತ ದಿಂದ ಕೃಷಿ ಉತ್ಪನ್ನಗಳನ್ನು ಸೌದಿ ಅರೇಬಿಯಾ ಆಮದು ಮಾಡಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ.
ಈ ಮಧ್ಯೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರೆಸ್ ಜೊತೆಗೆ ಪ್ರಧಾನಿ ಮೋದಿ ಮಾತು ಕತೆ ನಡೆಸಿದ್ದು, ಮುಂದಿನ ವಾರ ಪೋಲೆಂಡ್‌ನಲ್ಲಿ ನಡೆಯಲಿರುವ ಹವಾ ಮಾನ ವೈಪರೀತ್ಯ ತಡೆ ಸಮ್ಮೇಳನದಲ್ಲಿ ಭಾರತ ಸಕ್ರಿಯವಾಗಿ ಭಾಗವಹಿಸಲಿದೆ. ಅಲ್ಲದೆ, ಹವಾಮಾನ ವೈಪರೀತ್ಯ ತಡೆ ಗಟ್ಟುವ ನಿಟ್ಟಿನಲ್ಲಿ ಭಾರತ ತನ್ನ ಜವಾಬ್ದಾರಿ ಯನ್ನು ನಿರ್ವಹಿಸಲಿದೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಭಾರತದ ನೇತೃತ್ವದಲ್ಲಿ ರೂಪಿಸಲಾದ ಅಂತಾರಾಷ್ಟ್ರೀಯ ಸೌರ ಒಕ್ಕೂ ಟದ ಬಗ್ಗೆ ಗುಟೆರೆಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿ20 ಶೃಂಗದಲ್ಲಿ ಯೋಗ: ಜಿ20 ಶೃಂಗದಲ್ಲಿ ಯೋಗ ತರಗತಿಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ಮೋದಿ ಗುರುವಾರ ಇದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ವಿಶ್ವಕ್ಕೆ ಭಾರತವು ಯೋಗ ವನ್ನು ಉಡುಗೊರೆಯನ್ನಾಗಿ ನೀಡಿದೆ. ಯೋಗದಿಂದ ಮನಸು ಮತ್ತು ದೇಹ ಆರೋಗ್ಯಕರವಾಗಿರುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.